ಮಾನ್ವಿ: ವ್ಯಕ್ತಿತ್ವ ಅಧಾರಿತ ಶಿಕ್ಷಣ ಮಕ್ಕಳಿಗೆ ಅವಶ್ಯವಿದೆ. ಪ್ರತಿಯೊಬ್ಬ ಶಿಕ್ಷಕರು ಮಕ್ಕಳ ವ್ಯಕ್ತಿತ್ವ ವಿಕಾಸನಕ್ಕೆ ಆದ್ಯತೆ ನೀಡಬೇಕು ಎಂದು ಮುದ್ದೇಬಿಹಾಳ ಆದರ್ಶ ವಿದ್ಯಾಲಯ ಶಿಕ್ಷಕ ಬಿ.ಎಸ್ ಹಂಚಲಿ ಹೇಳಿದರು.
ಪಟ್ಟಣದ ಶಾರದಾ ವಿದ್ಯಾನಿಕೇತನ ಮಹಾವಿದ್ಯಾಲಯ ಬಿಇಡಿ ಕಾಲೇಜಿನಲ್ಲಿ ರವಿವಾರ ಹಮ್ಮಿಕೊಂಡಿದ್ದ ಬಿಇಡಿ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಆತ್ಮವಿಶ್ವಾಸ ಜತಗೆ ಭಾವನತ್ಮಾಕ ಸಾಮಾಜಿಕ ಮೌಲ್ಯಗಳು ತುಂಬಬೇಕಿದೆ. ಇದರಿಂದ
ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತೆದೆ ಎಂದು ಹೇಳಿದರು.
ಸಮಾಜದಲ್ಲಿ ಶಿಕ್ಷಕರ ವೃತ್ತಿಗೆ ಬಹುದೊಡ್ಡ ಗೌರವವಿದೆ. ಈ ಗೌರವವನ್ನು ಇಂದಿನ ಶಿಕ್ಷಕರು ಕಾಪಾಡಿಕೊಂಡು ಹೋಗಬೇಕಿದೆ. ಕೇವಲ ಬಿಇಡಿ ಮುಗಿಸಿ ಶಿಕ್ಷಕರಾದರೆ ಸಾಲದು. ಯಾವ ಶಿಕ್ಷಕನ ಹೆಸರು ವಿದ್ಯಾರ್ಥಿ ಜೀವನದಲ್ಲಿ ಕೊನೆಯವರೆಗೆ ಉಳಿಯುತ್ತದೆಯೋ ಅವನೇ ನಿಜವಾದ ಶಿಕ್ಷಕ. ಶಿಕ್ಷಕ ತನ್ನ ವಿಷಯದ ಜತೆಗೆ ವೃತ್ತಿ ಪ್ರೀತಿಸಿ ಗೌರವಿಸಿದಾಗ ಮಾತ್ರ ತನಗೆ ಬೆಲೆ ಸಿಗುತ್ತದೆ. ಸಮಾಜದ ಪ್ರತಿಯೊಬ್ಬ ಸಾಧಕನ ಹಿಂದೆ ಒಬ್ಬ ಶಿಕ್ಷಕನ ಶ್ರಮ ಇರುತ್ತದೆ. ಮಕ್ಕಳ ಮನಸ್ಥಿತಿ ಅರ್ಥ ಮಾಡಿಕೊಂಡು ಶಿಕ್ಷಣ ನೀಡಬೇಕು. ಶಿಕ್ಷಕ ಮಕ್ಕಳಿಗೆ ಕಲಿಕೆಯ ಬಗ್ಗೆ ಆಸಕ್ತಿ ಹೆಚ್ಚಿಸುವುದರ ಜತೆಗೆ ಮಕ್ಕಳನ್ನು ಶಾಲೆಯತ್ತ ಆರ್ಕಷಿಸಬೇಕು. ನಮ್ಮ ಅನೇಕ ರಾಷ್ಟ್ರ ನಾಯಕರು ಶಿಕ್ಷಕ ವೃತ್ತಿಯಿಂದಲೇ ದೇಶದ ಉನ್ನತ ಹುದ್ದೆಗೆರಿದ್ದಾರೆ. ಈಗ ಮಾನ್ವಿ ಪಟ್ಟಣದಲ್ಲಿ ಶಾರದಾ ಶಿಕ್ಷಣ ಸಂಸ್ಥೆ ಕಲಿಕೆಗೆ ಉತ್ತಮ ಪರಿಸರ ಹೊಂದಿದ್ದು, ಸಂಸ್ಥೆ ಕಾರ್ಯಾದರ್ಶಿ ಬಿ. ಮಧುಸೂದನ್ ಗುಪ್ತಾಜಿ ಅವರ ಪರಿಶ್ರಮದಿಂದಾಗಿ ತಾಲೂಕಿನ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ನಂತರ ಶಾರದಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಧುಸೂದನ್ ಗುಪ್ತಾಜಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಚೆನ್ನಾಗಿ ಅಧ್ಯಯನ ಮಾಡಿದ ಜೀವನದ ಗುರು ಮುಟ್ಟಲು ಸಾಧ್ಯ. ಈಗಾಗಲೇ ಬಿಇಡಿ ಕಾಲೇಜಿನಿಂದ ಮೊದಲ ಬ್ಯಾಚ್ ಉತ್ತಮ ಫಲಿತಾಂಶ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದೆ. ಈ ವರ್ಷ ಕೂಡ ಉತ್ತಮ ಫಲಿತಾಂಶ ತರುವ ಕೆಲಡಸ ನಿಮ್ಮಿಂದಾಗಬೇಕು ಎಂದು ಹೇಳಿದರು.
ಉಪನ್ಯಾಸಕ ವೀರಭದ್ರಯ್ಯ ಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಾರದಾ ಬಿಇಡಿ ಕಾಲೇಜಿನ ಪ್ರಾಂಶುಪಾಲ ತಿಮ್ಮಯ್ಯ ಶೆಟ್ಟಿ ಇಲ್ಲೂರು ಅಧ್ಯಕ್ಷತೆ ವಹಿಸಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ಅನಿಸಿಕೆ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಕಿಶೋರಕುಮಾರ, ಉಪನ್ಯಾಸಕರಾದ ಈರಣ್ಣ ಮರ್ಲಟ್ಟಿ, ಆನಂದ ಹರನಳ್ಳಿ, ಲಿಂಗರಾಜ ಬಾಗಲವಾಡ, ಇಮಿಯಾಜ್ ಪಾಷ, ಶಿಕ್ಷಕ ಅಮರೇಶ ಸಾಲಿಮಠ ಇದ್ದರು. ಪಲ್ಲವಿ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಅಯ್ಯಪ್ಪ, ಲಕ್ಷ್ಮೀ ನಿರೂಪಿಸಿದರು. ವೀರೇಶ ವಂದಿಸಿದರು.