Advertisement

“ಅಧ್ಯಾಪಕರು ಮಾಹಿತಿ ಸಂಗ್ರಹಣೆಗೆ ಮುಂದಾಗಿ’

11:51 PM Jul 13, 2019 | Team Udayavani |

ಹಂಪನಕಟ್ಟೆ: ಅಧ್ಯಾಪನ ವೃತ್ತಿಯಲ್ಲಿರುವವರು ತಮ್ಮ ವಲಯಕ್ಕಷ್ಟೇ ಸೀಮಿತವಾಗಿರಬಾರದು. ಬಹುಮೂಲದ ಮಾಹಿತಿ ಸಂಗ್ರಹಣೆಯೊಂದಿಗೆ ವಿದ್ಯಾರ್ಥಿ ಗಳಿಗೆ ಅದನ್ನು ಧಾರೆ ಎರೆಯಬೇಕು ಎಂದು ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲ ಪ್ರೊ| ಉದಯ ಕುಮಾರ್‌ ಹೇಳಿದರು.

Advertisement

ಮಂಗಳೂರು ವಿವಿ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ವತಿಯಿಂದ ವಿಶ್ವ ವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆದ ರಾಜ್ಯ ಶಾಸ್ತ್ರದ ಹೊಸ ಪಠ್ಯಕ್ರಮದ ಬಗೆಗಿನ ಕಾರ್ಯಾಗಾರವನ್ನು ಅವರು ಶನಿವಾರ ಉದ್ಘಾಟಿಸಿದರು.

ಪರಿಣಾಮಕಾರಿ ಬೋಧನೆಗೆ ಕೇವಲ ಪಠ್ಯ ವಿಷಯಗಳು ಸಾಕಾಗುವುದಿಲ್ಲ. ಜ್ಞಾನದ ಹಸಿವು ಅಧ್ಯಾಪಕರಲ್ಲಿ ನಿರಂತರ ವಾಗಿರಬೇಕು. ಪುಸ್ತಕ ಓದುವಿಕೆಯನ್ನು ರೂಢಿಸಿಕೊಳ್ಳಬೇಕು. ಅಧ್ಯಾಪಕರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡಾಗ ಬೋಧನೆಯಲ್ಲಿ ಧನಾತ್ಮಕ ಬದಲಾವಣೆ ಸಾಧ್ಯ ಎಂದವರು ಅಭಿಪ್ರಾಯಪಟ್ಟರು.

ಪ್ರಾಧ್ಯಾಪಕರಾದ ಪ್ರೊ| ಪಿ.ಎಲ್‌. ಧರ್ಮ, ಪ್ರೊ| ದಯಾನಂದ ನಾಯಕ್‌ ಹೊಸ ಪಠ್ಯಕ್ರಮಕ್ಕೆ ಸಂಬಂಧಿಸಿ ಮಾಹಿತಿ ನೀಡಿದರು. ಪ್ರಾಧ್ಯಾಪಕರಾದ ಡಾ| ಈಶ್ವರ ಭಟ್‌, ಜಯರಾಜ್‌ ಅಮೀನ್‌, ಗಣೇಶ್‌ ಶೆಟ್ಟಿ, ಪ್ರೊ| ಥೋಮಸ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next