Advertisement

ವಿವಾದ ಸೃಷ್ಟಿಸುವರಿಗೆ ಬುದ್ಧಿ ಕಲಿಸಿ

10:48 AM Sep 01, 2017 | Team Udayavani |

ಅಫಜಲಪುರ: ವೀರಶೈವ-ಲಿಂಗಾಯತ ಬೇರೆಬೇರೆಯಲ್ಲ. ಆದರೂ ಕೆಲವು ರಾಜಕೀಯ ನಾಯಕರು, ನಕಲಿ ಸಮಾಜ ಸುಧಾರಕರು ಸಮಾಜದಲ್ಲಿ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದು ಯಾವುದು ನಡೆಯೋದಿಲ್ಲ. ಸುಮ್ಮನೆ ವಿವಾದ ಸೃಷ್ಟಿಸುತ್ತಿರುವರಿಗೆ ಬುದ್ಧಿ ಕಲಿಸೋಣ ಎಂದು ಚಿಂತಕ ಜಾಫರ್‌
ಪಟೇಲ್‌ ಹೇಳಿದರು.

Advertisement

ಪಟ್ಟಣದ ಮಳೇಂದ್ರ ಮಠದಲ್ಲಿ ಗುರು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ, ಹುಬ್ಬಳ್ಳಿ ಸಿದ್ಧಾರೂಢ ಶಿವಯೋಗಿಗಳ ಪುರಾಣ ಮಹಾಮಂಗಲ, ಜಾತ್ರೆ ನಿಮಿತ್ತ
ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ವೀರಶೈವ ಲಿಂಗಾಯತ ಎನ್ನುವುದು ಅನಾದಿ ಕಾಲದಿಂದಲೂ ಬಂದಿದೆ. ಬಸವಣ್ಣನವರ ಕಾಲಕ್ಕಿಂತಲೂ ಪೂರ್ವದಲ್ಲಿಯೂ ವೀರಶೈವ ಧರ್ಮವಿದೆ. ಮುಂದೆಯೂ ಇರುತ್ತದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ವೀರಶೈವ ಲಿಂಗಾಯತ ಧರ್ಮ ಶ್ರೇಷ್ಠವಾದದ್ದು. ವೀರಶೈವ
ಮತ್ತು ಲಿಂಗಾಯತ ಎನ್ನುವುದು ಬೇರೆಬೇರೆಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೈದ್ಯ ಶರಣು ದಾಮಾ ಮಾತನಾಡಿ, ನಾವು ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ದೇವರನ್ನು ಕಾಣಬೇಕು. ದೇವರನ್ನು ಸ್ಮರಿಸಿದಾಗ ಮಾತ್ರ ಒಳಿತು ಕಾಣಲು ಸಾಧ್ಯ ಎಂದರು.

ಮುಖಂಡ ಮಕ್ಸೂದ್‌ ಪಟೇಲ್‌ ಮಾತನಾಡಿ, ಕಳೆದ ಐದು ದಶಕಗಳಿಂದ ಮಳೇಂದ್ರ ಮಠ ಎಲ್ಲ ಜಾತಿ, ಜನಾಂಗದವರನ್ನು ಕೂಡಿಸಿಕೊಂಡು ಹಬ್ಬ ಹರಿದಿನ ಆಚರಿಸುತ್ತಿದೆ. ಎಲ್ಲರನ್ನು ಸಮಾನ ದೃಷ್ಟಿಯಿಂದ ಕಾಣುವ ಈ ಮಠದಲ್ಲಿ ಭಾವೈಕ್ಯತೆ ಕಾಣಬಹುದಾಗಿದೆ. ಇದಕ್ಕೆ ಉದಾಹರಣೆ ಎಂದರೆ ನಾವು ಇಸ್ಲಾಂ ಧರ್ಮದವರಾಗಿದ್ದರೂ ಮಳೇಂದ್ರ ಮಠದ ಭಕ್ತರಾಗಿದ್ದು ಎಂದರು. ಮಠದ ಪೀಠಾಧಿಪತಿ ವಿಶ್ವಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಿಜೆಪಿ
ತಾಲೂಕು ಅಧ್ಯಕ್ಷ ಸೂರ್ಯಕಾಂತ ನಾಕೇದಾರ, ಆಲಮೇಲದ ಡಾ| ಶ್ರೀಶೈಲ ಪಾಟೀಲ, ಸೊಲ್ಲಾಪುರದ ವೈದ್ಯ ಸುಹಾಸ ಪಾಟೀಲ ಮಾತನಾಡಿದರು. ಬಡದಾಳದ ಚನ್ನಮಲ್ಲ
ಶಿವಾಚಾರ್ಯರು, ಚಿನ್ಮಯಗಿರಿ ಸಿದ್ದರಾಮ ಶಿವಾಚಾರ್ಯರು, ಅತನೂರಿನ ಗುರುಬಸವ
ಶಿವಾಚಾರ್ಯರು ಆಶೀರ್ವಚನ ನೀಡಿದರು.

Advertisement

ಶರಣಕುಮಾರ ಶಾಸ್ತ್ರೀ, ವಿಶ್ವನಾಥ ಹೇರೂರ, ಸಿದ್ದಣ್ಣ ಹಿರೇ ಜೇವರ್ಗಿ ಅವರಿಂದ ಸಂಗೀತ ಸೇವೆ ನಡೆಯಿತು. ಜಿ.ಪಂ ಸದಸ್ಯ ಸುಮೀತ್‌ ಆರ್‌. ಪಾಟೀಲ, ಮುಖಂಡರಾದ ಸಿದ್ದಯ್ಯ ಹಿರೇಮಠ, ಚಂದಪ್ಪ ಕರ್ಜಗಿ, ಶರಣಪ್ಪ ವಾಳಿ, ಶಿವಲಿಂಗಪ್ಪ ಮಲ್ಲಾಡ, ಶಾಂತಯ್ಯ ಹಿರೇಮಠ, ಶಿವಶರಣಪ್ಪ
ಸರಸಂಬಾ ಇದ್ದರು. ಶಿಕ್ಷಕ ಶಿವಶರಣ ಗುಂದಗಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next