Advertisement
ಬ್ಲ್ಯಾಕ್ ಟೀ ಸಹಜ ಬಯೋಕೆಮಿಕಲ್ ಸಂಸ್ಕರಣೆಯಿಂದಾಗಿ ಗಾಢ ಕೆಂಪು-ಕಂದು ಮಿಶ್ರಿತ ವರ್ಣ ಮತ್ತು ವಿಶಿಷ್ಟ ಫ್ಲೇವರ್ ಹೊಂದಿದೆ. ಗ್ರೀನ್ ಟೀ ಬಳಕೆಯು ಚೀನ ಮತ್ತು ಜಪಾನ್‌ನ ಜನರಿಂದ ಆರಂಭವಾಯಿತು. ಇದರಲ್ಲಿ ಚಹಾ ಎಲೆಗಳನ್ನು ಇತರ ಚಹಾಕ್ಕೆ ಬೇಕಾದ ಎಲೆಗಳನ್ನು ಸಂಸ್ಕರಣೆ ಮಾಡುವ ಮಟ್ಟಕ್ಕೆ ಸಂಸ್ಕರಿಸಲಾಗುವುದಿಲ್ಲ. ಹಸಿರು ಬಣ್ಣವನ್ನು ಉಳಿಸುವ ಉದ್ದೇಶದಿಂದಾಗಿ ಅವುಗಳನ್ನು ಶೀಘ್ರವಾಗಿ ಬಿಸಿ ಮಾಡಲಾಗುತ್ತದೆ ಅಥವಾ ಸ್ಟೀಮ್ ಮಾಡಲಾಗುತ್ತದೆ. ಗ್ರೀನ್ ಟೀ ತಯಾರಿಸುವ ವಿಧಾನವೂ ಸುಲಭ. ಕುದಿಯುವ ನೀರನ್ನು ಟೀ ಎಲೆ ಗಳ ಮೇಲೆ ಹಾಕಿ 2-3 ನಿಮಿಷಗಳ ಕಾಲ ಮುಚ್ಚಿಟ್ಟರೆ ಟೀ ಸವಿಯಲು ಸಿದ್ಧ. ಚಹಾಕ್ಕೆ ಸಬಂಧಿಸಿದಂತೆ ಅದರಲ್ಲಿರುವ ಫ್ಲೇವೊನಾಯ್ಡ್ಸ್ ಗಳಿಂದ ಆರೋಗ್ಯ ಸಂಬಂಧಿ ಲಾಭಗಳಿವೆ. ಫ್ಲೇವೊನಾಯ್ಡ್ಸ್ ಮತ್ತು ಪಾಲಿಫಿನೋಲ್‌ಗಳು ಸಸ್ಯಜನ್ಯ ಪೋಷಕಾಂಶಗಳಾಗಿವೆ. ಇವುಗಳು ದೇಹದ ರೋಗಕಾರಕಗಳನ್ನು ತೊಡೆದು ಹಾಕುವ ಆ್ಯಂಟಿ ಆಕ್ಸಿಡೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ.
ಕೆಲವು ಔಷಧಗಳ ಮೂಲ ಸತ್ವಗಳು ಗಿಡಮೂಲಿಕೆಗಳಾಗಿರುತ್ತವೆ. ಹಾಗಾಗಿ ದಾಲಿcನ್ನಿ ಹಾಕಿದ ಚಹಾ, ಪುದೀನಾ ಹಾಕಿದ ಚಹಾ, ಶುಂಠಿ, ತುಳಸಿ, ಮ್ಯಾಂಗೊ ಜಿಂಜರ್ ಟೀ ಇತ್ಯಾದಿಗಳ ಸೇವನೆ ಇತರ ಔಷಧಗಳನ್ನು ತೆಗೆದುಕೊಳ್ಳುತ್ತಿರುವಾಗಲೂ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟುಮಾಡುವುದಿಲ್ಲ. ಗ್ರೀನ್ ಟೀಗೆ ಸಲ್ಪ ಪ್ರಮಾಣದಲ್ಲಿ ಜೇನನ್ನು ಸೇರಿಸಿ ಸೇವಿಸಬಹುದು.
Related Articles
Advertisement
ಚಹಾ ಅಥವಾ ಕಾಫಿಯನ್ನು ನಿರಂತರ ಸೇವಿಸುವುದರಿಂದ ಕ್ಯಾನ್ಸರ್ ಉಂಟಾಗುವ ಅಪಾಯ ಇಲ್ಲ ಎಂಬುದು ಸಂಶೋಧನೆಗಳಿಂದ ದೃಢೀಕೃತವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಚಹಾ ಅಥವಾ ಹರ್ಬಲ್ ಚಹಾಗಳ ಬ್ರ್ಯಾಂಡ್‌ಗಳನ್ನು ಸುರಕ್ಷಿತ ಎಂಬುದಾಗಿ ಪರಿಗಣಿಸಬಹುದಾಗಿದೆ. ಕೆಲವು ಐಸ್ ಟೀಗಳಲ್ಲಿ ಹೆಚ್ಚಿನ ಸಕ್ಕರೆ ಇರುತ್ತದೆ. ಆದ್ದರಿಂದ ಖರೀದಿಗೂ ಮುನ್ನ ಲೇಬಲ್‌ನ್ನು ಸರಿಯಾಗಿ ಪರಿಶೀಲಿಸುವುದು ಅತ್ಯಗತ್ಯ.
