ಮಣಿಪಾಲ: ಕೇವಲ ಅಧಿಕಾರಕ್ಕಾಗಿ ರಾಜಕೀಯ ಪಕ್ಷಗಳು ಅನುಕೂಲ ಸಿಂಧು ರಾಜಕೀಯ ನಡೆ ಅನುಸರಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ತನ್ನ ಓದುಗರಿಗೆ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ. ಆಯ್ದ ಪ್ರತಿಕ್ರಿಯೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ದಯಾನಂದ ಕೊಯಿಲಾ: ರಾಜಕೀಯ ಅಂದರೆ ಅದೇ ಅಲ್ವೇ. ರಾಜರಾಗಲು ಕಾರಣವನ್ನು ಹುಡುಕುತ್ತಿರುವುದು ಸಮಯ ಸಾಧಿಸುತ್ತಿರುವುದು?
ನಾರಾಯಣ ದೇವಾಡಿಗ ಎನ್ ಎಚ್: ಖಂಡಿತ ಇಲ್ಲಾ. ಮೋದಿ ಸಹ ಹೇಳಿದ್ದಾರೆ. ಚುನಾವಣೆಯನ್ನು ಹಬ್ಬದಂತೆ ಆಚರಿಸೋಣ ಅಂತ, ಹಾಗಾಗಿ ಇಂದು ರಾಜಕೀಯ ಪಕ್ಷಗಳು ಆ ಹಬ್ಬದಂತೆ ಆಚರಿಸುತ್ತಿದ್ದಾರೆ.
ಗಾಯತ್ರಿ ರಮೇಶ್: ಅಕ್ಷರಶಃ ನಿಜ. ಆದರೆ ಒಂದು ಪಕ್ಷದವರು ಈ ರೀತಿ ಮಾಡಿದರೆ ಅದು ಚಾಣಾಕ್ಷ (ಚಾಣಕ್ಯ) ನಡೆ. ಬೇರೆ ಪಕ್ಷದವರು ಮಾಡಿದರೆ ಅದು ಅಪವಿತ್ರ ಮೈತ್ರಿ ಎಂದು ಬಿಂಬಿಸಲಾಗುತ್ತಿದೆ.
ಕೆ ಎಸ್ ಕೃಷ್ಣ: ದೇಶಕ್ಕಿಂತ, ರಾಜ್ಯಕ್ಕಿಂತ, ರಾಜಕೀಯ ಪಕ್ಷಗಳಿಗೆ ಸ್ವಪ್ರತಿಷ್ಠೆ ಅಧಿಕಾರದ ವ್ಯಾಮೋಹವೇ ಅವರೀಗೆ ಮುಖ್ಯ ಚುನಾವಣೆಗೆ ಮುನ್ನ ಒಬ್ಬರಿಗೊಬ್ಬರು ದೋಷಾರೋಪ ಮಾಡುತ್ತಾರೆ ನಂತರ ಒಂದಾಗುತ್ತಾರೆ ಆದ್ದರಿಂದ ಮತದಾರರು ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ಕೋಟ್ಟು ಚುನಾಯಿಸಬೇಕು
ಶಶಿಶೇಖರ್ ಕಾಮತ್: ಇತ್ತೀಚಿನ ವರ್ಷಗಳಲ್ಲಿರಾಜಕೀಯ ಅನ್ನೋದು ವ್ಯಾಪಾರಕರಣವಾಗಿದೆ. ವಿರುದ್ಧ ಸಿದ್ದಾಂತದ ಪಕ್ಷಗಳು ಅಧಿಕಾರಕ್ಕಾಗಿ ಒಂದಾಗುತ್ತಿದೆ. ದುಡ್ಡಿನ ಹೊಳೆ ಹರಿಸಿ ಶಾಸಕರನ್ನು ಖರೀದಿ ಮಾಡಿ ಸರಕಾರ ಮಾಡ್ತಾರೆ. ನೈತಿಕತೆ ಮತ್ತು ಸಿದ್ದಾಂತಗಳನ್ನು ಮಾರಿ ಅಧಿಕಾರಕ್ಕಾಗಿ ರಾಜಕೀಯ ಮಾಡ್ತಾರೆ.