ಬೆಂಗಳೂರು ; 2020 -21 ನೇ ಸಾಲಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದ್ದು ವರ್ಗಾವಣೆ ಪ್ರಕ್ರೀಯೆಯನ್ನು ಪ್ರಾರಂಭಿಸುವ ಸಲುವಾಗಿ ಪೂರ್ವಭಾವಿಯಾಗಿ ಶಿಕ್ಷಕರ ವರ್ಗಾವಣೆ ತಂತ್ರಾಂಶದ ಪ್ರಾತಕ್ಷಿತೆ, ಶಾಲೆಗಳಲ್ಲಿ ಹುದ್ದೆಗಳ ಮಂಜೂರಾತಿ ವಿವರ, ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿ ಪರಿಶೀಲನೆ ಹಾಗೂ ಶಿಕ್ಷಕರ ಸೇವಾ ವಿವರ ಪರಿಶೀಲಿಸಿ ದೃಡೀಕರಿಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಸಲುವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕ್ರೀಯೆ ನಡೆಯಲಿದೆ.
ವಿಡಿಯೋ ಕಾನ್ಫರೆನ್ಸ್ ನಡೆಸುವ ಲಿಂಕನ್ನು ಇ-ಮೇಲ್ ಗೆ ಕಳುಹಿಲಾಗುವುದು.
ಈಗಾಗಲೇ ಈ ಪ್ರಕ್ರೀಯೆ ಆರಂಭಗೊಂಡಿದ್ದು ಇಂದು ಮೊದಲ ದಿನವಾಗಿದ್ದು ಮಧ್ಯಾಹ್ನ 3ರಿಂದ ಸಂಜೆ 5ರ ವರೆಗೆ ಬೆಂಗಳೂರು ವಿಭಾಗದ ಶಿಕ್ಷಕರ ವರ್ಗಾವಣೆ ಪ್ರಕ್ರೀಯೆ ನಡೆಯಲಿದ್ದು.
ನ.4ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಮೈಸೂರು ವಿಭಾಗದ ಶಿಕ್ಷಕರ ವರ್ಗಾವಣೆ ಪ್ರಕ್ರೀಯೆ ನಡೆಯಲಿದೆ.
ನ.4 ರಂದು ಮಧ್ಯಾಹ್ನ 3ರಿಂದ ಸಂಜೆ 5 ರವರೆಗೆ ಬೆಳಗಾವಿ ವಿಭಾಗದ ಶಿಕ್ಷಕರ ವರ್ಗಾವಣೆ ಪ್ರಕ್ರೀಯೆ ನಡೆಯಲಿದೆ.
ನ.5 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಬೆಳಗಾವಿ ವಿಭಾಗದ ಶಿಕ್ಷಕರ ವರ್ಗಾವಣೆ ಪ್ರಕ್ರೀಯೆ ನಡೆಯಲಿದೆ.