ಇಂದೋರ್: ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡವು ಅಲ್ಪಮೊತ್ತಕ್ಕೆ ಆಲೌಟಾಗಿದೆ. ಆಸ್ಟ್ರೇಲಿಯಾದ ಫಿರ್ಕಿ (ಸ್ಪಿನ್) ಬೌಲರ್ ಗಳ ದಾಳಿಗೆ ನಲುಗಿದ ಭಾರತ ತಂಡವು 109 ರನ್ ಗಳಿಗೆ ಆಲೌಟಾಗಿದೆ.
ಇದನ್ನೂ ಓದಿ:ಅಧಿಕ ಅಂಕ ಪಡೆಯಲು ಒತ್ತಡದ ಆರೋಪ: ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿ ದುರಂತ ಅಂತ್ಯ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು 33.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ವಿರಾಟ್ ಕೊಹ್ಲಿ 22 ರನ್ ಗಳಿಸಿದರೆ, ಶುಭ್ಮನ್ ಗಿಲ್ 21 ರನ್, ಭರತ್ ಮತ್ತು ಉಮೇಶ್ ಯಾದವ್ ತಲಾ 17 ರನ್ ಮಾಡಿದರು.
ಆಸೀಸ್ ಸ್ಪಿನ್ ಬೌಲರ್ ಗಳಾದ ಮ್ಯಾಥ್ಯೂ ಕುಹ್ನೆಮನ್ ಐದು ವಿಕೆಟ್ ಕಿತ್ತರೆ, ನಥನ್ ಲಯಾನ್ ಮೂರು ವಿಕೆಟ್ ಟಾಡ್ ಮರ್ಫಿ ಒಂದು ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್ ರನೌಟಾದರು.