Advertisement

ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡಿದ ಶಿಕ್ಷಕರು: ಐವರ ಬಂಧನ

05:28 PM Jun 25, 2020 | keerthan |

ಹಿರೇಕೆರೂರು( ಹಾವೇರಿ): ವರ್ಷಪೂರ್ತಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಿ ಪರೀಕ್ಷೆಗೆ ತಯಾರಿ ಮಾಡಿದ ಶಿಕ್ಷಕರು, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡದೇ ಬರೆದು ಉತ್ತಮ ಅಂಕ ಗಳಿಸಬೇಕೆಂದು ಬಯಸುತ್ತಾರೆ. ಆದರೆ ಅಪವಾದ ಎಂಬಂತೆ ಶಿಕ್ಷಕರೇ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿ, ಸಿಕ್ಕಿಬಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ.

Advertisement

ಹಿರೇಕೆರೂರುರಿನ ಸಂಗಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ಗುರುವಾರ ಅಕ್ರಮವಾಗಿ ಪ್ರವೇಶ ಮಾಡಿ, ನಕಲು ಮಾಡಿಸಲು ಪ್ರಯತ್ನ ಮಾಡಿದ ಆರೋಪದ ಮೇಲೆ ನಾಲ್ವರು ಶಿಕ್ಷಕರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿಕ್ಷಕರಾದ ಜಗದೀಶ ಶಿವಪ್ಪನವರ, ಮನೋಹರ ಬಿ.ಆರ್., ಗುತ್ತೆಪ್ಪ ಬಾಳಂಬೀಡ ಹಾಗೂ ಶಿವಯೋಗಿ ರಾಗಿ ಬಂಧನಕ್ಕೆ ಒಳಗಾದವರು.

‘ಈ ನಾಲ್ವರು ಶಿಕ್ಷಕರು ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದ ಮೇಲೆ ಇದ್ದವರಲ್ಲ. ನಾನು ದಿಢೀರ್‌ ಭೇಟಿ ನೀಡಿದ ಸಂದರ್ಭ ಇವರು ಓಡಿ ಹೋಗಲು ಯತ್ನಿಸಿದರು. ತಕ್ಷಣ ಅವರನ್ನು ತಡೆದು ವಿಚಾರಣೆ ನಡೆಸಿದಾಗ, ಅವರ ಬಳಿ ದ್ವಿತೀಯ ಭಾಷಾ ಪತ್ರಿಕೆಗೆ ಸಂಬಂಧಿಸಿದ ನಕಲು ಚೀಟಿಗಳು ಇದ್ದವು. ಹಾಗಾಗಿ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದೇನೆ ಎಂದು ತಹಶೀಲ್ದಾರ್‌ ಆರ್‌.ಎಚ್‌. ಭಾಗವಾನ್‌ ತಿಳಿಸಿದರು.

ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ನಾಗರಾಜ ಸುಂಕಾಪುರ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next