Advertisement
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಮಾಹಿತಿ ಆನ್‌ಲೈನ್‌ನಲ್ಲಿ ಕ್ರೋಢೀ ಕರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲೇ ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ(ಎಸ್‌ಎಟಿಎಸ್) ಜಾರಿಗೆ ತಂದಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮಾಹಿತಿಯನ್ನು ಈ ವ್ಯವಸ್ಥೆಯ ಮೂಲಕವೇ ಆನ್‌ಲೈನ್ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಮಾಹಿತಿಯನ್ನು ಮುಖ್ಯ ಶಿಕ್ಷಕರು ಸಹಿತವಾಗಿ ಆಯಾ ವಿಷಯ ಶಿಕ್ಷಕರು ಎಸ್‌ಎಟಿಎಸ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಆದರೆ, ಶಿಕ್ಷಕರಿಗೆ ಅಪ್‌ಡೇಟ್ ಮಾಡಲು ಸಾಧ್ಯವಾಗುತ್ತಿಲ್ಲ. ನಗರ ಪ್ರದೇಶದ ಶಾಲೆಯ ಶಿಕ್ಷಕರಿಗೂ ಸರ್ವರ್ ಸಿಗುತ್ತಿಲ್ಲ. ಇನ್ನು ಗ್ರಾಮೀಣ ಪ್ರದೇಶದ ಶಿಕ್ಷಕರಂತೂ ವಿದ್ಯಾರ್ಥಿಗಳ ಮಾಹಿತಿ ಅಪ್‌ಡೇಟ್‌ಗೆ ಎಲ್ಲಿಲ್ಲದ ಸಾಹಸ ಮಾಡುತ್ತಿದ್ದಾರೆ.
ಬೇಕಾಗುತ್ತದೆ. ಸರ್ವರ್ ಸರಿ ಇಲ್ಲದಿರುವುದರಿಂದ ಶಿಕ್ಷಕರಿಗೇ ದಿನ ಪೂರ್ತಿ ಇದೇ ಕೆಲಸವಾಗಿಬಿಟ್ಟಿದೆ ಎಂದು ಚಿತ್ರದುರ್ಗ ಮೂಲಕ ಶಿಕ್ಷಕರೊಬ್ಬರು ಸಮಸ್ಯೆ ವಿವರಿಸಿದರು. ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಪ್ರವೇಶಾತಿ, ಪ್ರೌಢಶಾಲೆಯ ಪ್ರವೇಶಾತಿ
ಯನ್ನು ಪ್ರತ್ಯೇಕವಾಗಿ ಅಪ್‌ಡೇಟ್ ಮಾಡಬೇಕು. ಬೆಂಗಳೂರು ನಗರ ಹಾಗೂ ಜಿಲ್ಲಾ ಕೇಂದ್ರದ ಕೆಲವು ಶಾಲೆಗಳಲ್ಲಿ ಕಂಪ್ಯೂಟರ್ ಹಾಗೂ ಇಂಟರ್‌ನೆಟ್ ಚೆನ್ನಾಗಿದೆ. ಇಂತಹ ಶಾಲೆಯ ಶಿಕ್ಷಕರೇ ಸರ್ವರ್ ಸಮಸ್ಯೆಯಿಂದ ವಿದ್ಯಾರ್ಥಿಗಳ ಮಾಹಿತಿ ಅಪ್ ಲೋಡ್ ಮಾಡಲಾಗದೇ ಗೋಳಾಡುತ್ತಿದ್ದಾರೆ. ಇನ್ನು ಗ್ರಾಮೀಣ ಪ್ರದೇಶದ ಶಿಕ್ಷಕರಂತೂ ತಮ್ಮ ಮೊಬೈಲ್ ನಲ್ಲೇ ಅಪ್‌ಲೋಡ್ ಮಾಡುವ ಸಾಹಸಕ್ಕೆ ಇಳಿದಿದ್ದಾರೆ ಎಂದು ಬೆಂಗಳೂರಿನ ಶಿಕ್ಷಕರೊಬ್ಬರು ಮಾಹಿತಿ ನೀಡಿದರು. ಡಿ.12 ಡೆಡ್‌ಲೈನ್: ಪ್ರಸ್ತಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಸ್ಟೂಡೆಂಟ್ ಅಚೀವ್‌ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ ನಲ್ಲಿ ಅಪ್‌ಲೋಡ್ ಮಾಡಲು ಡಿ.12 ಕೊನೆಯ ದಿನವಾಗಿದೆ.
Related Articles
Advertisement
ಸಿಆರ್‌ಪಿಗಳಿಗೆ ಟ್ಯಾಬ್ಲೆಟ್ವಿದ್ಯಾರ್ಥಿಗಳ ಟ್ರ್ಯಾಕ್ ರೆಕಾರ್ಡ್ ದಾಖಲಿಸಲು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಿಗೆ 12 ಸಾವಿರ ರೂ. ಮೌಲ್ಯದ ಗುಣಮಟ್ಟದ ಟ್ಯಾಬ್ ಒದಗಿಸಲು ಇಲಾಖೆಯಿಂದ ತೀರ್ಮಾನ ತೆಗೆದುಕೊಂಡಿದೆ. ಸಿಆರ್‌ಪಿ ವ್ಯಾಪ್ತಿಯಲ್ಲಿ 15ರಿಂದ 30 ಶಾಲೆಗಳು ಇರುತ್ತದೆ. ಟ್ಯಾಬ್ ಮೂಲಕ ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಯ ಮಕ್ಕಳ ಹಾಜರಾತಿಯನ್ನು ಪ್ರತಿ ತಿಂಗಳು ಅಪ್ ಡೇಟ್ ಮಾಡಲಿದ್ದಾರೆ. ಬಿಸಿಯೂಟ, ಶೂ, ಸಾಕ್ಸ್, ಹಾಲು, ಸಮವಸ್ತ್ರ ವಿತರಣೆ, ಸೈಕಲ್ ವಿತರಣೆ, ಪಠ್ಯಪುಸ್ತಕ ವಿತರಣೆ ಸೇರಿ ಸರ್ಕಾರದ ಯೋಜನೆಯ ಅನುಷ್ಠಾನದ ಮಾಹಿತಿ ಆನ್‌ಲೈನ್‌ನಲ್ಲೇ ಅಂಕಿಅಂಶ ಸಹಿತವಾಗಿ ಅಪ್‌ಡೇಟ್ ಮಾಡಲು ಸೂಚಿಸಲಾಗಿದೆ. ಸ್ಟೂಡೆಂಟ್ ಅಚಿವ್‌ಮೆಂಟ್ ಟ್ರ್ಯಾಕಿಂಗ್ ಸಿಸ್ಟಂನಲ್ಲಿ ವಿದ್ಯಾರ್ಥಿಗಳ ಮಾಹಿತಿ ಅಪ್‌ಡೇಟ್‌ಗೆ ಸರ್ವರ್ ಸಮಸ್ಯೆ ಇರುವುದು ನಿಜ. ಸಮಸ್ಯೆ ಸರಿಪಡಿಸಲು ಬೇಕಾದ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮಾಹಿತಿ ಅಪ್‌ಡೇಟ್‌ಗೆ ಡಿ.12 ಕೊನೆಯ ದಿನ.
●ವಿ.ಸುಮಂಗಳಾ, ಎಸ್ಸೆಸ್ಸೆಲ್ಸಿ ಬೋರ್ಡ್ ನಿರ್ದೇಶಕಿ ರಾಜು ಖಾರ್ವಿ ಕೊಡೇರಿ