Advertisement

ತೃತೀಯ ಲಿಂಗಿ ವಿದ್ಯಾರ್ಥಿಗೆ ಅಗೌರವ: ಶಿಕ್ಷಕನ ಬಂಧನ

08:31 PM Sep 07, 2022 | Team Udayavani |

ದುಬ್ಲಿನ್‌: ತೃತೀಯ ಲಿಂಗಿ ವಿದ್ಯಾರ್ಥಿಯೊಬ್ಬರನ್ನು ಸ್ತ್ರೀ ಅಥವಾ ಪುಲ್ಲಿಂಗ ಸಂಬೋಧಕ ಬಳಸದೆ ಮಾತನಾಡಿಸಲು ಒಪ್ಪದ ಶಿಕ್ಷಕರೊಬ್ಬರಿಗೆ ಯುರೋಪ್‌ನ ಐರ್ಲೆಂಡ್‌ನ‌ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದೆ.

Advertisement

ವಿಲ್ಸನ್‌ ಶಾಲೆಯ ಎನೋಚ್‌ ಬ್ರೂಕ್‌ ಶಿಕ್ಷೆಗೆ ಗುರಿಯಾದ ಶಿಕ್ಷಕ. ಶಾಲೆಯಲ್ಲಿರುವ ತೃತೀಯ ಲಿಂಗಿ ವಿದ್ಯಾರ್ಥಿಗೆ ಅವರು ಅವನು/ಅವಳು ಎಂದೇ ಸಂಬೋಧಿಸುವುದಾಗಿ ಹೇಳಿದ್ದಾರೆ.

ವಿದ್ಯಾರ್ಥಿ, ಅವರ ಪೋಷಕರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಮನವಿ ಮಾಡಿದರೂ ಈ ವಿಚಾರದಲ್ಲಿ ಎನೋಚ್‌ ಒಪ್ಪಿಲ್ಲ. ಇದು ಕ್ರೈಸ್ತ ಧರ್ಮದ ವಿರುದ್ಧ ಎಂದು ಅವರು ವಾದಿಸಿದ್ದಾರೆ.

ಇದಾದ ಬೆನ್ನಲ್ಲೇ ಶಾಲೆಯು ಎನೋಚ್‌ ಅವರನ್ನು ಕೆಲಸದಿಂದ ತೆಗೆದುಹಾಕಿದೆ. ಈ ವಿಚಾರವು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದು, ಶಿಕ್ಷಕನಿಗೆ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next