Advertisement
ಈ ದೃಶ್ಯಗಳು ಸರಗೂರು ತಾಲೂಕಿನಗಡಿಭಾಗದ ಬಿ.ಮಟಕೆರೆ ಗ್ರಾಮದ ಆದಿವಾಸಿಆಶ್ರಯ ಶಾಲೆಯಲ್ಲಿ ಕಂಡು ಬರುತ್ತಿದ್ದು, ಒಟ್ಟಾರೆಈ ಶಾಲೆ ಅವ್ಯವಸ್ಥೆಗಳ ಆಗರವಾಗಿದೆ.ಬಿ.ಮಟಕೆರೆ ತಾಲೂಕಿನ ಗಡಿಭಾಗದ ಗ್ರಾಮ.ಇಲ್ಲಿ ಬಹುಸಂಖ್ಯೆಯಲ್ಲಿ ಆದಿವಾಸಿಗರು ವಾಸವಾಗಿರುವುದರಿಂದ ಅವರ ಮಕ್ಕಳ ಶೈಕ್ಷಣಿಕ ಪ್ರಗತಿಯಉದ್ದೇಶದಿಂದ ಸರ್ಕಾರ ಬಿ.ಮಟಕೆರೆಯಲ್ಲಿ1ರಿಂದ 7ನೇ ತರಗತಿ ತನಕ ಆದಿವಾಸಿಗರಿಗಾಗಿ ಆಶ್ರಮ ಶಾಲೆ ಆರಂಭಿಸಿದೆ. ಶಾಲೆಯಲ್ಲಿ ಇಬ್ಬರು ನಿಯೋಜಿತ ಶಿಕ್ಷಕರು ಹಾಗೂ 3 ಹೊರಗುತ್ತಿಗೆಶಿಕ್ಷಕರು ಸೇರಿದಂತೆ ಒಟ್ಟು ಐವರು ಶಿಕ್ಷಕರುಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಶಿಕ್ಷಕರಿಗೆ ಸಮಯದ ಪರಿಜ್ಞಾನವಿಲ್ಲ. ತಾಲೂಕಿನ ಗಡಿಭಾಗವಾದ್ದರಿಂದ ಈ ಕುಗ್ರಾಮಕ್ಕೆ ಅಧಿಕಾರಿಗಳಭೇಟಿ ವಿರಳ ಎಂಬುದನ್ನು ಮನಗಂಡ ಶಿಕ್ಷಕರುಶಾಲೆಗೆ ರಜೆಯನ್ನೂ ಹಾಕುವುದಿಕಲ್ಲ. ಶಾಲೆಗೂ ಹಾಜರಾಗುವುದಿಲ್ಲ.
Related Articles
Advertisement
ಬಾಲಕ, ಬಾಲಕಿಯರು ಮಲಗಲು ಒಂದೇ ಕೊಠಡಿ :
ಬಿ.ಮಟಕೆರೆ ಈ ಆಶ್ರಮ ಶಾಲೆಯಲ್ಲಿ 62 ವಿದ್ಯಾರ್ಥಿಗಳ ದಾಖಲಾತಿ ಇದೆ. ಆದರೆ, ಶಾಲೆಗೆ ಆಗಮಿಸುವುದು 35ರಿಂದ 40 ಮಕ್ಕಳು ಮಾತ್ರ. ಈ ವಸತಿ ಶಾಲೆಯಲ್ಲಿ ರಾತ್ರಿ ವೇಳೆ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಯಾವೊಬ್ಬ ಶಿಕ್ಷಕರೂ ಇರುವುದಿಲ್ಲ. ಬದಲಾಗಿ ಅಡುಗೆ ಸಿಬ್ಬಂದಿಗೆ ಈ ಹೊಣೆ ಹೊರಿಸಿದ್ದಾರೆ. ಜೊತೆಗೆ ರಾತ್ರಿ ವೇಳೆ ಒಂದೇ ಕೊಠಡಿಯಲ್ಲಿ ಬಾಲಕರು ಹಾಗೂ ಬಾಲಕಿಯರು ಮಲಗಬೇಕಾದ ಪರಿಸ್ಥಿತಿ ಇದೆ. ಪ್ರತ್ಯೇಕಕೊಠಡಿ ವ್ಯವಸ್ಥೆ ಮಾಡಿಲ್ಲ. ಪೋಷಕರಾದ ಆದಿವಾಸಿಗಳಲ್ಲಿ ಬಹುತೇಕ ಮಂದಿ ದುಷcಟಗಳಿಗೆ ಬಲಿಯಾಗಿರುತ್ತಾರೆ. ಪೋಷಕರ ಚಾಳಿ ಕೆಲ ಮಕ್ಕಳಿಗೆ ಬಂದಿರುತ್ತದೆ. ಹೀಗಾಗಿ ಯಾವುದೇ ರೀತಿ ಅವಘಡಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.
ಆಶ್ರಮ ಶಾಲೆಗಳ ಅವ್ಯವಸ್ಥೆ ಕುರಿತು ಆಗಾಗ ಸಭೆ ನಡೆಸುತ್ತಿರುತ್ತೇವೆ. ಕಳೆದ 3 ದಿನಗಳ ಹಿಂದಷ್ಟೇ ಸಭೆಯಲ್ಲಿ ಆಶ್ರಯಶಾಲೆಯಲ್ಲಿ ಉಳಿದುಕೊಂಡು ಕರ್ತವ್ಯ ನಿರ್ವಹಿಸ ಬೇಕು ಎಂದು ಸೂಚನೆ ನೀಡಿದ್ದೇವೆ. ಆದರೂ ಶಿಕ್ಷಕರು ಸರಿ ಪಡಿಸಿ ಕೊಳ್ಳುತ್ತಿಲ್ಲ, ಇನ್ನು ಬಿ.ಮಟಕೆರೆ ಆಶ್ರಯ ಶಾಲೆಯಲ್ಲಿ ಇಂದಿನಿಂದಲೇ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳನ್ನು ಪ್ರತೇಕವಾಗಿ ರಾತ್ರಿ ವೇಳೆ ಮಲಗಿಸಲು ಕ್ರಮವಹಿಸುತ್ತೇವೆ. – ನಾರಾಯಣ, 2 ಸ್ವಾಮಿ ತಾಲೂಕು ಗಿರಿಜನ ಅಭಿವೃದ್ಧಿ ಅಧಿಕಾರಿ
-ಎಚ್.ಬಿ.ಬಸವರಾಜು