ಹಾವೇರಿ: ಮಕ್ಕಳೇ ದೇಶದ ಭವಿಷ್ಯವಾಗಿದ್ದು, ಮಕ್ಕಳ ಬದುಕಿಗೆ ಶಿಕ್ಷಕರು ಹಾಗೂ ಪಾಲಕರು ಮಾದರಿಯಾಗಿ ಅವರ ವ್ಯಕ್ತಿತ್ವ ವಿಕಾಸಕ್ಕೆ ಪುರಕ ವಾತಾವರಣ ನಿರ್ಮಿಸಲು ಮುಂದಾಗಬೇಕು ಎಂದು ಶಿಕ್ಷಣ ಪ್ರೇಮಿ ಬಸಪ್ಪ ಕಡ್ಲೆಪ್ಪನವರ ಹೇಳಿದರು.
ಸವಣೂರ ಹಿರೇಮುಗದೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ ಹಾಗೂ ಹಿರೆಮುಗದೂರಿನ ಅಮ್ಮಾ ಸಂಸ್ಥೆ ಆಶ್ರಯದಲ್ಲಿ ಮಕ್ಕಳ ದಿನಾಚಾರಣೆ ಹಾಗೂ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮ ದಿನದ ನೆನೆಪಿಗಾಗಿ ಮಕ್ಕಳ ದಿನಾಚಾರಣೆ ಮಾಡಲಾಗಿದೆ. ಈ ದಿನ ಮಕ್ಕಳೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದು, ಇದೊಂದು ಮಹತ್ವ ಪುರ್ಣವಾದ ರಾಷ್ಟೀಯ ಹಬ್ಬವಾಗಲಿ. ದೇಶದಲ್ಲಿ ಶಿಕ್ಷಕರು ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ ಎಂದರು. ಚುಸಾಪ ತಾಲೂಕಾಧ್ಯಕ್ಷ ಗಂಗಯ್ಯ ಎಸ್. ಕುಲಕರ್ಣಿ ಮಾತನಾಡಿ, ಶಿಕ್ಷಕರು ಮಕ್ಕಳ ಕ್ರೀಡೆ, ಸಾಹಿತ್ಯ ಹಾಗೂ ಕಲಿಕೆಯಲ್ಲಿ ಸಾಧನೆಗೈಯಲು ನಿರಂತರ ಶ್ರಮವಹಿಸಬೇಕು. ಮಕ್ಕಳು ಸಾಹಿತ್ಯಾಭಿರುಚಿ ಬೆಳಿಸಿಕೊಂಡು ಸಾಧನೆ ಮಾಡಲು ಮುಂದಾಗಬೇಕು ಎಂದರು.
ಮುಖ್ಯೋಪಾಧ್ಯಾಯ ಸಿ.ಪಿ. ಭಜಂತ್ರಿ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಮಹೇಶ ಕೋಳೂರ, ವಿಜಯಲಕ್ಷ್ಮೀ ಅಂದಾನೆಪ್ಪನವರ, ಪಲ್ಲವಿ ಆರೇರ ಹಾಗೂ ಅಧ್ಯಕ್ಷತೆ ವಹಿಸಿದ ಚೈತ್ರಾ ಮರಾಠೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ವಿಜಯಶಾಲಿಗಳಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಗ್ರಾಪಂ ಸದಸ್ಯ ಈರಣ್ಣ ಚಪ್ಪರದಹಳ್ಳಿಮಠ ಹಾಗೂ ಪತ್ರಕರ್ತ ನಿಂಗಪ್ಪ ಆರೇರ ಮಕ್ಕಳ ದಿನಾಚಾರಣೆ ಹಾಗೂ ಶಾಲೆ ಅಭಿವೃದ್ಧಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷರಾದ ಕವಿತಾ ಮರಾಠಿ, ಸದಸ್ಯರಾದ ಬಿಡಿ ಕೊಳೂರ, ಸುಧಾ ಮೇವುಂಡಿ, ನಾಗಮ್ಮ ಮೂಲಿಮನಿ, ಶಿಕ್ಷಕ ವೃಂದದವರಾದ ಜೆ.ಬಿ. ತಳವಾರ, ಪಿ.ಜಿ. ರೋಣಿಮಠ, ಆರ್.ಜಿ. ಲಮಾಣಿ, ಕೆ.ಎಲ್. ಕಾರಗಿ, ಎಲ್.ಬಿ. ಆಲೂರ, ಚುಸಾಪ ರವಿ ಇಚ್ಚಂಗಿ, ಮಂಜು ಬಡಿಗೇರ ಊರಿನ ನಾಗರಿಕರು. ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿ ಚೇತನ ಮೇವುಂಡಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದನು.