ನೀಡಲಾಗುತ್ತಿತ್ತು. ಆದರೆ, ಅದನ್ನು ತಡೆಹಿಡಿ ಯುವಂತೆ 2017ರ ನ.4ರಂದು ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿತ್ತು.
Advertisement
ಇಲಾಖೆಯ ಕ್ರಮ ಖಂಡಿಸಿ ಶಿಕ್ಷಕರು ಮತ್ತು ಶಿಕ್ಷಕ ಸಂಘದಿಂದ ಸರ್ಕಾರ ಮೇಲೆ ಒತ್ತಡ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು, ವಿಶೇಷ ಭತ್ಯೆ ಸೇರಿ ಶಿಕ್ಷಕರ ವೇತನ ತಡೆ ಹಿಡಿಯದಂತೆ ಸೂಚಿಸಿದ್ದರು. ಅದರಂತೆ 2008ರ ಆಗಸ್ಟ್ ನಂತರ ನೇಮಕವಾಗಿ ಬಡ್ತಿ ಪಡೆದ ಶಿಕ್ಷಕರ ವಿಶೇಷ ಭತ್ಯೆ ಹಾಗೂ ವೇತನ ಕಟಾವಣೆ ಮಾಡದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.