ಸಿಡ್ನಿ: ಮೂರನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 244 ರನ್ ಗೆ ಸರ್ವಪತನ ಕಂಡಿದೆ. ಇದರೊಂದಿಗೆ ಆಸೀಸ್ ಗೆ 94 ರನ್ ಗಳ ಉತ್ತಮ ಮುನ್ನಡೆ ಬಿಟ್ಟುಕೊಟ್ಟಿದೆ.
ಟೀಂ ಇಂಡಿಯಾ ಪರ ತಲಾ 50 ರನ್ ಬಾರಿಸಿದ ಗಿಲ್ ಮತ್ತು ಪೂಜಾರ ಸರ್ವಾಧಿಕ ಗಳಿಕೆ. ರಿಷಭ್ ಪಂತ್ 36 ರನ್ ಮತ್ತು ಜಡೇಜಾ 28 ಉಪಯುಕ್ತ ರನ್ ಕಲೆಹಾಕಿದರು.
ಎರಡು ವಿಕೆಟ್ ಗೆ 96 ರನ್ ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ ನಾಯಕ ಅಜಿಂಕ್ಯ ರಹಾನೆ ವಿಕೆಟ್ ಬೇಗನೇ ಕಳೆದುಕೊಂಡಿತು. ನಂತರ ಪೂಜಾರ- ಪಂತ್ ಅರ್ಧಶತಕದ ಜೊತೆಯಾಟ ನಡೆಸಿದರು. ಆದರೆ ಅವರಿಬ್ಬರೂ ಸತತ ಎಸೆತಗಳಲ್ಲಿ ಔಟಾದರು.
ರನ್ ಔಟ್ ಸಂಕಷ್ಟ: ಭಾರತ ಇನ್ನಿಂಗ್ಸ್ ನಲ್ಲಿ ಮೂವರು ರನ್ ಔಟ್ ಆಗಿ ತಂಡವನ್ನು ಸಂಕಷ್ಟಕ್ಕೆ ದೂಡಿದರು. ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ರನ್ ಔಟ್ ಗೆ ಬಲಿಯಾದರು.
ಇದನ್ನೂ ಓದಿ:ರೋಹಿತ್: ಆಸೀಸ್ ಎದುರು 100 ಸಿಕ್ಸರ್
ಆಸೀಸ್ ಪರ ಬಿಗು ದಾಳಿ ಸಂಘಟಿಸಿದ ಪ್ಯಾಟ್ ಕಮಿನ್ಸ್ ನಾಲ್ಕು ವಿಕೆಟ್ ಪಡೆದರೆ, ಹ್ಯಾಜಲ್ ವುಡ್ ಎರಡು ವಿಕೆಟ್, ಸ್ಟಾರ್ಕ್ ಒಂದು ವಿಕೆಟ್ ಪಡೆದರು.