ನಮಗೆಲ್ಲ ಶಿಕ್ಷಕರೆಂದರೆ ಭಯವೇ ಹೆಚ್ಚು. ಆದರೆ ಆ ಭಯದಲ್ಲಿಯೂ ಗೌರವ-ಪ್ರೀತಿ. ಅವರು ಹೇಳಿಕೊಟ್ಟ ತರಗತಿಯ ಪಾಠ ಮಾತ್ರವಲ್ಲ, ಜೀವನಪಾಠ ಕೂಡ ನಮಗೆ ಹೆಚ್ಚು ಹಿತವಾಗುತ್ತಿತ್ತು. ನನ್ನ ಸರಸ್ವತಿ ಶಾಲೆಯ ಮುಖ್ಯೋಪಾಧ್ಯಾಯ ಸಂಜೀವ ಮೇಸ್ಟ್ರೆ ಮತ್ತು ಅಧ್ಯಾ ಪಕ ಗೋಪಾಲ ಮೇಸ್ಟ್ರೆ ನನ್ನ ಮೇಲೆಹೆಚ್ಚು ಪ್ರಭಾವ ಬೀರಿದ್ದಾರೆ ಎನ್ನು ತ್ತಾರೆ ಉಡುಪಿಯ ಹೊಟೇಲ್ ಉದ್ಯಮಿ ರಮಾನಂದ ಕೋಟ್ಯಾನ್.
Advertisement
ಈ ಇಬ್ಬರು ಶಿಕ್ಷಕರೂ ತರ ಗತಿಯ ನಾಲ್ಕು ಗೋಡೆಗಳ ಒಳಗೆ ಮಾತ್ರವಲ್ಲದೆ ಹೊರಗೂ ಬೇಕಾಗು ವಂಥ ಪಾಠ ನೀಡಿದ್ದಾರಂತೆ. ತರ ಗತಿಯಲ್ಲಿ ಕತೆಯ ಮೂಲಕವೇ ನಮ್ಮನ್ನು ಸೆಳೆಯುತ್ತಿದ್ದರು. ಶಿಸ್ತಿಗೆ ಹೆಚ್ಚು ಪ್ರಾಧಾನ್ಯ ಅವರದು. ನಾನು ತುಂಬಾ ಬುದ್ಧಿವಂತ ಹುಡುಗ ನೇನಲ್ಲ. ಆದರೂ ಹತ್ತಿರ ಕರೆದು ಪ್ರೀತಿಯಿಂದ ಹೇಳಿಕೊಡುತ್ತಿದ್ದರು. ಸಮಾಜದಲ್ಲಿ ಮುಂದೆ ಬಂದು ಗುರುತಿಸಿಕೊಳ್ಳುವುದಕ್ಕೆ ಛಲ ಬೇಕು, ಜನರ ಪ್ರೀತಿ ಗಳಿಸಬೇಕು ಎಂದು ಹಲವಾರು ಬಾರಿ ಹೇಳಿಕೊಟ್ಟಿದ್ದರು. ಆಗ ಅದು ಅಷ್ಟಾಗಿಅರ್ಥವಾಗುತ್ತಿರಲಿಲ್ಲ. ಆದರೆ ನಾವು ಶಾಲೆ ಬಿಟ್ಟು ಸಮಾಜ ದೊಂದಿಗೆ ಬೆರೆಯಲು ಆರಂಭಿಸಿದಾಗ ಒಂದೊಂದೇ ಹಿತ ಮಾತುಗಳು ನೆನಪಿಗೆ ಬರುತ್ತಿದ್ದವು – ಕೋಟ್ಯಾನ್ ಸ್ಮರಿಸಿಕೊಳ್ಳುತ್ತಾರೆ.