Advertisement

ಶಿಕ್ಷಕರ ಸಂಬಳ ಶೀಘ್ರ ಏರಿಕೆ: ಪ್ರಮೋದ್‌

08:35 AM Sep 06, 2017 | Team Udayavani |

ಉಡುಪಿ: ರಾಜ್ಯ ಸರಕಾರವು 6ನೇ ವೇತನ ಆಯೋಗವನ್ನು ರಚನೆ ಮಾಡಿದೆ. ಆಯೋಗದ ವರದಿ ಶೀಘ್ರ ಸರಕಾರಕ್ಕೆ ಸಲ್ಲಿಕೆಯಾಗಲಿದ್ದು, ಆನಂತರದಲ್ಲಿ ಶಿಕ್ಷಕರ ಸಂಬಳ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಹೇಳಿದರು.

Advertisement

ಉಡುಪಿ ಜಿಲ್ಲಾಡಳಿತ ಹಾಗೂ ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಸಹಯೋಗದಲ್ಲಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಮಂಗಳವಾರ ನಡೆದ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರದಾನ ಮತ್ತು ಜಿಲ್ಲಾ ಮಟ್ಟದ ಸಾಧಕ ಶಾಲೆಗಳು, ಸಾಧಕ ಶಿಕ್ಷಕರಿಗೆ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿಯೇ ಅರ್ಥಪೂರ್ಣ ಶಿಕ್ಷಕರ ದಿನಾಚರಣೆ ಉಡುಪಿಯಲ್ಲಿ ನಡೆಯುತ್ತಿದೆ. ಲಕ್ಷಾಂತರ ಹಣವನ್ನು ಶಿಕ್ಷಕರಿಗೆ ಪ್ರೋತ್ಸಾಹ ಕರ ಧನವಾಗಿ ಡಾ| ಜಿ. ಶಂಕರ್‌ ಟ್ರಸ್ಟ್‌ ನವರು ನೀಡುತ್ತಿದ್ದಾರೆ. ಎಲ್ಲರ ಎತ್ತರದ ಸ್ಥಾನಮಾನಕ್ಕೆ ಅಡಿಪಾಯ ಶಿಕ್ಷಕರು. ಅವರು ಸಮಾಜ ಸುಧಾರಿಸುವ ನೈಜ ಶಕ್ತಿ. ಶಿಕ್ಷಕರು ಮಾಡಿದ ನೀತಿ ಪಾಠ, ಮೌಲ್ಯಯುತ ಶಿಕ್ಷಣ ಜೀವನಪೂರ್ತಿ ನೆನಪಿಗೆ ಬರುತ್ತದೆ. ಎಲ್ಲರು “ಮಾಜಿ’ ಗಳಾದರೂ, ಶಿಕ್ಷಕರು ಮಾತ್ರ ಮಾಜಿ ಗಳಾಗೋದಿಲ್ಲ ಎಂದವರು ತಿಳಿಸಿದರು.

ಡಾ| ಜಿ. ಶಂಕರ್‌ ಅವರನ್ನು ಸಚಿವರು ಸಮ್ಮಾನಿಸಿ ಗೌರವಿಸಿದರು. ಶಿಕ್ಷಕರ ವೃತ್ತಿ ಪರ ಅಭಿವೃದ್ಧಿ (ಟಿಪಿಡಿ) ಸಾಹಿತ್ಯವನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸ ಲಾಯಿತು. ಜಿ.ಪಂ. ಅಧ್ಯಕ್ಷ ದಿನಕರ್‌ ಬಾಬು, ಶಾಲಿನಿ ಶಂಕರ್‌, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಉಡುಪಿ ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್‌ ಹೆಗ್ಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಗಳಾ ಉಪಸ್ಥಿತರಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಶೇಖರ್‌ ಸ್ವಾಗತಿಸಿದರು. ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು. ನಾಗರಾಜ್‌ ವಂದಿಸಿದರು.

Advertisement

ಶಿಕ್ಷಕರು ಪ್ರೇರಕ ಶಕ್ತಿ: ಡಾ| ಜಿ. ಶಂಕರ್‌
ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್‌ ಅವರು ಮಾತನಾಡಿ, ಶಿಕ್ಷಕರು ಸಮಾಜದ ಪ್ರೇರಕ ಶಕ್ತಿ ಯಾಗಿದ್ದಾರೆ. ಶಿಕ್ಷಕರಿಗೆ ಸರಕಾರ ನೀಡುವ ಸಮ್ಮಾನದ ಗೌರವಧನ ಹೆಚ್ಚಿಸಬೇಕು. ರಾಜ್ಯದಲ್ಲಿ ಎಲ್ಲಿಯೂ ಮಾಡದ ರೀತಿಯಲ್ಲಿ ಉಡುಪಿಯಲ್ಲಿ ಶಿಕ್ಷಕರನ್ನು ಸಮ್ಮಾನಿಸಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next