Advertisement

ಮಕ್ಕಳು ಬದುಕು ಕಟ್ಟಿಕೊಳ್ಳಲು ಕೌಶಲ್ಯ ಕಲಿಸಿ

09:02 PM Feb 03, 2020 | Team Udayavani |

ತಿ.ನರಸೀಪುರ: ಮಕ್ಕಳಿಗೆ ಮಾನವೀಯ ಮೌಲ್ಯಗಳುಳ್ಳ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ವರುಣಾ ಶಾಸಕ ಡಾ.ಎಸ್‌.ಯತೀಂದ್ರ ಹೇಳಿದರು. ಪಟ್ಟಣದಲ್ಲಿ ನಡೆದ ಎನ್‌ಕೆ ಎಫ್ ಪಬ್ಲಿಕ್‌ ಪೂರ್ವ ಮತ್ತು ಹಿರಿಯ ಪ್ರಾಥಮಿಕ ಶಾಲೆಯ 11ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರ ಆಸಕ್ತ ಕ್ಷೇತ್ರಗಳಲ್ಲಿ ಸಾಧನ ತೋರಲು ಸಹಕಾರಿಗಾಲಿದೆ ಎಂದರು.

Advertisement

ಶಾಸಕ ಎಂ.ಅಶ್ವಿ‌ನ್‌ಕುಮಾರ್‌ ಮಾತನಾಡಿ, ಸ್ಪರ್ಧಾತ್ಮಕ ಯುಗಕ್ಕೆ ಅವಶ್ಯವಿರುವ ಎಲ್ಲಾ ಕೌಶಲ್ಯಗಳನ್ನು ಶಾಲಾ ಹಂತದಲ್ಲೇ ಬೋಧಿಸಬೇಕು. ಆಗ ವಿದ್ಯಾರ್ಥಿಗಳು ಸಾಧನೆಯೆಡೆಗೆ ಸಾಗಲು ನೆರವಾಗಲಿದೆ ಎಂದು ಸಲಹೆ ನೀಡಿದರು. ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಸಂಸ್ಥೆಗಳು ಪಾತ್ರ ಬಹುಮುಖ್ಯ ಆಗಿರುತ್ತದೆ. ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಬೇಕು ಎಂದು ಹೇಳಿದರು.

ಎನ್‌ಕೆಎಫ್ ಫೌಂಡೇಷನ್‌ ಟ್ರಸ್ಟ್‌ ಅಧ್ಯಕ್ಷ ಎನ್‌.ಕೆ.ಫ‌ರೀದ್‌ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳ ಸಾವಿರಾರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಎನ್‌ಕೆ ಎಫ್ ಪಬ್ಲಿಕ್‌ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಇನ್ನೆರಡು ತಿಂಗಳಲ್ಲಿ ನೆಲಮಹಡಿ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಮಹಮ್ಮದ್‌ ಸಯೀದ್‌, ಬಿಇಒ ಎಸ್‌.ಸ್ವಾಮಿ, ಸಮಾಜ ಸೇವಕರಾದ ಮಹಮದ್‌ ನಸ್ರುಲ್ಲಾ, ಪುರಸಭಾ ಸದಸ್ಯರಾದ ಎಲ….ಮಂಜುನಾಥ್‌, ಎನ್‌.ಸೋಮು, ತಾಪಂ ಸದಸ್ಯರಾದ ಬಿ.ಸಾಜಿದ್‌ ಅಹಮದ್‌, ಎಂ.ರಮೇಶ್‌, ಕೆಪಿಸಿಸಿ ಅಲ್ಪಸಂಖ್ಯಾತ ಸಂಚಾಲಕ ಬಿ.ಮನ್ಸೂರ್‌ ಆಲಿ, ದೈಹಿಕ ಪರಿವೀಕ್ಷಕ ಮಹಾಂತಪ್ಪ ನಾಗೂರ, ಮುಖಂಡರಾದ ಡಣಾಯಕನಪುರ ಸೋಮಣ್ಣ, ಶಂಭುದೇವನಪುರ ರಮೇಶ್‌, ಸಿದ್ದರಾಜು, ಚಂದ್ರು, ಎಚ್‌.ನಾಗರಾಜು, ಮುಖ್ಯ ಶಿಕ್ಷಕಿ ಹೇಮಾ, ಸಹ ಶಿಕ್ಷಕಿಯರಾದ ಅಶ್ವಿ‌ನಿ, ಗೀತಾ, ಶೈಲಜಾ, ಶಾಲಿನಿ, ರೇಖಾ, ಸಂದ್ಯಾ, ಅನಿತಾ, ಹಾಜಿರಾ, ಶೈಲ, ವಿಜಯಲಕ್ಷ್ಮೀ, ಆಶಾ, ರಮ್ಯಾ, ಹರ್ಷಿತಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next