ಕೆ.ಆರ್.ನಗರ: ಸದೃಢ ಸಮಾಜ ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರು ಪಾತ್ರ ಅತ್ಯಂತ ಮಹತ್ವವಾದುದು ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವೈ.ಆರ್.ಪ್ರಕಾಶ್ ಹೇಳಿದರು.
ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹುದ್ದೆಯಿಂದ ನಿವೃತ್ತರಾದ ಎಂ.ಮಲ್ಲೇಶ್ ಮತ್ತು ಪ್ರಾಂಶುಪಾಲರಾಗಿ ಬಡ್ತಿ ಹೊಂದಿ ವರ್ಗಾವಣೆಗೊಂಡ ವೀರಪ್ಪಾಜಿಯವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತರೆ ಇಲಾಖೆಗಿಂತ ಶಿಕ್ಷಣ ಇಲಾಖೆಯಲ್ಲಿ ಮಾಡುವ ಸೇವೆ ಹೆಚ್ಚು ತೃಪ್ತಿ ನೀಡುತ್ತದೆ. ಕಾಲೇಜಿನ ಅಭಿವೃದ್ಧಿಗೆ ಮತ್ತು ಸಾವಿರಾರು ವಿದ್ಯಾರ್ಥಿಗಳ ಏಳಿಗೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ಮಲ್ಲೇಶ್ ಕರ್ತವ್ಯ ನಿಷ್ಠೆ ಮೆರೆದು ಪೋಷಕರ ಮತ್ತು ವಿದ್ಯಾರ್ಥಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಎಂ.ಮಲ್ಲೇಶ್ ಮತ್ತು ವೀರಪ್ಪಾಜಿರವರಿಗೆ ಉಪನ್ಯಾಸಕ ವೃಂದ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಬೀಳ್ಕೊಟ್ಟರು. ಕಾರ್ಯಕ್ರಮದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕ ಲಕ್ಕೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಭಾನುಮತಿ,
ಸದಸ್ಯ ಬಾಲೂರು ನಂಜುಂಡೇಗೌಡ, ಉಪ ಪ್ರಾಂಶುಪಾಲ ರಾಮಸ್ವಾಮಿ ಗೌಡ, ಉಪನ್ಯಾಸಕ ಎಂ.ಕೆ.ನಿಂಗರಾಜು, ಜಿ.ಮಹೇಶ್, ಮಂಜುಳ, ಕೆ.ವನಿತಾ, ಜಗದೀಶ್, ಯಶೋದಮ್ಮ, ಡಾ.ಕೆ.ಬಿಬಸಪ್ಪ, ಕೃಷ್ಣ, ರಾಜೇಂದ್ರ, ರಾಜಣ್ಣ, ಲೋಕೇಶ್ ಇತರರಿದ್ದರು.