ಅದರಲ್ಲಿ ಈತನಿಗೆ ಕನ್ನಡ ಬರುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
Advertisement
ತನ್ನಿಂದಾಗಿ ಹಲವು ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಹುದು ಎಂಬ ಪಾಪ ಪ್ರಜ್ಞೆಯೇ ಇಲ್ಲದ ಆತ “ಇದು ನನ್ನ ಹಕ್ಕು’ ಎನ್ನುತ್ತಿದ್ದಾನೆ. ಸರಿ.
Related Articles
Advertisement
ರಾಜಕೀಯದ ಮಂದಿಗೆ ಅಸಕ್ತಿಯೇ ಇಲ್ಲಈಗ ಮಂಜೇಶ್ವರ ಉಪಚುನಾವಣೆ ನಡೆ ಯುತ್ತಿದೆ. ಇಂತಹ ಸೂಕ್ಷ¾ ಸಂದರ್ಭದಲ್ಲೂ ಸರಕಾರ ಕನ್ನಡ ವಿದ್ಯಾರ್ಥಿಗಳಿಗೆ ಬೋಧಿಸಲು ಕನ್ನಡ ಬಾರದ ಶಿಕ್ಷಕ ರನ್ನು ನೇಮಿಸುತ್ತಿದೆಯೆಂದರೆ ಆಡಳಿತ ಪಕ್ಷಕ್ಕೆ ಕನ್ನಡಿಗರ ಮತಗಳು ಬೇಕಾಗಿಲ್ಲ ಎಂದು ಅರ್ಥ. ಕನ್ನಡ ವಿದ್ಯಾರ್ಥಿ ಉದ್ಯೋಗಾರ್ಥಿ ಜನಸಾಮಾನ್ಯರ ಸಮಸ್ಯೆ ಗಳನ್ನು ಚರ್ಚಿಸಲೋಸುಗ ಸಂಘಟಿಸಿದ ಅಭ್ಯರ್ಥಿಗಳೊಂದಿಗೆ ಸಂವಾದ ಕಾರ್ಯ ಕ್ರಮಕ್ಕೂ ಮುಖ್ಯ ರಾಜಕೀಯ ಪಕ್ಷದ ಅಭ್ಯರ್ಥಿಗಳು ಹಾಜರಾಗಲಿಲ್ಲ. ಒಂದು ಪಕ್ಷವನ್ನು ಬಿಟ್ಟರೆ ಉಳಿದ ಪಕ್ಷಗಳು ತಮ್ಮ ಪ್ರತಿನಿಧಿಯನ್ನೂ ಕಳುಹಿಸಲಿಲ್ಲ. ಹೋಗಲಿ ನಿಮ್ಮ ಸಮಸ್ಯೆಗಳೇನು ಎಂದು ಕೇಳುವ ಸಾಮಾನ್ಯ ಸೌಜನ್ಯವನ್ನೂ ತೋರಿಸಲಿಲ್ಲ. ಕನ್ನಡ ಶಾಲೆಗಳಲ್ಲಿ ಕನ್ನಡ ಅರಿಯದ ಶಿಕ್ಷಕರ ನೇಮಕದಿಂದ ಕನ್ನಡ ತಿಳಿದ ಸ್ಥಳೀಯ ಅರ್ಹ ಉದೋÂಗಾರ್ಥಿಗಳಿಗೆ ನಷ್ಟವಾಗಿದೆ. ಇದಕ್ಕಿಂತ ಹೆಚ್ಚಾಗಿ ಅನೇಕ ಮಂದಿ ಕನ್ನಡ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ನೆಲೆಸಿದೆ. ಒಂದು ಪಕ್ಷದ ಜಿಲ್ಲಾಧ್ಯಕ್ಷರನ್ನು ಬಿಟ್ಟರೆ ಉಳಿದ ಪಕ್ಷಗಳ ಜಿಲ್ಲಾ ಮತ್ತು ರಾಜ್ಯಮಟ್ಟದ ನಾಯಕರು ಇಂತಹ ಅನ್ಯಾಯವನ್ನು ಖಂಡಿಸಲೂ ಇಲ್ಲ!
