Advertisement

Team India: ಅಗರ್ಕರ್ ಗೆ 1 ಕೋಟಿ!; ಬಿಸಿಸಿಐ ನೀಡಿದ ₹125 ಕೋಟಿಯಲ್ಲಿ ಯಾರಿಗೆ ಎಷ್ಟು ಹಣ?

11:12 AM Jul 08, 2024 | Team Udayavani |

ಮುಂಬೈ: ಐಸಿಸಿ ಟಿ20 ವಿಶ್ವಕಪ್ 2024 ಗೆದ್ದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾಗೆ ಬಿಸಿಸಿಐ 125 ಕೋಟಿ ರೂ. ಗಳ ಬಹುಮಾನ ಘೋಷಣೆ ಮಾಡಿದೆ. 125 ಕೋಟಿ ರೂ ಎಲ್ಲವೂ 15 ಮಂದಿ ಆಟಗಾರರಿಗೆ ಮಾತ್ರ ಸಿಗುತ್ತಾ? ಅಥವಾ ಯಾರಿಗೆ ಎಷ್ಟು ಹಣ ಸಿಗಲಿದೆ ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಇದಕ್ಕೆ ಇದೀಗ ಉತ್ತರ ಸಿಕ್ಕಿದೆ.

Advertisement

ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಗೆ ಭಾರತ ತಂಡದ ಬಳಗವಾಗಿ 42 ಮಂದಿ ತೆರಳಿತ್ತು. 15 ಮಂದಿ ಆಟಗಾರರು, ನಾಲ್ವರು ಮೀಸಲು ಆಟಗಾರರು, ಕೋಚಿಂಗ್ ಸಿಬ್ಬಂದಿ ಹೀಗೆ ದೊಡ್ಡ ತಂಡವೇ ಟಿ20 ವಿಶ್ವಕಪ್ ಗೆ ಪ್ರಯಾಣಿಸಿತ್ತು. ಬಿಸಿಸಿಐ ಬಹುಮಾನ ರೂಪದಲ್ಲಿ ಘೋಷಿಸಿದ 125 ಕೋಟಿ ರೂ ಯಲ್ಲಿ ಎಲ್ಲರಿಗೂ ಪಾಲು ಸಿಗಲಿದೆ.

ಹಣ ಕೇವಲ ಆಟಗಾರರ ನಡುವೆ ಹಂಚಿಕೆಯಾಗುವುದಿಲ್ಲ, ಸಹಾಯಕ ಸಿಬ್ಬಂದಿ, ಮೀಸಲು ಮತ್ತು ಇತರರಿಗೆ ಸಹ ವಿತರಿಸಲಾಗುತ್ತದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ವಿಶ್ವಕಪ್ ನ ಭಾಗವಾಗಿದ್ದ 15 ಮಂದಿ ಆಟಗಾರರಿಗೆ ತಲಾ 5 ಕೋಟಿ ರೂ ಹಂಚಲಾಗುತ್ತದೆ. ಇಡೀ ಕೂಟದಲ್ಲಿ ಒಂದೇ ಒಂದು ಪಂದ್ಯವಾಡದ ಆಟಗಾರರಿಗೂ ಇಷ್ಟೇ ಮೊತ್ತದ ಹಣ ಸಿಗಲಿದೆ. ಅಲ್ಲದೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ 15 ಕೋಟಿ ರೂ ನೀಡಲಾಗುತ್ತದೆ ಎಂದು ವರದಿ ಹೇಳಿದೆ.

ಸಹಾಯಕ ಕೋಚ್ ಗಳಾದ ವಿಕ್ರಮ್ ರಾಥೋರ್, ಟಿ ದಿಲೀಪ್, ಪರಾಸ್ ಮಾಂಬ್ರೆ ಅವರಿಗೆ ತಲಾ 2.5 ಕೋಟಿ ರೂ ನೀಡಲಾಗುತ್ತದೆ. ತಲಾ 1 ಕೋಟಿ ರೂ ಅಜಿತ್ ಅಗರ್ಕರ್ ಸೇರಿ ಆಯ್ಕೆ ಸಮಿತಿ ಸದಸ್ಯರಿಗೆ ನೀಡಲಾಗುತ್ತದೆ.

Advertisement

ಸಹಾಯಕ ಸಿಬ್ಬಂದಿಗಳಲ್ಲಿ ಮೂವರು ಫಿಸಿಯೋಥೆರಪಿಸ್ಟ್‌ ಗಳು, ಮೂವರು ಥ್ರೋಡೌನ್ ಸ್ಪೆಷಲಿಸ್ಟ್ ಗಳು, ಇಬ್ಬರು ಮಸಾಜರ್ ಗಳು ಮತ್ತು ಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್ ಕೋಚ್ ತಲಾ 2 ಕೋಟಿ ರೂ. ಪಡೆಯಲಿದ್ದಾರೆ.

“ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಅವರು ಬಿಸಿಸಿಐನಿಂದ ಪಡೆಯುವ ಬಹುಮಾನದ ಮೊತ್ತದ ಬಗ್ಗೆ ತಿಳಿಸಲಾಗಿದೆ. ನಾವು ಎಲ್ಲರಿಗೂ ಇನ್ ವಾಯ್ಸ್ ಸಲ್ಲಿಸಲು ಕೇಳಿದ್ದೇವೆ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ತಂಡದೊಂದಿಗೆ ಪ್ರಯಾಣ ಬೆಳೆಸಿದ್ದ ನಾಲ್ವರು ಮೀಸಲು ಆಟಗಾರರಿಗೂ ಬಹುಮಾನ ಮೊತ್ತ ಸಿಗಲಿದೆ. ಶುಬ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹಮದ್, ಆವೇಶ್ ಖಾನ್ ಅವರೊಗೆ ತಲಾ ಒಂದು ಕೋಟಿ ರೂ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next