Advertisement

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರ ಮನವಿ

02:04 PM Jul 17, 2019 | Team Udayavani |

ಬಾಗಲಕೋಟೆ: ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕ ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ ಅವರಿಗೆ ಮನವಿ ಸಲ್ಲಿಸಿದರು.

Advertisement

ದೇಶದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ನವದೆಹಲಿಯ ಎಬಿಆರ್‌ಎಸ್‌ಎಂ ಮತ್ತು ಎಬಿಆರ್‌ಎಸ್‌ಎಂ ಜೊತೆಗೆ ಸಂಘಗಳನ್ನೊಗೊಂಡ ರಾಜ್ಯ ಸಂಘಟನೆಗಳು ಶಿಕ್ಷಕರ ಬೇಡಿಕೆಗಳಾದ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ವಾಯತ್ತ ಮಾಧ್ಯಮಿಕ ಶಿಕ್ಷಣದ ಕಮಿಷನ್‌ಗಳ ಸ್ಥಾಪನೆ, ಕೇಂದ್ರ ಸರ್ಕಾರದಿಂದ ಶೇ. 10 ಜಿಡಿಪಿ ಮತ್ತು ಶೇ. 30 ರಾಜ್ಯ ಸರ್ಕಾರದಿಂದ ಬಜೆಟ್‌ನಲ್ಲಿ ಖರ್ಚು ಮಾಡುವುದು. ಎಲ್ಲ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಕೇಂದ್ರ ಸರ್ಕಾರದ ಶಿಕ್ಷಕರಿಗೆ ನೀಡುವ ಸಮಾನ ವೇತನ ಮತ್ತು ಇತರೆ ಭತ್ತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಪಿಂಚಣಿ ಸೌಲಭ್ಯ ಮರಳಿ ಪಡೆದು ಹಳೆಯ ಪಿಂಚಣಿ ಸೌಲಭ್ಯ ಮುಂದುವರಿಸಬೇಕು. ಶಿಕ್ಷಣದ ಗುಣಮಟ್ಟ ಸುಧಾರಣೆ ಸಲುವಾಗಿ ಖಾಲಿ ಇರುವ ಅಲ್ಪಸಂಖ್ಯಾತ ಶಿಕ್ಷಕರ ಮತ್ತು ಪ್ರಾಚಾರ್ಯರ ಹುದ್ದೆ ಭರ್ತಿ ಮಾಡಬೇಕು. ಶಿಕ್ಷಣದ ವಾಣಿಜ್ಯೀಕರಣ ನಿಲ್ಲಿಸಬೇಕು. ಎಲ್ಲರಿಗೂ ಸಮಾನ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಶಿಕ್ಷಕರನ್ನು ಶಿಕ್ಷಣ ಇಲಾಖೆ ಹೊರತುಪಡಿಸಿ ಬೇರೆ ಕೆಲಸಗಳಿಂದ ಮುಕ್ತಿಗೊಳಿಸಿ ಕೇವಲ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಬೇಕು ಎಂದರು.

ಬಡ್ತಿಗಳ ನಿಯಮ ಸರಳೀಕರಣಗೊಳಿಸಬೇಕು. ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ನೀಡುವ ಎಲ್ಲ ಸೌಲಭ್ಯ ಒದಗಿಸಬೇಕು. ಒಂದೇ ಶಿಕ್ಷಣ, ಒಂದೇ ವೇತನ ನೀತಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಜಿ. ಸನ್ನಿ, ರಾಜ್ಯ ಕಾರ್ಯದರ್ಶಿ ಜಿ.ಕೆ. ತಳವಾರ, ನೋಡಲ್ ಅಧಿಕಾರಿ ಡಿ.ವಿ. ಸಿಕ್ಕೇರಿ, ಜಿಲ್ಲಾ ಕಾರ್ಯದರ್ಶಿ ಎ.ಆರ್‌. ಹಿರೇಮಠ, ಗೌರವಾಧ್ಯಕ್ಷ ಡಿ.ಎಂ. ರಾಠೊಡ, ಎಸ್‌.ಎ. ಬರಮಗೌಡರ, ಆರ್‌.ಐ. ಅರಕೇರಿ, ಎನ್‌.ಬಿ. ಲೋಕಾಪುರೆ, ವಿಷ್ಣು ಚವ್ಹಾಣ, ಎಲ್.ವಿ. ವಿರಕ್ತಮಠ, ಎಂ.ಎಚ್. ಮಹೀಂದ್ರಕರ, ಬಿ.ಎಚ್. ಲಮಾಣಿ, ಗಿರಿ ತಮ್ಮಣ್ಣವರ, ರಾಜು ಲಮಾಣಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next