Advertisement
ಲಾಕ್ ಡೌನ್ ಸಡಿಲಿಕೆ ಆದ ತಕ್ಷಣ ಪರೀಕ್ಷೆಗಳು ಕಣ್ಣಮುಂದೆ ಮೆರವಣಿಗೆ ಮಾಡುತ್ತವೆ ಅಂತ ತಿಳಿದಿತ್ತು. ಆದರೆ, ಏನು ಮಾಡೋದು ಅಂತ ಚಿಂತಿತರಾದದ್ದು ಖಾನಾಪುರ ಹಾಗೂ ಬೆಳಗಾವಿಯ ಕೆಲ ತಾಲೂಕಿನ ಶಿಕ್ಷಕರು. ಸರ್ಕಾರವೇನೋ ಯೂಟ್ಯೂಬ್ ಚಾನೆಲ್ ಮಾಡಿದೆ. ಮನೆಯಲ್ಲಿ ಕುಳಿತೇ ಪಾಠ ಕೇಳಬಹುದು. ಇವೆಲ್ಲಾ ಲೆಕ್ಕಾಚಾರ ನಗರ, ಪಟ್ಟಣ ಪ್ರದೇಶಕ್ಕೆ ಸರಿ. ಖಾನಾಪುರದ ಸುತ್ತಮುತ್ತಲಿಗೆ ಇದೆಲ್ಲಾ ಆಗುವುದಿಲ್ಲ.
Related Articles
Advertisement
ಈ ಶಿಕ್ಷಕರೆಲ್ಲಾ ದ್ವಿಚಕ್ರವಾಹನದಲ್ಲಿ ಬೆಳಗ್ಗೆ ಹೊರಟು, ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳನ್ನು ದು ಕಡೆ ಸೇರುವಂತೆ ಮಾಡುತ್ತಾರೆ. ಅಲ್ಲೇ ಪಾಠ ಶುರುಮಾಡುತ್ತಾರೆ. ಮಧ್ಯಾಹ್ನದ ಊಟಕ್ಕೆ ಬುತ್ತಿ ತೆಗೆದುಕೊಂಡು ಹೋಗಿರುತ್ತಾರೆ. ಅಗತ್ಯವಿರುವ ಎಲ್ಲಾ ಪೋರ್ಷನ್‌ಗಳನ್ನು ಕವರ್ ಮಾಡಿ, ಸಂಜೆ ಹೊತ್ತಿಗೆ ವಾಪಸ್ಸು ಬರುತ್ತಾರೆ. ಶಿಕ್ಷಕರಿಗೆ ಅರಣ್ಯದ ಪರಿಚಯವಿರು ವುದರಿಂದ, ಸಮಸ್ಯೆ ಕಡಿಮೆ.
ಪ್ರತಿ ಗ್ರಾಮವೂ 8-10 ಕಿ.ಮೀ. ದೂರದಲ್ಲಿವೆ. ಹೀಗಾಗಿ, ಹಳ್ಳಿಗೆ ಹೋಗುವ ಮೊದಲು ಯಾವ ವಿಷಯ ಪಾಠ ಮಾಡಬೇಕು, ಎಷ್ಟು ಪಾಠ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡು, ವಾರಕ್ಕೆ 18 ಪಿರಿಯಡ್‌ನಷ್ಟು ಪಾಠ ಮಾಡುತ್ತಾರೆ. “ಹಳ್ಳಿಯಲ್ಲಿ ಒಬ್ಬ ವಿದ್ಯಾರ್ಥಿ ಇರಲಿ, ಹತ್ತು ಜನ ಇರಲಿ, ಎಲ್ಲರಿಗೂ ಪಾಠ ಮಾಡುತ್ತೇವೆ. ಹೆಚ್ಚು ವಿದ್ಯಾರ್ಥಿಗಳಿದ್ದರೆ, ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಕೂಡಿಸಿಕೊಂಡು ಪಾಠ ಮಾಡುತ್ತೇವೆ.
