ವಿಜಯಪುರ: ಮುದ್ದೇಬಿಹಾಳದ ರಕ್ಕಸಗಿ ಸರ್ಕಾರಿ ಪ್ರೌಢ ಶಾಲೆಗೆ ಅನಧಿಕೃತವಾಗಿ ರಜೆ ಸಾರಿ ಶಿಕ್ಷಕರೆಲ್ಲಾ ಪಕ್ಕದ ಹೊಲದಲ್ಲಿ ಭರ್ಜರಿ ಗುಂಡು ತುಂಡು ಪಾರ್ಟಿ ನಡೆಸಿ ನಿರ್ಲಜ್ಜತನ ತೋರಿದ ಘಟನೆ ನಡೆದಿದೆ.
ವರದಿಯಾದಂತೆ ಘಟನೆ ಜನವರಿ 31 ರಂದು ನಡೆದಿದ್ದು ಈಗ ಬೆಳಕಿಗೆ ಬಂದಿದೆ.ಶಿಕ್ಷಕ ಬಿ.ಆರ್.ಲಮಾಣಿ ಎನ್ನುವ ಶಿಕ್ಷಕ ನಿವೃತ್ತಿಯಾದ ಸಂಭ್ರಮಕ್ಕೆ ಮುಖ್ಯೋಪಾಧ್ಯಾಯ ಎ.ಎಚ್.ಬಿರಾದಾರ್ ಮತ್ತು ನಾಲ್ವರು ಸಹ ಶಿಕ್ಷಕರು ಪಾರ್ಟಿ ಮಾಡುತ್ತಿದ್ದಾರೆ.
ಯಾವುದೇ ಉದ್ದೇಶವಿಲ್ಲದೆ ರಜೆ ಸಾರಿದ ಬಗ್ಗೆ ಅನುಮಾನಗೊಂಡ ಪೋಷಕರು ಮತ್ತು ಸಾರ್ವಜನಿಕರು ಸ್ಥಳಕ್ಕೆ ತೆರಳಿ ಶಿಕ್ಷಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದಾಗ ಹಾರಿಕೆಯ ಉತ್ತರ ನೀಡಿರುವ ಬಿರಾದಾರ್ ನಾನು ಸುರಪುರದ ದೊರೆ ನನ್ನನ್ನು ಕೇಳುವವರು ಯಾರು? ಎಂದಿದ್ದಾರೆ.ಮಾತ್ರವಲ್ಲದೆ ಬಿಇಓ ಅವರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಈ ಬಗ್ಗೆ ನಾಲ್ವರು ಶಿಕ್ಷಕರನ್ನು ಅಮಾನತು ಮಾಡುಲು ಬಿಇಓ ಅವರು ಡಿಡಿಪಿಐಗೆ ಶಿಫಾರಸು ಪತ್ರ ಕಳುಹಿಸಿರುವ ಬಗ್ಗೆ ವರದಿಯಾಗಿದೆ.