Advertisement

Team India: ಸೂರ್ಯಕುಮಾರ್ ಯಾದವ್ ಗೆ ಏಕದಿನದ ಚಿಂತೆ…

11:28 AM Aug 10, 2023 | Team Udayavani |

ಫ್ಲೋರಿಡಾ: ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಸೂರ್ಯ ಕುಮಾರ್‌ ಯಾದವ್‌, ತನ್ನ ಏಕದಿನ ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬುದಾಗಿ ಹೇಳಿದರು.

Advertisement

“ನನ್ನ ಏಕದಿನ ದಾಖಲೆ ಉತ್ತಮವಾಗಿಲ್ಲ. ಹೀಗೆ ಹೇಳಿಕೊಳ್ಳಲು ನಾನೇನೂ ನಾಚಿಕೆಪಡುತ್ತಿಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಷಯ. ನಾವು ಯಾವತ್ತೂ ನಮ್ಮ ಸಾಧನೆ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ ಹೊಂದಿರಬೇಕು. ಇದನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಬೇಕು” ಎಂಬುದಾಗಿ ಸೂರ್ಯ ಹೇಳಿದರು.

“ರೋಹಿತ್‌ ಮತ್ತು ರಾಹುಲ್‌ ಸರ್‌ ಯಾವತ್ತೂ ಏಕದಿನ ಪಂದ್ಯಗಳಲ್ಲಿ ನನ್ನ ವೈಫ‌ಲ್ಯದ ಕುರಿತು ಹೇಳುತ್ತಲೇ ಇರುತ್ತಾರೆ. ಈ ಕುರಿತು ಉಪಯುಕ್ತ ಟಿಪ್ಸ್‌ ಕೂಡ ನೀಡುತ್ತಾರೆ. ಸಹಜ ಶೈಲಿಯ ಆಟವನ್ನೇ ಆಡುವಂತೆ ಸೂಚಿಸಿದ್ದಾರೆ. ಇದನ್ನು ಪಾಲಿಸುವುದು ನನ್ನ ಕೈಯಲ್ಲೇ ಇದೆ” ಎಂದರು.

ವಿಂಡೀಸ್‌ ಎದುರಿನ 3 ಪಂದ್ಯಗಳಲ್ಲಿ ಸೂರ್ಯ ಕುಮಾರ್‌ ಗಳಿಸಿದ್ದು 19, 24 ಹಾಗೂ 35 ರನ್‌ ಮಾತ್ರ. ಈವರೆಗಿನ 26 ಏಕದಿನ ಪಂದ್ಯಗಳಲ್ಲಿ ಸೂರ್ಯ ಕೇವಲ 511 ರನ್‌ ಮಾಡಿದ್ದಾರೆ. ಸರಾಸರಿ 24.33. ಆದರೆ ಟಿ20ಯಲ್ಲಿ 45.6ರಷ್ಟು ಉತ್ತಮ ಸರಾಸರಿ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next