Advertisement

ಶಿಕ್ಷಕರ ದಿನದಂದು ಗುರುವಿಗೆ ಕಾರು ನೀಡಿದ್ದ ವಿರಾಟ್‌ ಕೊಹ್ಲಿ

06:00 AM Sep 06, 2018 | |

ಮುಂಬಯಿ: ಅಕ್ಷರ ಕಲಿಸಿದ ಗುರುವಿನ ಋಣ ತೀರಿಸುವುದು ಅಷ್ಟು ಸುಲಭದ ಮಾತಲ್ಲ. ಶಿಷ್ಯನ ಸಾಧನೆಯೊಂದೇ ಗುರುವಿಗೆ ನಿಜವಾಗಿ ನೀಡುವ ಬಹುದೊಡ್ಡ ಗುರು ಕಾಣಿಕೆ. ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಈ ಮಾತಿಗೆ ಸರಿಯಾಗಿ ಒಪ್ಪುತ್ತಾರೆ. 

Advertisement

ಹೌದು, ಬುಧವಾರ ದೇಶ ದಾದ್ಯಂತ ಎಲ್ಲ ಕಡೆ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ವೇಳೆ ನಾಲ್ಕು ವರ್ಷದ ಹಿಂದೆ ಕೊಹ್ಲಿಯ ಗುರುಭಕ್ತಿಯ ಕೌತುಕ ಸುದ್ದಿಯೂ ವೈರಲ್‌ ಆಗಿದೆ. ಕೊಹ್ಲಿ ಸಂಪತ್ತಿನಲ್ಲಿ ಕುಬೇರ, ಪ್ರತಿಭೆಯಲ್ಲಿ ಗಣಿ. ಎಷ್ಟೇ ಸಾಧನೆ ಮಾಡಿದರೂ ತನ್ನ ಗುರುವನ್ನು ಮರೆತಿಲ್ಲ. 2014ರಲ್ಲಿ ಶಿಕ್ಷಕರ ದಿನದಂದು ಕೊಹ್ಲಿ, ತನ್ನ ಸಹೋದರ ವಿಕಾಸ್‌ ಅವರನ್ನು ಬಾಲ್ಯದ ಕ್ರಿಕೆಟ್‌ ಕೋಚ್‌ ರಾಜ್‌ಕುಮಾರ್‌ ಶರ್ಮ ನಿವಾಸಕ್ಕೆ ಕಳುಹಿಸಿದ್ದರು. ಇದೇ ವೇಳೆ ಗುರುವಿನೊಂದಿಗೆ ಫೋನ್‌ನಲ್ಲಿ ಮಾತನಾಡಿ ಶಿಕ್ಷಕರ ದಿನದ ಶುಭಾಶಯವನ್ನು ತಿಳಿಸಿದ್ದರು. ಮಾತ್ರವಲ್ಲ, ಸ್ಕೋಡಾ ರ್ಯಾಪಿಡ್‌ ಕಾರ್‌ ಒಂದನ್ನು ಉಡುಗೊರೆಯಾಗಿ ಕೊಹ್ಲಿ ಗುರುವಿಗೆ ನೀಡಿದ್ದರು. ಈ ವಿಚಾರವನ್ನು ವಿರಾಟ್‌ ಕೊಹ್ಲಿ ಬಗ್ಗೆ ಪತ್ರಕರ್ತ ವಿಜಯ್‌ ಲೋಕಪಲ್ಲಿ ಬರೆದಿರುವ “ಡ್ರೈವನ್‌’ ಪುಸ್ತಕದಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next