ಆಡಳಿತ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಬಹುಭಾಷಾ ಪಂಡಿತರು. ಸ್ಥಳೀಯ ಸಮಸ್ಯೆಗಳನ್ನು ಬಲ್ಲವರು. ಮಿಗಿಲಾಗಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಉದ್ಯೋಗವನ್ನು ಪಡೆದು ಕನ್ನಡ ಮಕ್ಕಳಿಗೆ ಬೋಧಿಸಿದ ಅನುಭವಿ ಶಿಕ್ಷಕರು. ಇಂತಹವರಿಗೆ ಕನ್ನಡ ಶಾಲೆಗಳಿಗೆ ಕನ್ನಡ ಅರಿಯದ ಶಿಕ್ಷಕರ ನೇಮಕವೆಂಬುದು ಎಂತಹ ಗಂಭೀರ ಸಮಸ್ಯೆ ಎಂಬುದು ಅರ್ಥವಾಗಬೇಕಿತ್ತು. ತಮ್ಮದೇ ಪಕ್ಷದ ಸರಕಾರ ಆಡಳಿತದಲ್ಲಿರುವಾಗ ಈ ಸಮಸ್ಯೆಗೆ ಪರಿಹಾರ ರೂಪಿಸುವ ಕಾಳಜಿ ತೋರಿಸಬೇಕಿತ್ತು. ಅದರಿಂದ ಇವರಿಗೆ ಒಳ್ಳೆಯ ಹೆಸರು ಬರುತ್ತಿತ್ತು. ಆದರೆ ಶಿಕ್ಷಕರನ್ನು ಆಯ್ಕೆ ಮಾಡಿದ್ದು ಕೇರಳ ಪಿ.ಎಸ್.ಸಿ, ಕೇರಳ ಸರಕಾರವಲ್ಲ ಎಂದು ತಮ್ಮ ಹೊಣೆಗಾರಿಕೆಯನ್ನು ಜಾರಿಸಿಕೊಳ್ಳುತ್ತಿರುವ ಆಡಳಿತ ಪಕ್ಷದವರು ಪಿ.ಎಸ್.ಸಿ. ಚೆಯರ್ ಮನ್ನರೂ ಆಯ್ಕೆ ಸಮಿತಿಯ ಅಧ್ಯಕ್ಷರೂ ತಮ್ಮ ಪಕ್ಷದವರೇ ಎಂಬುದನ್ನು ಮರೆಯುತ್ತಾರೆ. ಹೋಗಲಿ, ತಪ್ಪು ಯಾರಿಂದಲೋ ಹೇಗೋ ನಡೆದುಹೋಗಿದೆ. ಇದರ ವಿಶ್ಲೇಷಣೆ ನಡೆಸಿ ಯಾರನ್ನು ಕೂಡ ಶಿಕ್ಷಿಸುವ ಮಾತು ಬೇಡ. ಆದರೆ ಕನ್ನಡ ವಿದಾ Âರ್ಥಿಗಳನ್ನು ರಕ್ಷಿಸುವ ಸಾಧ್ಯತೆಗಳನ್ನು ಚರ್ಚಿಸಬಹುದಲ್ಲವೆ? ಪೈವಳಿಕೆಯಲ್ಲಿ ಕನ್ನಡ ಬಾರದ ಶಿಕ್ಷಕರ ನೇಮಕಾತಿ ನಡೆದಾಗ ಅನರ್ಹ ಶಿಕ್ಷಕರ ಪರ ವಾದಿಸಲು ಆಡಳಿತ ಪಕ್ಷಕ್ಕೆ ಸೇರಿದ ಬೇರೊಬ್ಬರು ಕನ್ನಡ ಶಿಕ್ಷಕರೊಬ್ಬರು ಹೋಗಿದ್ದರೆಂಬುದನ್ನು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಇದು ರಾಜಕಾರಣಿಗಳ ಶೈಲಿ. ಅವರಿಗೆ ಕನ್ನಡ, ತುಳು, ತುಳುನಾಡು ಎಂಬ ಪದಗಳೆಲ್ಲ ಭಾಷೆ, ಜಾತಿ ಸಂಬಂಧ ಭಾವನೆಗಳನ್ನು ಉದ್ರೇಕಿಸಿ ಮತ ಪಡೆಯುವ ನಾಟಕವೇ ಹೊರತು