ಮಂಜುನಾಥ್ ರಿಷಿ: ಸ್ಪೀಕರ್ ಮಾಡಿರೋದು ಸರಿ. ಅನರ್ಹರು ಮಾಡಿರೋದು ಸರಿ. ಹಾಗಾದ್ರೆ ಶಿಕ್ಷೆ ಯಾರಿಗೆ ಇವತ್ತಿನ ನ್ಯಾಯಾಲದ ತೀರ್ಪು ಮುಂದೊಂದು ದಿನ ನ್ಯಾಯ ಅನ್ನೋ ಪದನೆ ಇರೋಲ್ಲ.
Advertisement
ನರಸಿಂಹ ಕಣ್ವ: ಹೌದು ಕೊಲೆ ಮಾಡಿದ್ದಾನೆ. ಆದರೆ ಶಿಕ್ಷೆ ಕೊಡಲ್ಲ ಹೊಗ್ ಬದಿಕೊ ನಾವು. ಕೋರ್ಟ್ ನವರು ಎನ್ ಹೇಳೀದ್ರು ಮುಚ್ಚು ಕೊಂಡು ಕೇಳಿ ಅಷ್ಟೇ
Related Articles
Advertisement
ಮೋಹನ್ ದಾಸ್ ಕಿಣಿ: ಸ್ವಾರ್ಥ ರಾಜಕೀಯಕ್ಕೆ ಪ್ರೋತ್ಸಾಹ ಸಲ್ಲದು, ಆದರೆ ವ್ಯಕ್ತಿಗತವಾಗಿ ನಿಜವಾಗಿಯೂ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದವರಾಗಿದ್ದರೆ ಜನರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಆಯ್ಕೆ ಮಾಡುತ್ತಾರೆ. ಉದಾಹರಣೆಗೆ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಪಕ್ಷದ ಮೇಲಿನ ಅಸಮಾಧಾನಕ್ಕೆ ಹಿಂದೊಮ್ಮೆ ರಾಜೀನಾಮೆ ಕೊಟ್ಟು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿಲ್ಲವೇ, ಹಾಗೆ.
ಸಂತೋಷ್ ಡಿ ಸೋಜಾ: ಒಂದು ಪಕ್ಷದಿಂದ ಗೆದ್ದ ನಂತರ ಸೂಕ್ತ ಸ್ಥಾನ ಸಿಗದೇ ಇದ್ದರೆ ರಾಜೀನಾಮೆ ಕೊಟ್ಟು ಅದೇ ಶಾಸಕ ಮತ್ತೊಂದು ಪಕ್ಷದಿಂದ ಸ್ಪರ್ಧೆ ಮಾಡಿದರೆ ಅದರ ಚುನಾವಣೆ ಖರ್ಚು ಜನರ ತೆರಿಗೆ ಹಣ ಅಲ್ವೇ??
ಕೃಷ್ಣಾ ಕಿಂಚ: ಯಾವನು ಓಟ್ ಹಾಕಲ್ಲ ಬಿಡಿ ಯಾಕೆಂದ್ರೆ ಮೊದಲೇ ಓಟ್ ಹಾಕಿದಾಗ ಪಕ್ಷ ಬಿಟ್ಟು ಪಕ್ಷ ಸೇರಿಕೊಳ್ಳೋವ ನರಿಗಳಿಗೆ ಯಾರ್ ತಾನೇ ಓಟ್ ಹಾಕ್ತಾರೆ ನೀವೇ ಹೇಳಿ ಬುದ್ದಿವಂತ ಜನರು ಯಾರು ಓಟ್ ಹಾಕಲ್ಲ ಹಾಕಿಸದರೆ ಅವನೇ ದಡ್ಡಶಿಖಾಮಣಿ ಅಂತ ಅರ್ಥ
ಚಿ. ಮ. ವಿನೋದ್ ಕುಮಾರ್: ನ್ಯಾಯಾಲಯ ನೀಡಿರುವ ಈಗಿನ ತೀರ್ಪು ಹಾವು ಸಾಯಬಾರದು ಕೋಲು ಮುರಿಯಬಾರದು ಎನ್ನುವ ಹಾಗಿದೆ.ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸಹ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ. ಪ್ರಶಾಂತ್ ಜೆ ಎಸ್; ಕೋರ್ಟನಲ್ಲಿ ನ್ಯಾಯದೇವತೆ ಕಣ್ಣಿಗೆ ಬಟ್ಟೆ ಕಟ್ಟಿದಾರೆ,ಆದರೆ ಮತದಾರರಿಗೆ ಕಣ್ಣಿಗೆ ಬಟ್ಟೆಕಟ್ಟಿಲ್ಲ,ಆದರೂ ಒಮ್ಮೊಮ್ಮೆ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಕಣ್ಣು ಮಂಜಾದ್ರೆ ಕಷ್ಟ. ಚಂದ್ರು ಎಚ್ ಸಿದ್ದಯ್ಯ: ಕೇವಲ 3 ನ್ಯಾಯಾಧೀಶರು ಇರುವ ಪೀಠದಿಂದ ಅನರ್ಹರ ಪರ ತೀರ್ಪು ಬಂದ ಮಾತ್ರಕ್ಕೆ ಕೋಟ್ಯಾಂತರ ಮತದಾರ ನ್ಯಾಯಾಧೀಶರ ತೀರ್ಪು ಇವರ ಪರವಾಗಿಯೇ ಬರುವುದು ದೂರದ ಮಾತು. ಇಂತವರನ್ನು ಮತದಾರ ಪುನಃ ಆಯ್ಕೆ ಮಾಡಿ ಕಳುಹಿದರೇ ಮುಂದೆ ಎಲ್ಲರೂ ಇದೇ ಹಾದಿ ಹಿಡಿದು ಸಾಮಾನ್ಯ ಜನರ ತೆರಿಗೆ ಹಣ ಪೋಲಾಗುವುದಂತು ಸತ್ಯ.