ಹಳ್ಳಿಯ ಪಾಲಕರ ಫೋನ್ ನಂಬರ್ ಇದೆ. ಇವರಲ್ಲಿ ಒಬ್ಬರಿಗೆ, ಹಿಂದಿನ ದಿನವೇ ಮಾಹಿತಿ ತಲುಪಿಸುತ್ತೇವೆ. ಹಾಗಾಗಿ, ಅಂದುಕೊಂಡ ವೇಳೆಗೆ ಸರಿಯಾಗಿ ಪಾಠ ಮಾಡಲು ಸಾಧ್ಯವಾಗಿದೆ’ ಅನ್ನುತ್ತಾರೆ ಎಚ್.ಎಂ. ತುಕಾರಾಮ್ ಸಡೇಕರ್. ಹಳ್ಳಿಗೆ ಮೇಷ್ಟ್ರು ಬರುವುದರಿಂದ ಮಕ್ಕಳಿಗೆ ಸಂಭ್ರಮ. ನಮ್ಮ ಹಳ್ಳಿಗೆ ನಮ್ಮ ಮೇಷ್ಟು ಬರುತ್ತಾರೆ ಅಂತ. ಈ ಸಂತೋಷ, ಉತ್ಸಾಹ ವನ್ನೇ ಶಿಕ್ಷಕರು ಪಾಠ ಹೇಳಲು ಬಳಸಿ ಕೊಳುತ್ತಿ ದ್ದಾರೆ.
ಹಿಂದಿನ ದಿನವೇ ಮಾಹಿತಿ: “ಹಳ್ಳಿಯಲ್ಲಿ ಒಬ್ಬ ವಿದ್ಯಾರ್ಥಿ ಇರಲಿ, ಹತ್ತು ಜನ ಇರಲಿ, ಎಲ್ಲರಿಗೂ ಪಾಠ ಮಾಡುತ್ತೇವೆ. ಹೆಚ್ಚು ವಿದ್ಯಾರ್ಥಿಗಳಿದ್ದರೆ, ಗ್ರಾ.ಪಂ. ಕಟ್ಟಡ ದಲ್ಲಿ ಕೂಡಿಸಿಕೊಂಡು ಪಾಠ ಮಾಡುತ್ತೇವೆ. ಹಳ್ಳಿಯ ಪಾಲಕರ ಫೋನ್ ನಂಬರ್ ಇದೆ. ಇವರಲ್ಲಿ ಒಬ್ಬರಿಗೆ, ಹಿಂದಿನ ದಿನವೇ ಮಾಹಿತಿ ತಲುಪಿಸುತ್ತೇವೆ. ಹಾಗಾಗಿ, ಅಂದುಕೊಂಡ ವೇಳೆಗೆ ಸರಿಯಾಗಿ ಪಾಠ ಮಾಡಲು ಸಾಧ್ಯ ಆಗಿದೆ’ ಅನ್ನುತ್ತಾರೆ ಎಚ್.ಎಂ. ತುಕಾರಾಮ್ ಸಡೇಕರ್.
ಜಾಗೃತಿ ಪಾಠ: ಹಳ್ಳಿಗಳಿಗೆ ಹೋಗಿ ಪಾಠ ಮಾಡಿ ಬರುವ ಶಿಕ್ಷಕರು, ಗ್ರಾಮದ ಜನತೆಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಪ್ರಾತ್ಯಕ್ಷಿಕೆ ಅನ್ನುವಂತೆ, ವಿದ್ಯಾರ್ಥಿ ಗಳನ್ನು ಸಾಮಾಜಿಕ ಅಂತರದಲ್ಲಿ ಕೂಡಿಸಿ ಪಾಠ ಮಾಡು ತ್ತಾರೆ. ಜೊತೆಗೆ, ಮಾಸ್ಕ್, ಸ್ಯಾನಿ ಟೈಸರ್‌ಗಳನ್ನೂ ವಿತರಿ ಸುವ ಮೂಲಕ, ಪೋಷಕರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.