ಕನ್ನಡ ಕಲಿತ ಕನ್ನಡ ತುಳು ಮಲಯಾಳಿ ವಿದ್ಯಾರ್ಥಿ ಉದ್ಯೋಗಾರ್ಥಿಗಳ ಹಿತಾಸಕ್ತಿ ಬೇಕಿಲ್ಲ. ಉದುಮ ಶಾಸಕರೊಬ್ಬರನ್ನು ಬಿಟ್ಟರೆ ಆಡಳಿತಪಕ್ಷದ ಯಾವುದೇ ನಾಯಕರು ಕನ್ನಡ ಶಾಲೆಗಳಿಗೆ ಕನ್ನಡ ಅರಿಯದ ಶಿಕ್ಷಕರ ನೇಮಕವನ್ನು ಖಂಡಿಸಿಲ್ಲ. ಕರ್ನಾಟಕದ ಮುಖ್ಯಮಂತ್ರಿಗಳು ಫೋನ್ ಮಾಡಿದರು
ಕಾಸರಗೋಡಿನ ಕನ್ನಡಿಗರ ಪ್ರಯತ್ನದ ಫಲವಾಗಿ ಕರ್ನಾಟಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಪ್ರೊ|ಎಸ್.ಜಿ.ಸಿದ್ದರಾಮಯ್ಯನವರು ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವಂತೆ ಕೇರಳ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದರು. ಅಲ್ಲದೆ ಸಾûಾತ್ ಈಗಿನ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ದೂರವಾಣಿ ಕರೆ ಮಾಡಿ ಕನ್ನಡ ಶಾಲೆಗಳಿಗೆ ಕನ್ನಡ ತಿಳಿದ ಶಿಕ್ಷಕರನ್ನೇ ನೇಮಿಸುವಂತೆ ಆಗ್ರಹಿಸಿದರು. ಆಗ ಕೇರಳ ಮುಖ್ಯಮಂತ್ರಿಯವರು ತನಗೆ ಈ ಸಮಸ್ಯೆಯ ಬಗ್ಗೆ ಮಾಹಿತಿಯಿಲ್ಲ, ತಿಳಿದು ಸೂಕ್ತ ಕ್ರಮ ಕೈಗೊಳ್ಳುವೆ ಎಂದರೆನ್ನಲಾಗಿದೆ. ಕರ್ನಾಟಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೇರಳ ಶಿಕ್ಷಣ ಸಚಿವರಿಗೆ ಪತ್ರ ಬರೆದು ಕರ್ನಾಟಕದಲ್ಲಿ ಅಧಿಕೃತವಾಗಿ ಭಾಷಾ ಅಲ್ಪಸಂಖ್ಯಾಕರಾದ ಮರಾಠಿ, ತೆಲುಗು, ತಮಿಳು, ಉರ್ದು ವಿದ್ಯಾರ್ಥಿಗಳು ಕಲಿಯುವ ಶಾಲೆಗಳಿಗೆ ಆಯಾ ಭಾಷೆಯನ್ನು ಅರಿತ ಶಿಕ್ಷಕರನ್ನೇ ನೇಮಿಸಲಾಗುತ್ತಿದೆ ಎಂಬುದನ್ನು ಉಲ್ಲೇಖೀಸಿ ಕಾಸರಗೋಡಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಉದುಮ ಶಾಲೆಯ ಕನ್ನಡಿಗ ಪೋಷಕರು ಸಾûಾತ್ ಕೇರಳ ಮುಖ್ಯಮಂತ್ರಿಯವರನ್ನೇ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಕನ್ನಡ ಮಾಧ್ಯಮಗಳು ಹಾಗೂ ಪತ್ರಕರ್ತರು ಈ ವಿಷಯದಲ್ಲಿ ತೋರಿಸಿದ ಕಾಳಜಿ ಪ್ರಶಂಸನೀಯ
