Advertisement

ಅಂಬರೀಶ್ ಅವರ ಸಿನಿಪಯಣದಲ್ಲಿ ನಿಮಗಿಷ್ಟವಾದ ಪಾತ್ರ ಯಾವುದು ? ಮತ್ತು ಯಾಕೆ ?

04:51 PM Nov 16, 2019 | keerthan |

ಮಣಿಪಾಲ: ಅಂಬರೀಶ್ ಅವರ ಸಿನಿಪಯಣದಲ್ಲಿ ನಿಮಗಿಷ್ಟವಾದ ಪಾತ್ರ ಯಾವುದು ? ಮತ್ತು ಯಾಕೆ ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲಿ ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

Advertisement

ಕೃಷ್ಣಪ್ರಕಾಶ ಯಂ ಯನ್: ನನಗೆ ಯಾವತ್ತಿಗೂ ಅವರು ಪ್ರಥಮ ಬಾರಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿ ಯಶಸ್ಸು ಕಂಡ ಅಂತ ಚಿತ್ರವೆ ಬಲುಮೆಚ್ಚು. ಮರು ಬಿಡುಗಡೆಯಾಗುತ್ತಿದೆ. ನೋಡಲು ಕಾದಿರುವೆ.

ವಿನಯ್ ಯು ಭೂಪಾಲಂ: ಎಲ್ಲಾ ಅವರ ಅಭಿನಯ ಚೆನ್ನಾಗಿವೆ, ಅದರಲ್ಲಿ ಕೆಲವು: ಒಲವಿನ ಉಡುಗೊರೆ, ಪೂರ್ಣಚಂದ್ರ, ಆಪದ್ಭಾಂದವ, ಮಸಣದಹೂವು, ಮಮತೆಯ ಮಡಿಲು. ವಸಂತ ಪೂರ್ಣಿಮಾ, ಮಣ್ಣಿನ ದೋಣಿ, ಮೌನರಾಗ, ಅಂತ, ಚಕ್ರವ್ಯೂಹ.

ಶುಭಾ ನಾಗರಾಜ್: ಅವರ ಎಲ್ಲ ಪಾತ್ರಗಳೂ ನನಗಿಷ್ಟ ಅಂಬರೀಶ್ ನನ್ನ ನೆಚ್ಚಿನ ನಟರಲ್ಲೊಬ್ಬರು

ಬಸವರಾಜ್ ಎಸ್ ಹೊಸೂರ್: ಏಳು ಸುತ್ತಿನ ಕೋಟೆ ಒಡಹುಟ್ಟಿದವರು. ಏಳು ಸುತ್ತಿನ ಕೋಟೆ ಫಿಲ್ಮ್ ನಲ್ಲಿ ಈ ಭ್ರಷ್ಟರು ಮತ್ತು ಸಮಾಜ ಘಾತುಕರು ಬಡವರಿಗೆ ಸಾಲ ನೀಡಿ ಅವರ ಸ್ವತ್ತು ಕಬಳಿಕೆಯ ಜನ ನಮ್ಮ ಸುತ್ತ ಮುತ್ತ ಹೇಗಿದ್ದಾರೆ. ಅವರ ವಿರುದ್ಧ ತಿರುಗಿ ಬೀಳುವ ಕ್ರಾಂತಿ ಕಾರಿ ಪಾತ್ರ.

Advertisement

ಕೆ ಎಸ್ ಕೃಷ್ಣ: ರೆಬೆಲ್ ಸ್ಟಾರ್ ಅಂಬರೀಷ್ ಅವರ ಸಿನಿ ಪಯಣದಲ್ಲಿ ಹಲವಾರು ಚಲನಚಿತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ ಅದರಲ್ಲಿ ರಂಗನಾಯಕಿ, ಶುಭಮಂಗಳ, ನ್ಯೂ ಡೆಲ್ಲಿ, ಅಂತ, ಹ್ರುದಯ ಹಾಡಿತು, ಮಸಣದ ಹೂವು, ಈ ಸಿನಿಮಾ ಗಳಲ್ಲಿ ಮನಿ ಮಿಡಿಯುವ ಅಭಿನಯ.

ಬಸನಗೌಡ ಪಾಟೀಲ; ಡ್ರಾಮಾ ಸಿನಿಮಾದ ಬೊಂಬೆ ತಾತಯ್ಯ. ಜೀವನದ ಏಳು ಬೀಳು ಹೇಳುತ್ತಾ. ಮಾಯೆಯ ಬೆನ್ನತ್ತಿ ಹೋಗಬೇಡ. ಸಿಗುವುದು ಬಿಡಬೇಡ. ಸಿಕ್ಕಿದ್ದನ್ನು ಸರಿಯಾಗಿ ಕಾಪಾಡಿಕೊ ಎಂದು ಸರಿಯಾದ ಸಮಯದಲ್ಲಿ ಹೇಳುವ ಆ ಪಾತ್ರ ಡ್ರಾಮಾ ಸಿನಿಮಾದ ಜೀವಾಳ ಅಂದರೆ ತಪ್ಪಾಗಲ್ಲ.

ಮೇಘನಾಥ್ ಮೇಘನಾಥ್: ಮಸಣದ ಹೂವು ಚಿತ್ರದಲ್ಲಿನ ಪಾತ್ರ ಸಹಜ ಸಿದ್ದವಾಗಿ ಮೂಡಿ ಬಂದಿದೆ. ಮೇಕಪ್ ಕಡಿಮೆ ಹೀರೋಹಿಸಂ ಇಲ್ಲ ಡ್ಯಾನ್ಸುಗಳು ಇಲ್ಲ ಅಣ್ಣನವರು ಪಾತ್ರಕ್ಕೆ ಜೀವ ತುಂಬಿದ್ದಾರೆ ಈ ಚಿತ್ರದ ನಿರ್ದೇಶಕರು ಪುಟ್ಟಣ್ಣ ಕಣಗಾಲ್

ವಿನಯ ರಾವ್: ಅವರ‌‌ಎಲ್ಲಾ ಸಿನಿಮಾನೂ ಸೂಪರ್.ಅದರಲ್ಲೂ ‘ಅಂತ’ ಕಳ್ಳರು ನಿಜ ಸಂಗತಿ ತಿಳಿದು ಕೊಳ್ಳಲು ಕ್ಯಯ ಉಗುರು ಕೀಳುವ ದ್ರಶ್ಯ ಭಯಂಕರ.

ಪಂಚಲಿಂಗ ಭದ್ರಾವತಿ; ನಮ್ ಅಂಬಿಯ ನಾಗರ ಹಾವು ಚಿತ್ರದಿಂದಿಡಿದು ಅಂಬಿ ನಿಂಗ್ ವಯಸ್ಸಾಯ್ತು ಚಿತ್ರದವರೆಗಿನ ಎಲ್ಲಾ ಪಾತ್ರಗಳೂ ಇಷ್ಟವೇ.

Advertisement

Udayavani is now on Telegram. Click here to join our channel and stay updated with the latest news.

Next