Advertisement

ವಿಜ್ಞಾನಿಗಳ ಸೃಷ್ಟಿಸುವ ಹೊಣೆ ಶಿಕ್ಷಕರದ್ದು

07:06 AM Jan 19, 2019 | Team Udayavani |

ಶಹಾಬಾದ: ಭವಿಷ್ಯದ ವಿಜ್ಞಾನಿಗಳನ್ನು ಸೃಷ್ಟಿಸುವ ಹೆಚ್ಚಿನ ಹೊಣೆಗಾರಿಕೆ ಇರುವುದು ಶಿಕ್ಷಕರಲ್ಲಿ ಮಾತ್ರ ಎಂದು ಭಂಕೂರ ಸರಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕಿ ಸೀತಮ್ಮ ಎನ್‌. ಹೇಳಿದರು. ಭಂಕೂರ ಗ್ರಾಮದ ಬಸವ ಸಮಿತಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ವಿಜ್ಞಾನ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಯಾವುದೇ ಒಂದು ಸಮಸ್ಯೆ ಎದುರಾದಾಗ ಅದನ್ನು ಬಗೆಹರಿಸುವಲ್ಲಿ ವೈಜ್ಞಾನಿಕವಾಗಿ ಚಿಂತನೆ ನಡೆಸಬೇಕಾಗುತ್ತದೆ. ವಿಜ್ಞಾನ ವಿಷಯಗಳ ವಿಚಾರಧಾರೆ ಎತ್ತರಕ್ಕೆ ಕೊಂಡೊಯ್ಯುವಂತೆ ಮಾಡುತ್ತದೆ. ಚಿಕ್ಕಂದಿನಲ್ಲಿ ಮಕ್ಕಳಿಗೆ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಮೂಡಿಸುವುದರಿಂದ ಅವರಿಗೆ ಉನ್ನತ ಶಿಕ್ಷಣಕ್ಕೆ ಹೋಗಲು ಪ್ರೇರಣೆಯಾಗುತ್ತದೆ ಎಂದರು. ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಹೆಚ್ಚಿದಂತೆಲ್ಲ ದೇಶದ ಅಭಿವೃದ್ಧಿ ತಾನೆ ಮುಂದೆ ಸಾಗುತ್ತದೆ.ಆದ್ದರಿಂದ ಮಕ್ಕಳು ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಬೇಕೆಂದು ಹೇಳಿದರು.

ಶಿಕ್ಷಕ ವಿಷ್ಣತೀರ್ಥ ಆಲೂರ ಮಾತನಾಡಿ, ವಿಜ್ಞಾನ ಜೀವನದ ಅವಿಭಾಜ್ಯ ಅಂಗ. ದೈನಂದಿನ ಚಟುವಟಿಕೆಗಳಲ್ಲಿ ನಾವು ವಿಜ್ಞಾನವನ್ನೇ ಅಳವಡಿಸಿಕೊಂಡಿದ್ದೇವೆ. ವಿಜ್ಞಾನ ಬಿಟ್ಟು ನಾವಿಲ್ಲ, ನಮ್ಮನ್ನು ಬಿಟ್ಟು ವಿಜ್ಞಾನವಿಲ್ಲ ಎನ್ನುವುದು ಸತ್ಯ ಎಂದರು.

ಅತಿಥಿಯಾಗಿದ್ದ ಶಿಕ್ಷಕ ಅಲ್ತಾಫ್‌ ಹುಸೇನ್‌ ಮಾತನಾಡಿದರು. ಶಾಲೆ ಕಾರ್ಯದರ್ಶಿ ರೇವಣಸಿದ್ದಪ್ಪ ಮುಸ್ತಾರಿ, ಮುಖ್ಯ ಶಿಕ್ಷಕಿ ಅರುಣಾ ಜಾಯಿ, ಶಿಕ್ಷಕರಾದ ದತ್ತಾತ್ರೇಯ ಕುಲಕರ್ಣಿ, ರಮೇಶ ಅಳ್ಳೋಳ್ಳಿ, ರಶ್ಮಿ ಪಾಟೀಲ, ಶ್ರೀದೇವಿ ಗೌರಮ್ಮ, ಅನ್ನಪೂರ್ಣ ಸಿಂಘ, ಸುಧಿಧೀರ ಕುಲಕರ್ಣಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next