ಕೇರಳದ ಆಡಳಿತ ಪಕ್ಷದ ಸ್ಥಳೀಯ ಮುಖಂಡರು, ಆಡಳಿತ ಪಕ್ಷದ ಅಧ್ಯಾಪಕ ಸಂಘಟನೆಯ ಪ್ರತಿನಿಧಿಗಳು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಬಗ್ಗೆ ಒಂದಷ್ಟು ಆಸಕ್ತಿ ವಹಿಸಿದ್ದರೆ ಈ ಸಮಸ್ಯೆ ಬಗೆಹರಿಯಬಹುದಿತ್ತು. ಈ ಸಮಸ್ಯೆ ಎಷ್ಟು ಗಂಭೀರವೆನ್ನುವುದನ್ನು ಹಾಗೂ ಇದನ್ನು ಬಗೆಹರಿಸುವ ಮಾರ್ಗವನ್ನು ಮುಖ್ಯಮಂತ್ರಿಯವರಿಗೆ ತಿಳಿಯಪಡಿಸಬೇಕಿತ್ತು. ಆದರೆ ಕನ್ನಡದ ಮಾತೆತ್ತಿದರೆ ಕಾಸರಗೋಡಿನ ಕನ್ನಡ ಆದ್ಯಾಪಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿರುವುದನ್ನು ಇವರು ಬೊಟ್ಟುಮಾಡಿ ತೋರಿಸುತ್ತಾರೆ. ಆಯ್ಕೆ ಸಮಿತಿಯಲ್ಲಿದ್ದ ಕನ್ನಡಿಗ ಭಾಷಾತಜ್ಞರ ನಿಷ್ಕಿÅಯತೆಯನ್ನು ಎತ್ತಿತೋರಿಸುತ್ತಾರೆ. ಈ ವಿಷಯ ನೂರಕ್ಕೆ ನೂರರಷ್ಟು ಸರಿಯಾಗಿದೆ. ಆದರೆ ಕೆಲವರ ತಪ್ಪಿಗೆ ಬಡ ವಿದ್ಯಾರ್ಥಿಗಳು ಬಲಿಯಾಗಬೇಕೆ? ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದವರ ಸೇರಿಸುತ್ತಿರುವವರ ಗತಿಯೇನು? ಕನ್ನಡ ಶಾಲೆಗಳಿಗೆ ಕನ್ನಡ ತಿಳಿಯದ ಅಧ್ಯಾಪಕರನ್ನು ನೇಮಿಸಿ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುವುದಿಲ್ಲ ಎಂಬುದನ್ನು ರುಜುವಾತುಪಡಿಸುವುದು ಸಾರ್ವಜನಿಕ ಶಿಕ್ಷಣರಂಗವನ್ನು ರಕ್ಷಿಸುವ ರೀತಿಯೆ? ಹೀಗಾದರೆ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎಂದು ಪೋಷಕರ ಮನವೊಲಿಸಲು ಸಾಧ್ಯವೆ? ಆಡಳಿತ ಪಕ್ಷದ ಸ್ಥಳೀಯ ನಾಯಕರು ಇನ್ನಾದರೂ ಈ ಸಮಸ್ಯೆಯನ್ನು ಬಗರಹರಿಸಿ ಜನರ ವಿಶ್ವಾಸವನ್ನು ಗಳಿಸಲಿ. ಸಮಸ್ಯೆಗೆ ಪರಿಹಾರವೇನು?
