Advertisement

Team India; ಮುಂಬಯಿ ಟೆಸ್ಟ್‌ಗೆ ಮುನ್ನ 2 ದಿನ ಕಡ್ಡಾಯ ಅಭ್ಯಾಸ!

12:07 AM Oct 28, 2024 | Team Udayavani |

ಮುಂಬಯಿ: ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ ಟೆಸ್ಟ್‌ ಸರಣಿ ಸೋತ ಬೆನ್ನಲ್ಲೇ ತಂಡದ ವಿರುದ್ಧ ಬಿಸಿಸಿಐ ಕಠಿನ ಕ್ರಮಕ್ಕೆ ಮುಂದಾಗಿದೆ. 3ನೇ ಟೆಸ್ಟ್‌ಗಾಗಿ ವಾಂಖೇಡೆಯಲ್ಲಿ ಐಚ್ಛಿಕ ಅಭ್ಯಾಸದ ಆಯ್ಕೆಯನ್ನು ರದ್ದು ಮಾಡಿರುವ ಬಿಸಿಸಿಐ, ಆಟಗಾರರು ಕಡ್ಡಾಯವಾಗಿ ಅ. 30, 31ರಂದು ತರಬೇತಿಗೆ ಹಾಜರಾಗಲೇಬೇಕೆಂದು ಸೂಚಿಸಿದೆ.

Advertisement

ಬಿಸಿಸಿಐ ನಿಯಮಗಳ ಪ್ರಕಾರ, ಟೆಸ್ಟ್‌ ಪಂದ್ಯಕ್ಕೂ ಮುನ್ನ ಆಟಗಾರರು ಒಂದು ದಿನ ಮುಂಚಿತವಾಗಿಯೇ ಬಿಸಿಸಿಐಗೆ ತಿಳಿಸಿ, ಅಭ್ಯಾಸದಿಂದ ದೂರ ಉಳಿಯಬಹುದಿತ್ತು. ಇದರಿಂದ ಪಂದ್ಯಕ್ಕೆ ಸಿದ್ಧವಾಗಲು ಆಟಗಾರರಿಗೆ ಸುಲಭವಾಗುತ್ತಿತ್ತು. ಮುಂಬಯಿ ಪಂದ್ಯದ ವೇಳೆ ಈ ಅವಕಾಶ ನೀಡದಿರುವುದು, ಸರಣಿ ಸೋಲನ್ನು ಮಂಡಳಿ ಗಂಭೀರವಾಗಿ ಪರಿಗಣಿಸಿರುವುದರ ಸೂಚನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next