Advertisement

ಭ್ರಷ್ಟ ರಾಜಕಾರಣಿಗಳಿಗೆ ತಕ್ಕಪಾಠ ಕಲಿಸಿ

07:00 AM May 28, 2020 | Lakshmi GovindaRaj |

ಶಿಡ್ಲಘಟ್ಟ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಣದ ಪ್ರಭಾವದಿಂದ ರಾಜಕೀಯ ವ್ಯವಸ್ಥೆ ನಾಶ ಮಾಡಲು ಕೆಲ ಭೂಮಾಫಿಯಾ, ಬಡ್ಡಿ ಮಾಫಿಯಾ ಹುಟ್ಟಿಕೊಂಡಿದ್ದು ಓಟಿಗಾಗಿ ನೋಟು ನೀಡಿ ಆಮಿಷವೊಡ್ಡುವ ಅವಕಾಶವಾದಿ ಗಳ ವಿರುದ್ಧ  ಮಹಿಳೆಯರು ಸಿಡಿದೇಳಬೇಕೆಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ನಗರದ ಡಾಲ್ಫಿನ್‌ ಕಾಲೇಜಿನ ಆವ ರಣದಲ್ಲಿ ಟೌನ್‌ ರೇಷ್ಮೆ ಬೆಳೆ ಗಾರರ ಹಾಗೂ ರೈತರ ವ್ಯವಸಾಯ  ಸೇವಾ ಸಹಕಾರ ಸಂಘದ ವತಿ ಯಿಂದ 42 ಸಂಘಗಳಿಗೆ 2.25 ಕೋಟಿ ರೂ. ಬಡ್ಡಿ ರಹಿತ ಸಾಲ ವಿತರಿಸಿ ಮಾತನಾಡಿದರು. ಬೆಂಗಳೂರು ಸಮೀಪದ ಬಡ ವರು, ರೈತರ ಭೂಮಿಗಳನ್ನು ಕಬಳಿಸಿ ಕೊಂಡು ಅದರಲ್ಲಿ ಬಂದ ಹಣದಿಂದ ಸಮಾಜ ಸೇವೆ ಮಾಡುವ ಡೋಂಗಿ ಸಮಾಜ ಸೇವಕರ ಬಗ್ಗೆ ಎಚ್ಚರವಿರಲಿ, ಚುನಾ ವಣೆ ವೇಳೆ ಬಂದು ಬಡವರ ತಲೆ ಕೆಡಿಸುತ್ತಾರೆಂದರು.

ಶಾಸಕ ವಿ.ಮುನಿಯಪ್ಪ, ನಿಗದಿತ ಸಮಯ ದಲ್ಲಿ ಮರು ಪಾವತಿ ಮಾ ಡುವ ಮೂಲಕ ಸಹಕಾರಿ  ಕ್ಷೇತ್ರದ ಬಲವರ್ಧನೆಗೆ ಸಹಕರಿಸಬೇಕೆಂ ದರು. ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ನಾಗರಾಜ್‌, ಈ ಹಿಂದೆ ಆಯ್ಕೆ ಯಾಗಿದ್ದ ಇಬ್ಬರು ನಿರ್ದೇ ಶಕರು ಕೆಲವರಿಗೆ ಮಾತ್ರ ಸಾಲ ಸೌಲ ಭ್ಯ ನೀಡುವ ಕಾಯಕ ಮಾಡಿಕೊಂ ಡಿದ್ದರು ಎಂದರು. ಹಾಪ್‌ಕಾಮ್ಸ್‌ ಅಧ್ಯಕ್ಷ ಚಂದ್ರೇ  ಗೌಡ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಚಿಂತಾಮಣಿ ನಾಗರೆಡ್ಡಿ,

ಶಿಡ್ಲಘಟ್ಟ ಟೌನ್‌ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಶೆಟ್ಟಹಳ್ಳಿ ರಾಮಚಂದ್ರ, ಡಿಸಿಸಿ  ಬ್ಯಾಂಕಿನ ವ್ಯವಸ್ಥಾಪಕ ಆನಂ ದ್‌, ಎಸ್‌ಎಫ್‌ಸಿಎಸ್‌ ಬ್ಯಾಂಕಿನ ಕಾರ್ಯ ನಿರ್ವಹಣಾಧಿಕಾರಿ ದೇವಿಕಾ, ರಾಮ ರೆಡ್ಡಿ, ವೆಂಕಟೇಶ್‌, ನರಸಿಂಹಯ್ಯ, ನಾರಾಯಣ ಸ್ವಾಮಿ (ನಾಣಿ), ಮುನಿರಾಜು, ಮುನಿಯಪ್ಪ, ಮುನೇಗೌಡ, ವೇಣುಗೋಪಾಲ್‌, ಶೋಭಾರಾಣಿ, ಲೀಲಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next