ಕನ್ನಡ ತಿಳಿಯದ ಶಿಕ್ಷಕರನ್ನು ಸಂಬಳ ಸಹಿತ ರಜೆಯೊಂದಿಗೆ ಕನ್ನಡ ಕಲಿಯಲು ಕಳಿಸು ವುದು ಈಗ ಶಿಕ್ಷಣ ಇಲಾಖೆಯ ಅಧಿಕಾರಿಯವರು ಕಂಡುಕೊಂಡ ಮಾರ್ಗ. ಆದರೆ ಅದಕ್ಕಾಗಿ ರಜೆ ಪಡೆಯಲು ಕೂಡ ಈ ಅನರ್ಹ ಅಧ್ಯಾಪಕರನ್ನು ಬೇಡಿಕೊಳ್ಳಬೇಕಾದ ದಯನೀಯ ಪರಿಸ್ಥಿತಿ. ಹೀಗೆ ಕನ್ನಡ ಕಲಿಯಲು ತೆರಳಿದ ಶಿಕ್ಷಕರು ಕೇವಲ ಆರು ತಿಂಗಳಲ್ಲಿ ಕನ್ನಡ ಕಲಿಯಲು ಸಾಧ್ಯವಿದೆಯೆ? ಅವರು ಭ್ರಷ್ಟಾಚಾರ ನಡೆಸಿ ಕನ್ನಡಬಲ್ಲ ಪ್ರಮಾಣ ಪತ್ರ ಪಡೆಯುವ ಸಾಧ್ಯತೆಯಿದೆಯಲ್ಲವೆ? ಹಿಂತಿರುಗಿ ಬಂದ ಶಿಕ್ಷಕರು ಕನ್ನಡದಲ್ಲಿ ಸಮರ್ಥವಾಗಿ ಬೋಧಿಸಲು ಶಕ್ತರಾಗುವರೆ? ತಮ್ಮ ಶಾಲೆಗಳ ಹೆಸರನ್ನು ಕಾಪಾಡಲು, ವಿದ್ಯಾರ್ಥಿಗಳ ಕೊರತೆಯಾಗದಂತೆ ನೋಡಿಕೊಳ್ಳಲು ಕನ್ನಡ ತಿಳಿ ಯದ ಶಿಕ್ಷಕರು ಕನ್ನಡ ಕಲಿತು ಕನ್ನಡದಲ್ಲಿ ಪಾಠ ಮಾಡುತ್ತಿದ್ದಾರೆಂದು ಕೆಲವು ಮಂದಿ ಶಿಕ್ಷಕರು ಹೇಳುತ್ತಿದ್ದರೂ ವಾಸ್ತವ ಬೇರೆಯೇ ಇದೆ. ಧಾರಾಳ ಅಂಕಗಳನ್ನು ನೀಡಿ ಬಹುಮಾನಗಳನ್ನು ನೀಡಿ ವಿದ್ಯಾರ್ಥಿಗಳನ್ನು ಒಲಿಸಿಕೊಂಡು ದೂರುಗಳು ಬಾರದಂತೆ ನೋಡಿಕೊಳ್ಳಬಹುದು. ಈಗಿನ ಶಿಕ್ಷಣ ಪದ್ಧತಿಯಂತೆ 10ನೇ ತರಗತಿವರೆಗೆ ಅನಾಯಾಸವಾಗಿ ತೇರ್ಗಡೆಗೊಳ್ಳಬಹುದು. ಆದರೆ ಅನರ್ಹ ಶಿಕ್ಷಕರಿಂದ ಶಿಕ್ಷಣ ಪಡೆದವರು ಜೀವನದ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುವರೇ..? ಭಾಷೆಯಲ್ಲಿ ಹಿಡಿತವಿರಬೇಕಾದುದು ಅಗತ್ಯ
ಯಾವುದೇ ಭಾಷಾಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರಿಗೆ ಆ ಮಾಧ್ಯಮದ ಭಾಷೆಯಲ್ಲಿ ಹಿಡಿತವಿರಬೇಕಾದುದು ಅಗತ್ಯ. ಎಲ್.ಕೆ.ಜಿ. ಮಟ್ಟದ ಕನ್ನಡ ಕಲಿತು ಕನ್ನಡದಲ್ಲಿ ಬೋಧಿಸಲು ಸಾಧ್ಯವಾಗದು. ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಹಿಂದಿ, ಇಂಗೀÉಷ್, ಸಂಸ್ಕೃತ ಸಹಿತ ಯಾವುದೇ ಭಾಷಾವಿಷಯವನ್ನು, ಸಮಾಜ ವಿಜ್ಞಾನ , ವಿಜ್ಞಾನ, ಗಣಿತ ಸಹಿತ ಯಾವುದೇ ಮುಖ್ಯವಿಷಯವನ್ನು ಬೋಧಿಸಲು ನಿಯುಕ್ತರಾಗುವ ಶಿಕ್ಷಕರು ಕನಿಷ್ಠಪಕ್ಷ ಹತ್ತನೇ ತರಗತಿವರೆಗೆ ಕನ್ನಡ ಕಲಿತವರಾಗಬೇಕೆಂದು ನಿಯಮವನ್ನು ಮಾಡಬೇಕು. ಈಗ ಅಕ್ರಮವಾಗಿ ನೇಮಕಗೊಂಡ ಕನ್ನಡ ಬಾರದ ಆದರೆ ಮಲಯಾಳ ಮಾತೃ ಭಾಷೆಯ ಮಲಯಾಳ ಕಲಿತ ಶಿಕ್ಷಕರನ್ನು ತತ್ಸಮಾನವಾದ ಮಲಯಾಳ ಮಾಧ್ಯಮ ಶಿಕ್ಷಕ ಹುದ್ದೆಗಳಿಗೆ ನೇಮಿಸಬೇಕು. ಇದರಿಂದ ಮಲಯಾಳ ಮಾಧ್ಯಮ ಶಿಕ್ಷಕ ಉದ್ಯೋಗಾರ್ಥಿಗಳು ರೊಚ್ಚಿಗೆದ್ದಾರೆಂಬ ಭಯವಿದ್ದರೆ ಅದಕ್ಕೂ ಪರಿಹಾರವಿದೆ. ಈಗಿನ ಮಲಯಾಳ ಮಾಧ್ಯಮ ಶಿಕ್ಷಕ ರ್‍ಯಾಂಕು ಪಟ್ಟಿಯಲ್ಲಿರುವ ಉದೋÂಗಾರ್ಥಿಗಳಿಗೆ ತೊಂದರೆಯಾಗದಂತೆ ಭವಿಷ್ಯದಲ್ಲಿ ಉದ್ಭವಿಸುವ ಹುದ್ದೆಗಳ ತೆರವುಗಳಿಗೆ (ಸುಪರ್ ನ್ಯೂಮರಿ ವೇಕೆನ್ಸಿ) ವರ್ಗಾಯಿಸಿ ಹಾಗೂ ನೇಮಕಗೊಳಿಸಿ ಆದೇಶ ಹೊರಡಿಸಬೇಕು. ಇದರಿಂದ ಅನರ್ಹ ಶಿಕ್ಷಕರಿಗಾಗಲೀ ಮಲಯಾಳ ಶಿಕ್ಷಕ ಉದ್ಯೋಗಾರ್ಥಿಗಳಿಗಾಗಲೀ ತೊಂದರೆಯಾಗುವುದಿಲ್ಲ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಮಸ್ಯೆಯೂ ಸುಲಭವಾಗಿ ಬಗೆಹರಿಯುತ್ತದೆ. ಇದಕ್ಕೆ ಸರಕಾರದ ಒಂದು ವಿಶೇಷ ಆದೇಶ ಮಾತ್ರ ಸಾಕು. ಅದನ್ನು ಹೊರಡಿಸುವ ಇಚ್ಚಾಶಕ್ತಿಯನ್ನು ಸರಕಾರ ಪ್ರಕಟಿಸಬೇಕು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪರ ಕಾಳಜಿವಹಿಸಿದ ಉದುಮ ಶಾಸಕರು ಆಡಳಿತ ಪಕ್ಷದವರಾದುದರಿಂದ ಈ ಪರಿಹಾರ ಮಾರ್ಗ ಮನದಟ್ಟಾದರೆ ಅದನ್ನು ಸಾಧಿಸಬಲ್ಲರು. ಅವರಿಗೆ ಈ ವಿಷಯದಲ್ಲಿ ಜನರ, ಸ್ವಪಕ್ಷೀಯರ ಬೆಂಬಲದ ಅಗತ್ಯವಿದೆ.