Advertisement

Team India: ಟೆಸ್ಟ್ ನಲ್ಲಿ 1000 ರನ್; ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್

04:19 PM Mar 07, 2024 | Team Udayavani |

ಧರ್ಮಶಾಲಾ: ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಸದ್ಯ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದ್ವಿಶತಕವನ್ನೂ ಹೊಡೆದಿರುವ ಜೈಸ್ವಾಲ್ ಕೂಟದ ಅತಿ ಹೆಚ್ಚಿನ ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.

Advertisement

ಧರ್ಮಶಾಲಾದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಯಶಸ್ವಿ ಜೈಸ್ವಾಲ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 1000 ರನ್ ಗಡಿ ದಾಟಿದರು. ಅಲ್ಲದೆ ಅತಿ ವೇಗವಾಗಿ ಸಹಸ್ರ ರನ್ ಗಳಿಸಿದ ಎರಡನೇ ಭಾರತೀಯ ಎಂಬ ಸಾಧನೆ ಮಾಡಿದರು.

ಇದೇ ವೇಳೆ ಯಶಸ್ವಿ ಜೈಸ್ವಾಲ್ ಅವರು ಹಲವರು ದಾಖಲೆಗಳನ್ನು ಬರೆದರು. ಅವುಗಳೆಂದರೆ

1000 ಟೆಸ್ಟ್ ರನ್‌ ಗಳನ್ನು ತಲುಪುವ ಸಮಯದಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ (ಭಾರತೀಯರು)

83.33 – ವಿನೋದ್ ಕಾಂಬ್ಳಿ

Advertisement

71.43 – ಚೇತೇಶ್ವರ ಪೂಜಾರ

71.43 – ಯಶಸ್ವಿ ಜೈಸ್ವಾಲ್

62.5 – ಸುನಿಲ್ ಗವಾಸ್ಕರ್

55.56 – ಮಯಾಂಕ್ ಅಗರ್ವಾಲ್

ಟೆಸ್ಟ್‌ ನಲ್ಲಿ 1000 ರನ್‌ಗಳನ್ನು ಪೂರೈಸಿದ ಅತ್ಯಂತ ಕಿರಿಯ ಭಾರತೀಯ

19 ವರ್ಷ, 217 ದಿನ – ಸಚಿನ್ ತೆಂಡೂಲ್ಕರ್

21 ವರ್ಷ, 27 ದಿನ – ಕಪಿಲ್ ದೇವ್

21 ವರ್ಷ, 197 ದಿನ – ರವಿಶಾಸ್ತ್ರಿ

22 ವರ್ಷ 70 ದಿನ – ಯಶಸ್ವಿ ಜೈಸ್ವಾಲ್

22 ವರ್ಷ 293 ದಿನ – ದಿಲೀಪ್ ವೆಂಗ್‌ಸರ್ಕರ್

ಚೊಚ್ಚಲ ಪಂದ್ಯದಿಂದ 1000 ಟೆಸ್ಟ್ ರನ್‌ಗಳನ್ನು ಪೂರೈಸಲು ತೆಗೆದುಕೊಂಡಿರುವ ಕಡಿಮೆ ದಿನಗಳು

166 – ಮೈಕೆಲ್ ಹಸ್ಸಿ

185 – ಐಡೆನ್ ಮಾರ್ಕ್ರಾಮ್

207 – ಆಡಮ್ ವೋಜಸ್

227 – ಆಂಡ್ರ್ಯೂ ಸ್ಟ್ರಾಸ್

239 – ಯಶಸ್ವಿ ಜೈಸ್ವಾಲ್

244 – ಹರ್ಬರ್ಟ್ ಸಟ್ಕ್ಲಿಫ್

ಭಾರತದ ದಾಖಲೆ ಈ ಹಿಂದೆ ರಾಹುಲ್ ದ್ರಾವಿಡ್ (299 ದಿನಗಳು) ಹೆಸರಿನಲ್ಲಿತ್ತು.

1000 ಟೆಸ್ಟ್ ರನ್‌ ಗಳಿಗೆ ಕಡಿಮೆ ಪಂದ್ಯಗಳು

7 – ಡಾನ್ ಬ್ರಾಡ್ಮನ್

9 – ಎವರ್ಟನ್ ವೀಕ್ಸ್

9 – ಹರ್ಬರ್ಟ್ ಸಟ್ಕ್ಲಿಫ್

9 – ಜಾರ್ಜ್ ಹೆಡ್ಲಿ

9 – ಯಶಸ್ವಿ ಜೈಸ್ವಾಲ್

ಈ ಹಿಂದೆ ಸುನಿಲ್ ಗವಾಸ್ಕರ್ ಮತ್ತು ಚೇತೇಶ್ವರ್ ಪೂಜಾರ (ತಲಾ 11 ಪಂದ್ಯ) ಭಾರತದ ದಾಖಲೆ ಹೊಂದಿದ್ದರು.

ಅತೀ ವೇಗವಾಗಿ 1000 ಟೆಸ್ಟ್ ರನ್‌ಗಳನ್ನು ಗಳಿಸಿದ ಭಾರತೀಯ (ಇನ್ನಿಂಗ್ಸ್ ಲೆಕ್ಕದಲ್ಲಿ)

14 – ವಿನೋದ್ ಕಾಂಬ್ಳಿ

16 – ಯಶಸ್ವಿ ಜೈಸ್ವಾಲ್

18 – ಚೇತೇಶ್ವರ ಪೂಜಾರ

19 – ಮಯಾಂಕ್ ಅಗರ್ವಾಲ್

21 – ಸುನಿಲ್ ಗವಾಸ್ಕರ್

Advertisement

Udayavani is now on Telegram. Click here to join our channel and stay updated with the latest news.

Next