Advertisement

ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಿ: ಹಾಲಪ್ಪ

05:31 PM Nov 08, 2017 | |

ಸೊರಬ: ರಾಜಕೀಯ ಷಡ್ಯಂತ್ರದಿಂದ ತಮ್ಮ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ತಾವು ಮಾಡದಿರುವ ತಪ್ಪಿಗೆ ನ್ಯಾಯಾಲಯವು ಪ್ರಕರಣವನ್ನು ದೋಷಮುಕ್ತಗೊಳಿಸಲಿ ಎಂದು ದೇವರಿಗೆ ಹರಕೆ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ಚಂದ್ರಗುತ್ತಿ ರೇಣಕಾಂಬಾ ದೇವಿಗೆ ಮಂಗಳವಾರ ಮಾಜಿ ಸಚಿವ ಎಚ್‌. ಹಾಲಪ್ಪ ಅವರು ವಿಶೇಷ ಪೂಜೆ ನೆರವೇರಿಸಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ರಾಜಕೀಯ ಕುತಂತ್ರಿಗಳ ಕೈವಾಡದಿಂದ ತಾವು ಮಾಡದಿರುವ ತಪ್ಪಿಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಅಧಿಕಾರ ಕಳೆದುಕೊಳ್ಳುವಂತಾಯಿತು. ಯಾವುದೇ ತಪ್ಪು ಮಾಡದಿರುವುದರಿಂದ ನ್ಯಾಯಾಲಯದಲ್ಲಿ ತಮ್ಮ ಪರವಾಗಿ ನ್ಯಾಯ ಸಿಗಲಿ ಎಂದು ರೇಣುಕಾಂಬಾ ದೇವಿಗೆ ಹರಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿಸಿದ್ದೇನೆ. ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲು ಕುಮ್ಮಕ್ಕು ನೀಡಿದವರಿಗೆ ನಾನು ಹಾಕಿದ ಪ್ರಶ್ನೆಗಳಿಗೆ 
ಉತ್ತರಿಸಲು ಇದುವರೆಗೂ ಸಾಧ್ಯವಾಗದೆ ಅವರ ತಪ್ಪನ್ನು ಒಪ್ಪಿಕೊಂಡಂತಾಗಿದೆ. ಇದರಿಂದ ತಾಲೂಕಿನ ಜನತೆಗೆ ಹಾಲಪ್ಪ ಅವರ ಮೇಲಿನ ಅಭಿಮಾನ ಹಾಗೂ ನಂಬಿಕೆ ದ್ವಿಗುಣವಾಗಿದೆ ಎಂದರು.

ತಾಲೂಕಿನಲ್ಲಿ ತಳಮಟ್ಟದಿಂದ ಪಕ್ಷ ಕಟ್ಟಿದ ತಮಗೆ ಪಕ್ಷವು ಟಿಕೆಟ್‌ ಕೊಡುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಭವಿಷ್ಯ ಇನ್ನಷ್ಟು ಭದ್ರವಾಗಿ ಜನಸಾಮಾನ್ಯರ ಕೆಲಸ ನಿರ್ವಹಿಸಲು ಅಧಿಕಾರ ಸಿಗುವುದನ್ನು ಎದುರು ನೋಡುತ್ತಿರುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ 50 ವರ್ಷದ ಕುಟುಂಬ ರಾಜಕಾರಣದಲ್ಲಿ ಎಲ್ಲಾ ಅಧಿಕಾರಗಳನ್ನು ಅನುಭವಿಸಿದವರು ತಾಲೂಕಿಗೆ ಶಾಶ್ವತ ನೀರಾವರಿ ಕಲ್ಪಿಸಲಿಲ್ಲ. ತಾಲೂಕಿನ ಜನರು ಕುಟುಂಬ ರಾಜಕಾರಣದಿಂದ ಬೇಸತ್ತು ಎಚ್ಚರವಾಗಿದ್ದಾರೆ. ಅಂಥವರನ್ನು ದಾರಿತಪ್ಪಿಸಿ ಮತ ಪಡೆಯುವ ಗಿಮಿಕ್‌ನಿಂದ ಚುನಾವಣೆ ಸಮಿಪಿಸುತ್ತಿದ್ದಂತೆ ಪಾದಯಾತ್ರೆ ಹಮ್ಮಿಕೊಂಡಿರುವುದಕ್ಕೆ
ನಾಚಿಕೆಯಾಗುವುದಿಲ್ಲವೇ? ತಾಲೂಕನ್ನು ಅಭಿವೃದ್ಧಿಗೊಳಿಸುವ ಯಾವುದೇ ಚಿಂತನೆಗಳಿಲ್ಲದೆ, ಅಧಿಕಾರ ಹಿಡಿಯುವ ಆಸೆಯಿಂದ ಜನರ ಬಳಿ ಗಿಮಿಕ್‌ ರಾಜಕಾರಣ ಮಾಡುವವರಿಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದರು.

ಬರಗಾಲದ ಮಧ್ಯೆ ಜನರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನೀಡದೆ ಅಡ್ಡಾ-ದುಡ್ಡಿಗೆ ಬೆಳೆಗಳನ್ನು ಖರೀದಿ ಮಾಡುವುದು ಖಂಡನೀಯ. ಈ ಸಮಸ್ಯೆ ತಿಳಿದಿದ್ದರೂ ಎಚ್ಚೆತ್ತುಕೊಂಡು ರೈತರ ನೆರವಿಗೆ ಬರದೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾ  ಕಾರಿ ಹಾಗೂ ತಹಶೀಲ್ದಾರರು ಮಲಗಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಲಪ್ಪ ಅವರ ಪತ್ನಿ ಯಶೋಧಾ ಹಾಲಪ್ಪ, ಪ್ರಮುಖರಾದ ಪಾಣಿ ರಾಜಪ್ಪ, ವಿನಯ್‌, ಬೆನವಪ್ಪ ಮರೂರು, ಚಂದ್ರಪ್ಪ ಅಂಗಡಿ, ಪರಮೇಶ್ವರ, ಪರಶುರಾಮ್‌, ವಿಶ್ವ ಹೆಚ್ಚೆ, ರಾಜಶೇಖರ್‌ ಗೌಡ, ಶಿವಪ್ಪ, ಚಂದ್ರಪ್ಪ ಉಳವಿ, ಸತೀಶ್‌ ಗೌಡ, ವಿನಾಯಕ್‌, ಶ್ರೀನಿವಾಸ್‌ ಭಟ್‌, ಕೇಶವಪ್ಪ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next