ಅತಿ ಚಹಾ ಸೇವನೆ ಸಲ್ಲದು ಕೆಲವರು ದಿನಕ್ಕೆ 4-5 ಕಪ್ ಚಹಾ ಸೇವಿಸುತ್ತಾರೆ. ದಿನವೊಂದಕ್ಕೆ 2ಕ್ಕಿಂತ ಹೆಚ್ಚು ಕಪ್ ಚಹಾ ಸೇವನೆ ಮಾಡುವುದನ್ನು ಶಿಫಾರಸು ಮಾಡಲಾಗುವುದಿಲ್ಲ. ಕೆಲವರು ಅತಿಯಾದ ಚಹಾ ಸೇವನೆಯಿಂದ ಹೊರಬರಲು ಯತ್ನಿಸುವಾಗ ನಿದ್ದೆಯ ಕೊರತೆ, ಕಿರಿಕಿರಿ, ತಲೆ ಸಿಡಿತ ಇತ್ಯಾದಿಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿ ಇರುವವರಿಗೆ ನಮ್ಮ ಸಲಹೆಯೇನೆಂದರೆ; ಅವರು ಚಹಾ ಸೇವನೆಯನ್ನು ನಿಧಾನವಾಗಿ ಕಡಿಮೆ ಮಾಡಬೇಕು. ಒಂದು ಕಪ್ ಬದಲಿಗೆ ಅರ್ಧ ಕಪ್ ಕುಡಿಯುವುದನ್ನು ಆರಂಭಿಸಬೇಕು. ಕ್ರಮೇಣ ಕಡಿಮೆ ಮಾಡುತ್ತಾ ಬರಬೇಕು. ಸಾಮಾನ್ಯ ಚಹಾಕ್ಕಿಂತ ಹರ್ಬಲ್ ಟೀ ಸೇವನೆಯನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಚಹಾ….ಆಸ್ವಾದಿಸಿ ಸೇವಿಸುವುದರಲ್ಲೇ ಖುಷಿ
– ನಾನ್ ಕ್ಯಾಲರಿಕ್ ಸಿಹಿ ಇರುವ ಬಾಟ್‌ಲ್ಡ್ ಟೀ ಅಥವಾ ಕ್ಯಾನ್x ಐಸ್ ಟೀಯನ್ನೊಮ್ಮೆ ಸವಿದು ನೋಡಿ
– ನೀವು ಕ್ಯಾಲರಿಗಳ ಮೇಲೆ ಗಮನಹರಿಸುವವರಾಗಿದ್ದರೆ ಸಿಹಿ ಇರದ ಚಹಾವನ್ನು ಲಿಂಬೆಯ ತುಂಡು, ಶುಂಠಿ ತುಂಡು ಅಥವಾ ತಾಜಾ ಪುದೀನಾದೊಂದಿಗೆ ಸವಿಯಬಹುದು.
– ವಿಟಮಿನ್ ಸಿಯನ್ನು ಹೆಚ್ಚಿಸಲು ಮತ್ತು ಫ್ಲೇವರ್‌ಗಾಗಿ ಸಿಟ್ರಸ್ ಜ್ಯೂಸ್‌ನ್ನು ಸೇರಿಸಬಹುದಾಗಿದೆ. ಆದರೆ ಇದು ಮಿತಿ ಮೀರಬಾರದು. ಇದು ಹೆಚ್ಚಾದಲ್ಲಿ ಕಾಳು, ಧಾನ್ಯ, ಮೊಟ್ಟೆ ಇತ್ಯಾದಿಗಳಲ್ಲಿರುವ ಕಬ್ಬಿಣಾಂಶವನ್ನು ಹೀರುವ ಶಾರೀರಿಕ ಕ್ಷಮತೆಗೆ ತಡೆ ಉಂಟಾಗುವ ಸಾಧ್ಯವಿದೆ.
– ಕ್ಯಾಲ್ಸಿಯಂ ಪಡೆಯಲು ಹಾಲು ಹಾಕಿದ ಚಹಾವನ್ನು ಸೇವಿಸಬಹುದಾಗಿದೆ. ಬಿಸಿ ಹಾಗೂ ಕೋಲ್ಡ್ ಹಾಲನ್ನು ಬಳಸಬಹುದಾಗಿದೆ. – ಡಾ| ಅರುಣಾ ಮಲ್ಯ
ಸೀನಿಯರ್ ಡಯೆಟಿಶನ್
ಕೆಎಂಸಿ ಆಸ್ಪತ್ರೆ ಡಾ| ಅಂಬೇಡ್ಕರ್ ವೃತ್ತ, ಮಂಗಳೂರು