Advertisement

ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

10:41 AM Dec 01, 2021 | Team Udayavani |

ದಾಂಡೇಲಿ : ನಗರದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಿ ಹೊರ ಬರುತ್ತಿದ್ದಂತೆಯೆ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ತಹಶೀಲ್ದಾರ್ ಕಚೇರಿಯ ಆವರಣದಲ್ಲೆ ಹೊಡೆದಾಟ ನಡೆದು, ಆನಂತರ ಪ್ರಕರಣ ದಾಖಲಾದ ಘಟನೆ ಸೋಮವಾರ ಸಂಜೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಗಾಂಧಿನಗರದ ನಿವಾಸಿ ಅನಿತಾ ಪ್ರಕಾಶ ಪಾಟೀಲ ಮತ್ತು ನಗರ ಸಭಾ ಸದಸ್ಯೆ ರುಕ್ಮಿಣಿ ಬಾಗಡೆಯವರ ನಡುವೆ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ವಿಚಾರಣೆಯಿತ್ತು. ಈ ವಿಚಾರಣೆ ಮುಗಿದು ಹೊರ ಬರುತ್ತಿದ್ದಂತೆಯೆ ಅನಿತಾ ಪ್ರಕಾಶ ಪಾಟೀಲ ಮತ್ತು ರುಕ್ಮಿಣಿ ಬಾಗಾಡೆಯವರ ಗುಂಪಿನ ನಡುವೆ ಮಾತಿನ ಚಕಮುಖಿ ನಡೆದಿದೆ.

ಇದಾದ ಬಳಿಕ ತಹಶೀಲ್ದಾರ್ ಕಚೇರಿಯ ಆವರಣದಲ್ಲೆ ಮಾತಿಗೆ ಮಾತು ಬೆಳೆದು ರುಕ್ಮಿಣಿ ಬಾಗಡೆಯವರ ಪುತ್ರ ಪ್ರದೀಪ ಬಾಗಡೆ ಎಂಬಾತನು ಅನಿತಾ ಪ್ರಕಾಶ ಪಾಟೀಲ ಅವರ ಮೇಲೆ ಹಲ್ಲೆ ನಡೆಸಿದ್ದಾನೆಂದು, ಇದನ್ನು ಬಿಡಿಸಲು ಹೋದ ಮಲಪ್ರಭಾ ಮತ್ತು ರಾಜೇಶ ಗಿರಿಯವರಿಗೂ ಹಲ್ಲೆ ಮಾಡಲಾಗಿದ್ದು,

ಈ ಸಂದರ್ಭದಲ್ಲಿ ಸಂಜಯ ಬಾಗಡೆಯವರು ರಾಜೇಶ ಗಿರಿಯವರ ತಲೆಗೆ ಹೆಲ್ಮೇಟಿನಿಂದ ಹೊಡೆದು ರಕ್ತ ಬರುವಂತೆ ಗಾಯಗೊಳಿಸಿದ್ದಾರೆ ಹಾಗೂ ರುಕ್ಮಿಣಿ ಬಾಗಡೆಯವರು ಚಪ್ಪಲಿಯಲ್ಲಿ ಮಲಪ್ರಭಾರವರಿಗೆ ಹೊಡೆದು ಅವಮಾನಿಸಿದ್ದಾರೆಂದು ಮತ್ತು ಅವ್ಯಾಚ ಶಬ್ದಗಳಿಂದ ಬೈಯ್ದಿದ್ದಾರೆಂದು ಈ ಬಗ್ಗೆ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಅನಿತಾ ಪ್ರಕಾಶ ಪಾಟೀಲ ಅವರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇಲ್ಲಿ ಗಾಯಗೊಂಡಿದ್ದ ರಾಜೇಶ ಗಿರಿಯವರಿಗೆ, ಅನಿತಾ ಪ್ರಕಾಶ ಪಾಟೀಲ ಮತ್ತು ಮಲಪ್ರಭಾರವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Advertisement

ಪ್ರತಿದೂರು ನೀಡಿದ ರುಕ್ಮಿಣಿ ಬಾಗಾಡೆ:

ನಗರ ಸಭಾ ಸದಸ್ಯೆ ರುಕ್ಮಿಣಿ ಬಾಗಾಡೆಯವರು ಸಹ ನಗರ ಠಾಣೆಯಲ್ಲಿ ದೂರಿಗೆ ಪ್ರತಿ ದೂರು ನೀಡಿದ್ದು, ಅವರು ನೀಡಿದ್ದ ದೂರಿನಲ್ಲಿ ತಾನು, ತನ್ನ ಪತಿ ಸಂಜಯ್ ಬಾಗಾಡೆ ಮತ್ತು ಪ್ರದೀಪ ಬಾಗಡೆ ಜೊತೆ ಪೊಲೀಸ್ ಠಾಣೆಗೆ ಹೋಗಲು ಬರುತ್ತಿದ್ದಾಗ ಮಲಪ್ರಭಾ ರವರು ನನ್ನ ತಲೆಕೂದಲನ್ನು ಹಿಡಿದು ಎಳೆದಾಡಿದ್ದಾರೆ.

ಅನಿತಾ ಪ್ರಕಾಶ ಪಾಟೀಲ ಅವರು ಚಪ್ಪಲಿಯಿಂದ ಹೊಡೆದಿದ್ದಾರೆ. ರಾಜೇಶ ಅವರು ಅವ್ಯಾಚ ಶಬ್ದಗಳಿಂದ ಬೈಯ್ದು ಎಳೆದಾಡಿ ಕುತ್ತಿಗೆಯನ್ನು ಹಿಡಿದು ಹೊಡೆದಿದ್ದಾರೆ. ಹಾಗೂ ಹೇಮಂತಪುರಿ ಮತ್ತು ಪರಶುರಾಮ ಪುರಿ ಅವರುಗಳು ಸಂಜಯ್ ಬಾಗಡೆ ಹಾಗೂ ಪ್ರದೀಪ ಬಾಗಡೆಗೆ ಹೊಡೆದು ಜಾತಿ ನಿಂದನೆಯ ಜೊತೆಗೆ ಕೊಲೆ ಬೆದರಿಕೆಯೊಡ್ಡಿದ್ದಾರೆಂದು ಈ ಬಗ್ಗೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ರುಕ್ಮಿಣಿ ಬಾಗಡೆ, ಪ್ರದೀಪ ಬಾಗಡೆಯವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಒಟ್ಟಿನಲ್ಲಿ ದೂರಿಗೆ ಪ್ರತಿದೂರು ದಾಖಲಾಗಿದ್ದು, ಘಟನೆಗೆ ಸಂಬಂಧಪಟ್ಟಂತೆ ತಹಶೀಲ್ದಾರ್ ಕಚೇರಿಯ ಸಿಸಿ ಕ್ಯಾಮೇರಾದಲ್ಲಿ ಕೆಲ ದೃಶ್ಯಗಳು ಸೆರೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಲೆ ಎಚ್ಚೆತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸದೇ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಕೋಪ ತಾರಕಕ್ಕೇರಿ ಅನಾಹುತ ನಡೆದರೂ ಅಚ್ಚರಿ ಪಡಬೇಕಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next