Advertisement

ನಷ್ಟದಲ್ಲಿರುವ ಟೆಲಿಕಾಂ ಕಂಪೆನಿಗಳಿಗೆ ಕೇಂದ್ರ ಆರ್ಥಿಕ ನೆರವು ನೀಡುವ ಅವಶ್ಯಕತೆ ಇದೆಯೇ ?

04:59 PM Dec 08, 2019 | Team Udayavani |

ಮಣಿಪಾಲ: ನಷ್ಟದಲ್ಲಿರುವ ಟೆಲಿಕಾಂ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುವುದು ಅವಶ್ಯಕತೆ ಇದೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ. ಅವುಗಳಲ್ಲಿ ಕೆಲವು ಇಲ್ಲಿದೆ.

Advertisement

ಮಧುಕರ್ ಬಿಳಿಚೋಡು: ಸರ್ಕಾರಿ ಸ್ವಾಮ್ಯದ ಸಂಸ್ಥೆಯೇ ಸಾಕಷ್ಟು ಸಂಕಟದಲ್ಲಿದೆ. ಇದರ ಅಭಿವೃದ್ಧಿಯತ್ತ ಮೊದಲು ಗಮನಹರಿಸಲಿ….
ದೇಶದ ಆರ್ಥಿಕ ಪರಿಸ್ಥಿತಿಯು ಹೇಳತೀರದು ಇಂತ ಸಮಯದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಆರ್ಥಿಕ ಸಹಾಯ ತಕ್ಕಮಟ್ಟಿಗೆ ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಗುರುಪ್ರಸಾದ್ ರಾಜೇಂದ್ರ: ಖಂಡಿತಾ ಬೇಡ. ಅನಾವಶ್ಯಕ ಮಾತುಗಳು, ಮಸೇಜ್ಗಳು ಇರುವುದು ಸಮಯ ಹಾಳು ಮಾಡುವ ಅಬ್ಭ್ಯಾಸದ ಜನತೆ ನಷ್ಟಕ್ಕೆ ಕಾರಣ. ಸರ್ಕಾರದ ಹಣ ಕೂಡದು

ಸಣ್ಣಮಾರಪ್ಪ. ಚಂಗಾವರ ಸರ್ಕಾರಿ ಸ್ವಾಮ್ಯದ ಸಂಸ್ಥೆ ಅಥವಾ ಖಾಸಗಿ ಸ್ವಾಮ್ಯದ ಸಂಸ್ಥೆ ಯಾವುದೇ ನಷ್ಟದಲ್ಲಿದ್ದರು ದೇಶದ ಆರ್ಥಿಕತೆಯ ಮೇಲೆ ಹೊಡೆತ ಬೀಳುತ್ತದೆ. ಸಮಸ್ಯೆಯನ್ನು ಸರಿಪಡಿಸಿ ಬಳಕೆದಾರರಿಗೆ ಉಪಯೋಗವಾಗುವಂತೆ ಮಾಡುವುದು ಸರ್ಕಾರದ ಕೆಲಸ. ಖಾಸಗಿ ಕಂಪೆನಿಗಳು ಇದನ್ನು ದುರುಪಯೋಗಪಡಿಸಿಕೊಳ್ಳಬಾರದು.

ಮಂಜುನಾಥ್ ಕಾಡಜ್ಜಿ: ನಷ್ಟದಲ್ಲಿದೆ ಯಾರು ಹೇಳಿದ್ದು ಸ್ವಾಮೀ .ಈಗಿನ ಹಗಲು ದರೋಡೆ ಮಾಡುತ್ತಿರುವುದು ಸಾಕಾಗಿಲ್ವ ಕಂಪನಿಗಳಿಗೆ ಇವರ ಜೊತೆ ರಾಜಕಾರಣಿಗಳು ಸೇರಿದರೆ ಸಾಮಾನ್ಯ ನಾಗರೀಕರಿಗೆ ಬಿಸಿ ತುಪ್ಪವಾಗುವುದು ಖಚಿತ.

Advertisement

ಪುರುಷೋತ್ತಮ ಎಸ್ ಕುಲಕರ್ಣಿ: ಇ ಕಂಪನಿಗಳು ಮೊದಲೆ ಲೂಟಿ ಮಾಡಿವೆ ಎಲ್ಲಾ ಟೆಲಿಫೋನ್ ಕಂಪನಿಗಳು ಈಗಾಗಲೆ ಲೂಟಿ ಮಾಡಿದಾರೆ ಇನ್ನೂ ಲೂಟಿ ಮಾಡುತಿದಾರೆ

ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಅವರಿಗೆ ನೆರವು ನೀಡೋ ಅಗತ್ಯವಿಲ್ಲ. 2014 ಕ್ಕೆ ಮೊದಲು ಇದೇ ಕಂಪನಿಗಳು ಗ್ರಾಹಕರಿಂದ ಲೆಕ್ಕವಿಲ್ಲದಷ್ಟು ಹಣ ದೋಚಿವೆ. ಕಾಲ್ ದರ ಇಂಟರ್ನೆಟ್ ದರ ಅಂತಾ ತಮ್ಮ ವಿವೇಚನೆಗೆ ಬಂದಷ್ಟು ದೋಚಿದಾಗ ಇವುಗಳಿಗೆ ಲಂಗೂ ಲಗಾಮು ಇರಲಿಲ್ಲ..ಈಗ ಸ್ಪರ್ಧೆ ಹೆಚ್ಚಿದಾಗ ಇವುಗಳಿಗೆ ಅರ್ಥ ವಾಗಿರಬೇಕು. ಸರಕಾರ ಇವುಗಳ ಈ ನಾಟಕಕ್ಕೆ ತಲೆಬಾಗಬಾರದು. ಸರ್ಕಾರಿ ಸ್ವಾಮ್ಯದ ಬಿಎಸ್ ಎಂಎಲ್ ಅನ್ನು ಪುನಶ್ಚೇತನಗೊಳಿಸಲಿ. ಖಾಸಗಿ ಕಂಪನಿಗಳಿಗೆ ಬೇಡ.

ಮಹದೇವಸ್ವಾಮಿ ಮಚ್ಚಿ: ಆಫೀಸ್ ಅಲ್ಲಿ ಕೆಲಸ ಮಾಡೋ ಇವರ್ಗೆ ಇಷ್ಟೊಂದು ಬೇಜಾರರಾದ್ರೆ ಮಳೆ ಚಳಿ ಬಿಸಿಲು ಅನ್ನದೆ ದುಡಿಯೋ ರೈತರ ನಷ್ಟ ಕ್ಕೆ ಬೆಲೆ ಇಲ್ವಾ.

Advertisement

Udayavani is now on Telegram. Click here to join our channel and stay updated with the latest news.

Next