Advertisement

ಬಾಳ ಬಟ್ಟೆಯ ತೋರಿದ ಗುರು

11:30 PM Sep 04, 2019 | mahesh |

ಇಂದು ಶಿಕ್ಷಕರ ದಿನಾಚರಣೆ. ನಮ್ಮ ಜೀವನವೆಂಬ ರಥವನ್ನು ಮುನ್ನಡೆಸಲು ಪಾಠ ಕಲಿಸಿದ ಶಿಕ್ಷಕರಷ್ಟೇ ಮಹತ್ತರವಾದ ಸ್ಥಾನವನ್ನು ಕಾಯಕ ಕಲಿಸಿದ ಗುರು ಕೂಡ ಹೊಂದಿದ್ದಾರೆ. ಅಂತಹ ಗುರುಗಳ ಬಗ್ಗೆ ಆಯ್ದ ಕೆಲವರು ನೆನಪಿಸಿಕೊಂಡದ್ದು ಹೀಗೆ…

Advertisement

ಹಿರಿಯ ಜವುಳಿ ವರ್ತಕರಾಗಿ, ‘ಬೇಬಿ ಪೊರ್ಬುಲು’ ಎಂದೇ ಮೂಡುಬಿದಿರೆಯಲ್ಲಿ ಚಿರಪರಿಚಿತ ರಾಗಿರುವ, ಸದ್ಯ ಇತರ ಗೃಹೋ ಪಕರಣ ಮಾರಾಟದತ್ತ ಹೊರಳಿ ಕೊಂಡಿರುವ ಸಿಲ್ವೆಸ್ಟರ್‌ ಡಿ’ಕೊಸ್ತರೇ ಮೇನಕಾ ಟೆಕ್ಸ್‌ಟೈಲ್ಸ್ನ ನೆಲ್ಲಿಮಾರು ಸದಾಶಿವ ರಾವ್‌ ಅವರ ‘ಬದುಕಿನ ಗುರು’ವಂತೆ.

ಸದಾಶಿವರು ಹೇಳುತ್ತಾರೆ- ‘ನಿಟ್ಟೆಯ ತೀರಾ ಹಳ್ಳಿ ಪರಪ್ಪಾಡಿ ಯವನಾದ ನಾನು 1984ರಲ್ಲಿ ಎಸೆಸೆಲ್ಸಿ ಮುಗಿಸಿ, ಕಾಲೇಜು ಶಿಕ್ಷಣ ಕ್ಕಾಗಿ ಮೂಡುಬಿದಿರೆಗೆ ಬಂದಾಗ ಜವುಳಿ ವ್ಯವಹಾರದಲ್ಲಿ ತೊಡಗಿದ್ದ ಅಣ್ಣ ವಸಂತರ ಜತೆ ಇದ್ದ ಹೊತ್ತಿ ನಲ್ಲೇ ಪರಿಚಯವಾದವರು ಬೇಬಿ ಪೊರ್ಬುಲು. ಅವರ ಮಾತುಗಳಿಂದ ಆಕರ್ಷಿತನಾದೆ. ಗ್ರಾಹಕ ರನ್ನು ಸ್ವಾಗತಿಸುವುದರಿಂದ ತೊಡಗಿ ವಸ್ತ್ರ ಅಳೆಯುವ, ವಸ್ತ್ರ ಕತ್ತರಿಸುವ ರೀತಿ, ಒಂದು ವಸ್ತ್ರಕ್ಕಾಗಿ ಬಂದವ ನಿಗೆ ಹಲವು ವಸ್ತ್ರಗಳನ್ನು ಖರೀದಿಸು ವಂಥ ಮನಸ್ಸನ್ನು ಸಿದ್ಧಪಡಿಸುತ್ತಿದ್ದ ರೀತಿಯನ್ನೆಲ್ಲ ಅವರು ನನಗೆ ಪ್ರಾಮಾಣಿಕವಾಗಿ ಕಲಿಸಿಕೊಟ್ಟರು.

ಕೆಲವನ್ನು ಲಾಭರಹಿತವಾಗಿಯೂ ಕೆಲವನ್ನು ಅತೀ ಕಡಿಮೆ ಬೆಲೆಗೂ ಮಾರಿ ಜನಪ್ರಿಯರಾದದ್ದು ನನ್ನ ಮೇಲೂ ಪರಿಣಾಮ ಬೀರಿತ್ತು. ಬದುಕಿನ ಸಂಧ್ಯಾಕಾಲದಲ್ಲಿರುವ ಬೇಬಿ ಪೊರ್ಬುಲು ನನ್ನ ಜವುಳಿ ವ್ಯವಹಾರದಲ್ಲಿ ಇಂದಿಗೂ ನನಗೆ ಆದರ್ಶ. ಇವತ್ತೂ ಅವರಿಂದ ಮಾಹಿತಿ ಪಡೆಯುತ್ತಿರುತ್ತೇನೆ ಎನ್ನುತ್ತಾರೆ ಸದಾಶಿವ ರಾವ್‌.

Advertisement

Udayavani is now on Telegram. Click here to join our channel and stay updated with the latest news.

Next