Advertisement

ಶಿಕ್ಷಕರೇ ಭವಿಷ್ಯದ ನಿರ್ಮಾಪಕರು: ಬಾಯಕ್ಕ ಮೇಟಿ

02:32 PM Jul 07, 2019 | Suhan S |

ಬಾದಾಮಿ: ದೇಶದ ಭವಿಷ್ಯ ವರ್ಗದ ಕೋಣೆಗಳಲ್ಲಿ ನಿರ್ಮಾಣವಾಗುತ್ತಿದೆ ಎಂಬ ಎಸ್‌.ರಾಧಾಕೃಷ್ಣನ್‌ ವಾಣಿಯಂತೆ ಸಮಾಜದ ಎಲ್ಲರನ್ನು ನಿರ್ಮಿಸುವವರೇ ಶಿಕ್ಷಕರು. ಶಿಕ್ಷಕರೇ ಭವಿಷ್ಯದ ನಿರ್ಮಾಪಕರು ಎಂದು ಜಿಪಂ ಅಧ್ಯಕ್ಷೆ ಗಂಗೂಬಾಯಿ (ಬಾಯಕ್ಕ) ಮೇಟಿ ಹೇಳಿದರು.

Advertisement

ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ಸಹಶಿಕ್ಷಕರ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಎಲ್ಲರನ್ನು ನಿರ್ಮಿಸುವವರೇ ಶಿಕ್ಷಕರು. ಶಿಕ್ಷಕರ ಮೇಲೆ ದೊಡ್ಡ ಜವಾಬ್ದಾರಿಯಿದೆ. ಶಿಕ್ಷಕರು ಸಂಘಟಿತರಾಗಿ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ತಾಪಂ ಅಧ್ಯಕ್ಷೆ ರೇಣುಕಾ ಕೊಳ್ಳನ್ನವರ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಮಹಾಂತೇಶ ಮಮದಾಪುರ, ಜಾಲಿಹಾಳ ಸಿದ್ದೇಶ್ವರ ಬ್ಯಾಂಕ್‌ ಅಧ್ಯಕ್ಷ ಶಾಂತಗೌಡ ಪಾಟೀಲ, ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ, ಡಿಡಿಪಿಐ ಬಿ.ಎಚ್.ಗೋನಾಳ, ಬಿಇಒ ಎ.ಎಸ್‌.ಹತ್ತಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಎಚ್.ಕೆ, ಉಪಾಧ್ಯಕ್ಷ ರಾಮು ಗುಗವಾಡ, ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಪೂಜಾರಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ ಪಿ., ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ ಪಟ್ಟಣಶೆಟ್ಟಿ ಹಾಜರಿದ್ದರು.

ಗೋಷ್ಠಿ: ಬಳಿಕ ನಡೆದ ಗೋಷ್ಠಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ(ಕರಡು) ಸಲಹೆಗಳು-ತಿದ್ದುಪಡಿಗೆ ಶಿಫಾರಸುಗಳು ವಿಷಯ ಕುರಿತು ವಿಪ ಸದಸ್ಯ ಅರುಣ ಶಹಾಪುರ ಮಾತನಾಡಿದರು. ಶಿಕ್ಷಕರ ಸಮಸ್ಯೆಗಳ ಬಗ್ಗೆ ಸರಕಾರದ ಹಂತದಲ್ಲಿ ಗಮನ ಸೆಳೆದಿದ್ದೇವೆ. ಶಿಕ್ಷಕರಿಗೆ ಅನ್ಯಾಯವಾದರೆ ಸರಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

Advertisement

ಶೇಗುಣಸಿ ವಿರಕ್ತಮಠದ ಶ್ರೀ ಮಹಾಂತ ದೇವರು ವಿಚಾರಗಳನ್ನು ಮಂಡಿಸಿದರು. ಎಸ್‌.ಎಸ್‌.ಪಟ್ಟಣಶೆಟ್ಟಿ, ಎಲ್.ಎಸ್‌.ಬೀಳಗಿ, ಎಸ್‌.ಎಂ.ನದಾಫ, ಯು.ಎಸ್‌.ಪಾಟೀಲ, ಪಿ.ಪಿ. ಹನಮಗೌಡ್ರ, ಎಸ್‌.ಟಿ.ಬೋನಗೇರ, ಡಿ.ಬಿ.ಹಡಗಲಿ, ಮಹಾಂತೇಶ ಈಳಗೇರ, ಎಸ್‌.ವೈ. ಮಡಿವಾಳರ, ಎ.ಪಿ. ಮೇಟಿ, ಉಜ್ವಲ ಬಸರಿ ಗೋಷ್ಠಿಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next