Advertisement
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಂಸದ ತೇಜಸ್ವಿ ಸೂರ್ಯ, ಪಿ.ರಾಜೀವ್, ಅರವಿಂದ ಬೆಲ್ಲದ್, ವಿವೇಕ್ ರೆಡ್ಡಿ, ಲೋಕೇಶ್ ಅವರನ್ನೊಳಗೊಂಡ ಸಂಚಾಲನಾ ಸಮಿತಿಯು ರಾಜ್ಯದ್ಯಂತ ಪ್ರವಾಸ ನಡೆಸಲಿದೆ. ಇದೇ ರೀತಿ ಸ್ಥಳೀಯವಾಗಿ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲೂ ಸಮಿತಿ ರಚಿಸಿ ಅಭಿಯಾನವನ್ನು ಯಶಸ್ಸುಗೊಳಿಸಲು ಉದ್ದೇಶಿಸಿದೆ.ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಲೋಕಸಭಾ ಕ್ಷೇತ್ರಗಳ ‘ಮತದಾರರ ಚೇತನ ಮಹಾ ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, 2009ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಸುಮಾರು ಶೇ.12 ರಷ್ಟು ಯುವ ಮತದಾರರು ಹೆಚ್ಚುವರಿಯಾಗಿ ಎನ್‌ಡಿಎ ಪರವಾಗಿ ಮತದಾನ ಮಾಡಿದ್ದು, 2014 ಮತ್ತು 2019ರ ಲೋಕಸಭಾ ಚುನಾವಣೆಗಳು ದೇಶಕ್ಕೆ ಸ್ಥಿರ ಸರ್ಕಾರವನ್ನು ನೀಡಿವೆ ಎಂದರು.
Related Articles
50 ಕೋಟಿ ಬಡಜನರ ಜನ್‌ಧನ್ ಬ್ಯಾಂಕ್ ಖಾತೆ ತೆರೆಯಲು ಮತದಾರರು ನೆರವಾಗಿ¨ªಾರೆ. 29 ಲಕ್ಷ ಡಿಬಿಟಿ ಹಣ ವರ್ಗಾವಣೆ ಆಗಿದೆ. 4.5 ಕೋಟಿ ಬಡಜನರಿಗೆ ಮನೆಗಳ ನಿರ್ಮಾಣವಾಗಿದೆ. ದೇಶದ ಹಳ್ಳಿಗಳಲ್ಲಿ ಸ್ವತ್ಛ ಭಾರತ್ ಅಡಿಯಲ್ಲಿ 11 ಕೋಟಿ ಶೌಚಾಲಯ ನಿರ್ಮಾಣ ಮಾಡಿಸಲು ಮತದಾರರು ತಮ್ಮ ಮತದ ಮೂಲಕ ಅವಕಾಶ ಕೊಟ್ಟಿ¨ªಾರೆ. 23 ಕೋಟಿ ಬಡ ಕುಟುಂಬಗಳಿಗೆ ಆಯುಷ್ಮಾನ್ ವಿಮೆ ಲಭಿಸಿದೆ. 20 ಕೋಟಿ ಎಸ್ಸಿ, ಎಸ್ಟಿ, ಒಬಿಸಿ ಮಹಿಳೆಯರಿಗೆ ಮುದ್ರಾ ಯೋಜನೆಯಡಿ ಸಾಲ ಲಭಿಸಿದೆ. ಒಂದು ಮತದ ಫಲವಾಗಿ ಭಾರತ ಚಂದ್ರಯಾನ ಮಾಡಿ ದೇಶದ, ವಿಶ್ವದ ದಕ್ಷಿಣ ಧ್ರುವಕ್ಕೆ ತೆರಳಿದ ಮೊದಲ ದೇಶ ಎಂಬ ಕೀರ್ತಿಯನ್ನು ತನ್ನದಾಗಿಸಿಕೊಂಡಿದೆ. ಪಾಕಿಸ್ತಾನದ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಶಕ್ತಿ ದೇಶಕ್ಕೆ ಸಿಕ್ಕಿದೆ. ನೂರಾರು ವರ್ಷಗಳಿಂದ ಜನರು ಕಾಯುತ್ತಿದ್ದ ರಾಮಮಂದಿರದ ನಿರ್ಮಾಣ ಆಗಿದೆ. ಆರ್ಟಿಕಲ್ 370 ಕಿತ್ತು ಹಾಕುವ ಮತ್ತು ಭಾರತ ಸಂವಿಧಾನವನ್ನು ಜಮ್ಮುಕಾಶ್ಮೀರಕ್ಕೆ ಅನುಷ್ಠಾನಕ್ಕೆ ತರುವ ಕೆಲಸ ಮಾಡಲಾಗಿದೆ. ಈ ಅಭಿವೃದ್ಧಿಗೆ ದೇಶದ ಮತದಾರರು ಕಾರಣ. ಸದೃಢ ಸರಕಾರ ನೀಡಿದ ಮತದಾರರನ್ನು ಅಭಿನಂದಿಸುವುದಾಗಿ ತಿಳಿಸಿದರು.
Advertisement