Advertisement

ಶಿಕ್ಷಕರ ನೇಮಕಾತಿ ಪರೀಕ್ಷೆ ಕೀ ಉತ್ತರ ಬಿಡುಗಡೆ

11:07 PM Jun 18, 2019 | Lakshmi GovindaRaj |

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಯ (6ರಿಂದ8ನೇ ತರಗತಿ) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಕೀ ಉತ್ತರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.

Advertisement

ಅಭ್ಯರ್ಥಿಗಳು ಜೂ.25ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಇಲಾಖೆ ವೆಬ್‌ಸೈಟ್‌ //schooleducation.kar.nic.in ನಲ್ಲಿ ಮಂಗಳವಾರ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪತ್ರಿಕೆ-1 ಮತ್ತು 2ರ ಕೀ ಉತ್ತರಗಳನ್ನು ಪ್ರಕಟಿಸಿದೆ.

ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಗಳಿದ್ದಲ್ಲಿ ಆನ್‌ಲೈನ್‌ ಮೂಲಕ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬಹುದು. ದಾಖಲೆಗಳಿಲ್ಲದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುತ್ತದೆ. ಜರ್ನಲ್‌, ನಿಯತಕಾಲಿಕೆಗಳು, ವೈಯಕ್ತಿಕ ಪ್ರಕಟಣೆಗಳು, ಗೈಡ್ಸ್‌ ಮತ್ತು ಅಂತರ್ಜಾಲ ಮೂಲಗಳು (ವಿಕಿಪೀಡಿಯಾ, ಗೂಗಲ್‌) ಹಾಗೂ ಪತ್ರಿಕಾ ಲೇಖನಗಳನ್ನು ಪೂರಕ ದಾಖಲೆಗಳೆಂದು ಪರಿಗಣಿಸಲಾಗುವುದಿಲ್ಲ.

ಅಭ್ಯರ್ಥಿಗಳು ಒಂದು ಪ್ರಶ್ನೆಗೆ ಒಂದು ಬಾರಿ ಮಾತ್ರ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಜೂ.25ರ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next