Advertisement

Mohammed Shami ಗೈರು ಭಾರತಕ್ಕೆ ದೊಡ್ಡ ಹೊಡೆತ ಎಂದ ಆಸೀಸ್‌ ಕೋಚ್‌: ಕ್ಷಮೆ ಯಾಚಿಸಿದ ಶಮಿ

12:17 AM Oct 28, 2024 | Team Udayavani |

ಮೆಲ್ಬರ್ನ್: ಪ್ರಧಾನ ವೇಗಿ ಮೊಹಮ್ಮದ್‌ ಶಮಿ ಮುಂಬರುವ ಬೋರ್ಡರ್‌-ಗಾವಸ್ಕರ್‌ ಸರಣಿಯಲ್ಲಿ ಆಡದೇ ಇರುವುದು ಭಾರತಕ್ಕೆ ಎದುರಾಗಿರುವ ದೊಡ್ಡ ಹೊಡೆತ ಎಂಬುದಾಗಿ ಆಸ್ಟ್ರೇಲಿಯ ತಂಡದ ಕೋಚ್‌ ಆ್ಯಂಡ್ರೂé ಮೆಕ್‌ಡೊನಾಲ್ಡ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ಮೊಹಮ್ಮದ್‌ ಶಮಿ ಗೈರು ಭಾರತ ತಂಡಕ್ಕೆ ಖಂಡಿತವಾಗಿಯೂ ದೊಡ್ಡ ನಷ್ಟ. 2018ರ ಪ್ರವಾಸದ ವೇಳೆ ಭಾರತದ ಮೇಲುಗೈಯಲ್ಲಿ ಶಮಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರು ನಮ್ಮ ಬ್ಯಾಟರ್‌ಗಳಿಗೆ ತೊಡರುಗಾಲಾಗುವ ಎಲ್ಲ ಸಾಧ್ಯತೆ ಇತ್ತು. ಅವರ ಲೈನ್‌-ಲೆಂತ್‌, ಬೌಲಿಂಗ್‌ ಕೌಶಲವೆಲ್ಲ ಉನ್ನತ ಮಟ್ಟದಲ್ಲಿತ್ತು’ ಎಂಬುದಾಗಿ ಮೆಕ್‌ಡೊನಾಲ್ಡ್‌ ಹೇಳಿದರು.

ಕ್ಷಮೆ ಯಾಚಿಸಿದ ಶಮಿ
ಈ ನಡುವೆ, ಆಸ್ಟ್ರೇಲಿಯ ಪ್ರವಾಸದ ಹೊತ್ತಿಗೆ ಫಿಟ್‌ನೆಸ್‌ಗೆ ಮರಳಲು ಸಾಧ್ಯವಾಗದ ಕಾರಣಕ್ಕೆ ಶಮಿ ಅವರು ಬಿಸಿಸಿಐ ಹಾಗೂ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next