ಸೈದಾಪುರ: ಗುಣಮಟ್ಟದ ಶಿಕ್ಷಣ ನೀಡುವಂತಾಗಲು ಚಟುವಟಿಕೆ ಆಧಾರಿತ ಕಲಿಕೆ ಅತೀ ಮುಖ್ಯವಾಗಿದೆ. ಅದು ಸಂತಸದಾಯಕವಾದ ಪರಿಸವನ್ನು ನಿರ್ಮಾಣ ಮಾಡುವಲ್ಲಿ ನೆರವು ನೀಡುತ್ತದೆ ಎಂದು ಕ್ಷೇತ್ರ ಶಿಕ್ಷಣಧಿಕಾರಿ ರುದ್ರಗೌಡ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡ ನಲಿ ಕಲಿ ಶಿಕ್ಷಕರ ಕಲಿಕಾ ಸಾಮಗ್ರಿಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಸಾಮಾರ್ಥ್ಯ ತಿಳಿದು ನವೀನ ಬೋಧಾನ ವಿಧಾನಗಳನ್ನು ಬಳಕೆ ಮಾಡಿಕೊಂಡು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕಾಗಿ ಸ್ಥಳೀಯ ಸಂಪನ್ಮೂಲಗಳೊಂದಿಗೆ ಬೋಧನಾ ಉಪಕರಗಳನ್ನು ಉಪಯೋಗಿಸಿಕೊಂಡು ಕಲಿಕೆಯನ್ನು ಅನುಕೂಲಿಸುವ ಕೆಲಸ ಮಾಡಬೇಕು. ಇದಕ್ಕೆ ನಮ್ಮ ಕೌಶಲ್ಯ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಕಲಿಕೆ ಟಾಟ ಟ್ರಸ್ಟ್ ಕಾರ್ಯಾಗಾರವನ್ನು ಆಯೋಜನೆ ಮಾಡಿ ಆ ಮೂಲಕ ಶಿಕ್ಷಕರ ಬಲವರ್ಧೆನೆಯಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಇಸಿಒ ಶ್ರೀನಿವಾಸ ಕರ್ಲಿ ಮಾತನಾಡಿ, ಶಿಕ್ಷಕರು ತಮ್ಮ ಕೌಶಲ್ಯವನ್ನು ಬಳಕೆ ಮಾಡಿಕೊಂಡು ಶೈಕ್ಷಣಿಕ ಅಭಿವೃದ್ಧಿಗೆ ಪ್ರಯತ್ನ ಮಾಡಬೇಕು. ಇದಕ್ಕಾಗಿ ನಾವು ಪ್ರಚಲಿತ ಅಂಶಗಳನ್ನು ಬಳಸುವ ಸಾಮಾರ್ಥ್ಯ ಹೊಂದಿರಬೇಕು. ಆ ಮೂಲಕ ವರ್ಗಕೋಣೆ ಸಂತಸದಾಯಕವಾದಾಗ ಮಾತ್ರ ದಾಖಲಾತಿ ಸೇರಿದಂತೆ ಹಾಜರಾತಿ ಪ್ರಮಾಣ ಹೆಚ್ಚಾಗುತ್ತದೆ.
ಈ ದಿಸೆಯಲ್ಲಿ ನಾವು ಪ್ರಯತ್ನ ಮಾಡೋಣ ಎಂದು ಹೇಳಿದರು. ಬಿಆರ್‌ಪಿ ಬಸವರಾಜ ಮನಗನಾಳ, ಸಿಆರ್‌ಪಿಗಳಾದ ಲಿಂಗನಗೌಡ, ಸೈಯ್ಯದ್ ಶೇರಅಲಿ, ಹಪೀಜ ಪಟೇಲ, ಮಲ್ಲಪ್ಪ, ಶಿವರಾಜ ಪಾಟೀಲ, ಶಾಲಾ ಮುಖ್ಯಗುರು ಶಿವರಾಜಪ್ಪ, ಎಸ್‌ಆರ್‌ಟಿಟಿಯ ಲಿಂಗಪ್ಪ, ಮೌನೇಶ, ತುಕರಾಮ, ವೆಂಕಟೇಶ ಸೇರಿದಂತೆ 5 ಕ್ಲಸ್ಟ್‌ರಗಳ 70ಕ್ಕಿಂತ ಹೆಚ್ಚು ಸಂಖ್ಯೆ ಶಿಕ್ಷಕರು ಭಾಗವಹಿಸಿದ್ದರು.