Advertisement

ಸೆ. 5ರಂದೇ ಶಿಕ್ಷಕರ ದಿನಾಚರಣೆ: ಬಿಇಒ ಸೂಚನೆ

12:49 PM May 26, 2018 | Team Udayavani |

ನಗರ: ಶಿಕ್ಷಕರ ದಿನವನ್ನು ವಿವಿಧ ದಿನಗಳಲ್ಲಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗುವುದು ಸರಿಯಲ್ಲ. ಸೆ. 5ರಂದೇ ಶಿಕ್ಷಕರ ದಿನವನ್ನು ಆಚರಿಸಬೇಕು ಎಂದು ಸಮನ್ವಯ ಅಧಿಕಾರಿ ವಿಷ್ಣು ಪ್ರಸಾದ್‌ ಹೇಳಿದರು. ಇಲ್ಲಿನ ಸಂತ ವಿಕ್ಟರನ ಬಾಲಿಕಾ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಶಿಕ್ಷಕರ ದಿನವನ್ನು ಕೆಲವು ಶಾಲೆಗಳಲ್ಲಿ ನಿಗದಿತ ದಿನಗಳಲ್ಲಿ ಆಚರಿಸುತ್ತಿಲ್ಲ. ಪ್ರತಿ ವರ್ಷ ಎಲ್ಲ ಶಾಲೆಗಳಲ್ಲಿ ಸೆ. 5ರಂದೇ ಶಿಕ್ಷಕರ ದಿನವನ್ನು ಆಚರಿಸಬೇಕು. ಇದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಲೆಯಲ್ಲಿ ಹಬ್ಬಗಳನ್ನು ಪೂರ್ತಿ ದಿನ ಆಚರಿಸಿ ಕಲಿಕಾ ಸಮಯವನ್ನು ದುರುಪಯೋಗ ಮಾಡಬಾರದು. ಬೆಳಗ್ಗೆ ಪ್ರಾರ್ಥನೆ, ಸುಭಾಷಿತ, ದಿನಪತ್ರಿಕೆ ವಾಚನ ಮುಂತಾದ ಕಾರ್ಯಕ್ರಮವನ್ನು ಕೇವಲ 20 ನಿಮಿಷಕ್ಕೆ ಸೀಮಿತಗೊಳಿಸಬೇಕು. ಕಲಿಕಾ ಸಮಯದಲ್ಲಿ ಮಕ್ಕಳಿಗೆ ಹಾಲು ವಿತರಿಸಬಾರದು. ಖರೀದಿ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರಲ್ಲದೆ, ಶಿಕ್ಷಣ ಇಲಾಖೆಯ ಶೈಕ್ಷಣಿಕ ಸಾಲಿನ ಸುತ್ತೋಲೆಯನ್ನು ವಿವರಿಸಿದರು.

ತರಕಾರಿ ಬೆಳೆಸಿ
ಬಿಸಿಯೂಟದ ನಿಯಮಾವಳಿಗಳನ್ನು ತಿಳಿಸಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್‌, ಕಳೆದ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ರೀತಿಯಲ್ಲಿ ಬಿಸಿಯೂಟದ ನಿರ್ವಹಣೆ ಮಾಡಲಾಗಿದೆ. ಬಿಸಿಯೂಟಕ್ಕೆ ಬೇಕಾದ ವಸ್ತುಗಳಿಗೆ ಒಂದು ತಿಂಗಳ ಮೊದಲೇ ಬೇಡಿಕೆ ಸಲ್ಲಿಸಬೇಕು. ಸ್ವತ್ಛತೆಗೆ ಆದ್ಯತೆ ಕೊಡಬೇಕು. ಬಿಸಿಯೂಟಕ್ಕೆ ಬೇಕಾದ ತರಕಾರಿಯನ್ನು ಶಾಲೆಯಲ್ಲೇ ಬೆಳೆಸಬಹುದು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎನ್‌. ಮಾತನಾಡಿ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾವಾರು ಫ‌ಲಿತಾಂಶವನ್ನು ಹೆಚ್ಚಿಸುವ ಪ್ರಯತ್ನ ಶಿಕ್ಷಕರಿಂದ ಆಗಬೇಕು ಎಂದರು. ಅಲ್ಲದೆ ಇನ್ನಿತರ ಸಲಹೆ ಸೂಚನೆಗಳನ್ನು ನೀಡಿದರು. ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಕುಕ್ಕ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next