ಹೊನ್ನಾಳಿ : ಶಿಕ್ಷಕರು ತಂತ್ರಜ್ಞಾನ ಬಳಸಿಕೊಂಡು ಕಲಿಕೆಯನ್ನು ಪರಿಣಾಮಕಾರಿಯಾಗಿಸಬಹುದು. ಆದ್ದರಿಂದ, ಎಲ್ಲ ಶಾಲೆಗಳಲ್ಲಿ ಡಿಜಿಟಲ್ ಕ್ಲಾಸ್ ರೂಂ ಸ್ಥಾಪನೆ ಮಾಡುವತ್ತ ಚಿಂತನೆ ನಡೆಯಬೇಕು ಎಂದು ಭಾರತೀಯ ಜೀವ ವಿಮಾ ನಿಗಮದ ಹೊನ್ನಾಳಿ ಶಾಖಾ ವ್ಯವಸ್ಥಾಪಕ ಜಯಸಿಂಹ ಜಯರಪು ಹೇಳಿದರು.
ತಾಲೂಕಿನ ಬೆನಕನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಜಿಟಲ್ ಕ್ಲಾಸ್ ರೂಂ ಉದ್ಘಾಟಿಸಿ ಅವರು ಮಾತನಾಡಿದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಗಾಧ ಬೆಳವಣಿಗೆಯಿಂದಾಗಿ ಇಂದು ಇಡೀ ಜಗತ್ತೇ ಒಂದು ಪುಟ್ಟ ಹಳ್ಳಿಯಂತಾಗಿದೆ. ಇಂತ ಸಂದರ್ಭದಲ್ಲಿ ನಮ್ಮನ್ನು ನಾವು ತಂತ್ರಜ್ಞಾನಕ್ಕೆ ತೆರೆದುಕೊಳ್ಳದಿದ್ದರೆ ನಮಗೇ ನಷ್ಟವಾಗುತ್ತದೆ. ಹಾಗಾಗಿ, ಎಲ್ಲರೂ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಕರೆಯಿತ್ತರು.
ಎಲ್‌ಐಸಿ ಚೇರ್‌ಮನ್ ಕ್ಲಬ್ ಸದಸ್ಯೆ ಟಿ.ಜಿ.ರೇಷ್ಮಾ ಮಾತನಾಡಿ, ಶಾಲೆಗಳ ಅಭಿವೃದ್ಧಿಗೆ ಮುಂದಾಗುತ್ತಿರುವ ಭಾರತೀಯ ಜೀವ ವಿಮಾ ನಿಗಮದ ನಡೆ ಮಾದರಿಯಾದುದು. ನಿಗಮ ನೀಡುತ್ತಿರುವ ಒಂದು ಲಕ್ಷ ರೂ. ಸಾರ್ವಜನಿಕರ ಪಾಲಿಸಿಯ ಹಣದ ಭಾಗವಾಗಿದೆ. ಬೇಡುವ ಕೈಗಳು ಶುದ್ಧವಾಗಿದ್ದರೆ ನೀಡುವ ಕೈಗಳಿಗೆ ಕೊರತೆ ಇರುವುದಿಲ್ಲ ಎಂಬುದಕ್ಕೆ ಇದು ನಿದರ್ಶನವಾಗಿದೆ ಎಂದು ತಿಳಿಸಿದರು.
ಬೆನಕನಹಳ್ಳಿ ವಿಎಸ್ಸೆಸ್ಸೆನ್ ನಿರ್ದೇಶಕ ಕೆ. ಕರೇಗೌಡ ಮಾತನಾಡಿ, ಸತತ ಮೂರು ವರ್ಷಗಳಿಂದ ಬೆನಕನಹಳ್ಳಿ ಗ್ರಾಮ ವಿಮಾ ಗ್ರಾಮವಾಗಿ ಘೋಷಣೆಯಾಗುತ್ತಿರುವುದು ಸಂತಸದ ಸಂಗತಿ. ಶಾಲಾ ವಿದ್ಯಾರ್ಥಿಗಳು ಶಿಕ್ಷಕರ ಸಮರ್ಥ ಮಾರ್ಗದರ್ಶನದಲ್ಲಿ ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹೊನ್ನಾಳಿಯ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಿಇಒ ಎಚ್.ಎನ್. ರುದ್ರೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ಉನ್ನತೀಕರಣಗೊಳ್ಳಬೇಕು. ಅವುಗಳಿಗೆ ತಂತ್ರಜ್ಞಾನದ ಸ್ಪರ್ಶ ನೀಡಬೇಕು. ಆಗ, ಪೋಷಕರು ಸರಕಾರಿ ಶಾಲೆಗಳತ್ತ ಮುಖಮಾಡುತ್ತಾರೆ ಎಂದು ತಿಳಿಸಿದರು. ಬಿಆರ್‌ಪಿ ಜಿ.ಕೆ.ಅರುಣ್, ಭಾರತೀಯ ಜೀವ ವಿಮಾ ನಿಗಮದ ಉಪ ಶಾಖಾಧಿ ಕಾರಿ ಗೋಪಾಲಾಚಾರಿ, ಅಭಿವೃದ್ಧಿ ಅಧಿ ಕಾರಿ ಎಸ್.ಬಿ. ಕಿರಣ್, ಬೆನಕನಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಪುಷ್ಪಾಬಾಯಿ, ಎಸ್ಡಿಎಂಸಿ ಅಧ್ಯಕ್ಷ ಎಂ.ಬಿ. ಗಣೇಶ್, ಉಪಾಧ್ಯಕ್ಷೆ ಸುಧಾ, ಸದಸ್ಯ ಕುಮಾರ್, ಸಿಆರ್‌ಪಿ ಮೇನಕಾ, ಮುಖ್ಯಶಿಕ್ಷಕ ಕೋಟೆಪ್ಪ, ಶಿಕ್ಷಕ ಜಯಪ್ಪ, ಶಿಕ್ಷಕಿಯರಾದ ನಳಿನಾ, ಅರ್ಚನಾ, ಬಿ. ಪ್ರೇಮಾ ಮಾತನಾಡಿದರು. ಬೆನಕನಹಳ್ಳಿ ಗ್ರಾಪಂ ಸದಸ್ಯರಾದ ಎಚ್.ಜಿ.ರವಿಕುಮಾರ್, ಪಿ.ಮಂಜುನಾಥ್, ಗದ್ದಿಗೇಶ್, ಸುಧಾ, ದೀಪಾ, ವಸಂತಮ್ಮ, ಎಚ್.ಜಿ.ಹಾಲೇಶಪ್ಪ, ಪಿಡಿಒ ಮಲ್ಲಿಕಾರ್ಜುನ್, ಎಲ್‌ಐಸಿ ಪ್ರತಿನಿಧಿ ಗಳಾದ ಕರಿಬಸಮ್ಮ, ಗೀತಾ, ಮುಖಂಡ ಮಂಜಪ್ಪ ಉಪಸ್ಥಿತರಿದ್ದರ