Advertisement

ದೇಶದಲ್ಲಿ ಟೀಕೆ ಮಾಡಲು ಮುಕ್ತ ವಾತಾವರಣವಿದೆ ಎನ್ನುವ ಅಮಿತ್ ಶಾ ಅಭಿಪ್ರಾಯವನ್ನು ಒಪ್ಪುವಿರಾ?

05:17 PM Dec 03, 2019 | keerthan |

ಮಣಿಪಾಲ: ದೇಶದಲ್ಲಿ ಟೀಕೆ ಮಾಡಲು ಮುಕ್ತ ವಾತಾವರಣವಿದೆ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯವನ್ನು ಒಪ್ಪುವಿರಾ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಕೆಲವು ಈ ಕೆಳಗಿನಂತಿದೆ.

Advertisement

ಕೃಷ್ಣಪ್ರಸಾದ್ ಬಾಗುರ್: ಹೌದು, ಯಾರೇ ಆಗಲಿ ಅದು ದೇಶದ ಓಳಿತಿಗಾಗಿ ಆರೋಗ್ಯವಂತ ಟೀಕೆ ಯಾಗಿರಬೇಕು. ಅದನ್ನು ಕೇಳಿ ತಪ್ಪನ್ನು ತಿದ್ದಿಕೋಂಡರೆ ಇನ್ನು ಉತ್ತಮ.

ಮೊಹಮ್ಮದ್ ರಫೀಕ್ ಕೊಲ್ಪೆ; ನೂರಕ್ಕೆ ನೂರರಷ್ಟು ಒಪ್ಪಲೇ ಬೇಕು! ಎಲ್ಲರಿಗೂ ಸರ್ಕಾರದ ಪರ ಹಾಗೂ ವಿರೋಧವಾಗಿ ಮಾತನಾಡುವ ಅಧಿಕಾರ ಇದೇ. ಜನರಿಂದ ಜನರಿಗಾಗಿ ಜನರಿಗೋಸ್ಕರ ನಡೆಸಲ್ಪಡುವ ಅಧಿಕಾರವನ್ನು ಸರಕಾರ ಎಂದೂ ಕರೆಯುತ್ತೇವೆ. ಅಧಿಕಾರ ದುರೋಪಯೋಗ ಆಗ್ದೆ ಇರಲು. ಟೀಕೆಗಳು ಅತೀ ಅಗತ್ಯ

ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಇದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಬಹುಶಃ ಇಂದಿರಾ ಗಾಂಧಿರವರ ಅವಧಿಯಲ್ಲಿ ಮಾತ್ರ ಟೀಕೆ ಮಾಡುವಂತಹ ವಾತಾವರಣವಿರಲಿಲ್ಲ. ಅದನ್ನು ಕಾಂಗ್ರೆಸ್ ಮರೆ ಮಾಚಿ ಈಗ ಅನಗತ್ಯವಾಗಿ ಭಯದ ವಾತಾವರಣವಿರುವಂತಹ ಸನ್ನಿವೇಶ ಸೃಷ್ಟಿ ಮಾಡುತ್ತಿದೆ. ದೇಶದಲ್ಲಿ ಹಿಂದಿಗಿಂತಲೂ ಹೆಚ್ಚಿನ ಟೀಕೆಗಳು ಈಗ ಕೇಳಿ ಬರುತ್ತಿವೆ. ಕೇಂದ್ರ ಸರಕಾರದ ಪ್ರತಿಯೊಂದು ನಡೆಗೂ ಟೀಕೆ ಮಾಡೋದು ಪ್ರತಿಪಕ್ಷಗಳ ಮತ್ತು ಬುದ್ಧಿಜೀವಿಗಳ ಜಾಯಮಾನ ಆಗಿ ಹೋಗಿದೆ. ಹಾಗಿದ್ದು ಅನಗತ್ಯವಾಗಿ ಇಲ್ಲದ ಸನ್ನಿವೇಶ ಸೃಷ್ಟಿ ಮಾಡಿ ಮೋದಿ ಸರಕಾರವನ್ನು ಹೀಗೆಳೆಯುವ ಎಲ್ಲಾ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ.

ಲೋಕೇಶ್ ಗುಡ್ಡೆಮನೆ: ಟೀಕೆ ಮಾಡುವ ಹಕ್ಕು ಸ್ವಾಮ್ಯ ಎಲ್ಲರಿಗೂ ಇದೆ.. ಟೀಕೆ ಮಾಡಿದನ್ನು ಅವಗಣನೆ ಮಾಡುವ ಮೂಲಕ ಟೀಕೆಗಳನ್ನು ಎಕೆ ಎದುರಿಸಬೇಕಾಯಿತು ಎಂದು ಅವಲೋಕನ ಮಾಡಬೇಕು, ಹಾಗು ಟೀಕೆ ಕೂಡ ಒಂದು ಒಳ್ಳೆಯ ಬೆಳವಣಿಗೆಗೆ ಮುನ್ನುಡಿ ಇಡಲು ಸಾದ್ಯ!

Advertisement

ವಾದಿರಾಜ್ ತಂತ್ರಿ: ಅಮಿತ್ ಷಾ ಅವರು ಲೋಕ ಸಭಾ ಸದನದಲ್ಲಿ ಅನೇಕ ಬಾರಿ ಹೇಳಿದ್ದಾರೆ. ಮೋದಿ ಮತ್ತು ತನಗೆ ಏನು ಬೇಕಾದರೂ ಹೇಳಿ ಎಂದು ಆದ್ರೆ ದೇಶ ದ್ರೋಹಿ ವಿಚಾರ ಮತ್ತು ಅವಶ್ಯಕತೆ ಇಲ್ಲದೆ ಇರುವ ವಿಚಾರದಲ್ಲಿ ಸಾಂವಿಧಾನಿಕ ಹುದ್ದೆಗಳಿಗೆ ಅಪಮಾನ ಮಾಡಬೇಡಿ ಎಂದು.

ದಯಾನಂದ ಕೊಯಿಲಾ: ಟೀಕೆ ಮಾಡುವುದು ಮೂಲಭೂತ ಹಕ್ಕು ಅದನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ಅದು ನಿರಂಕುಶ ಪ್ರಭುತ್ವವನಿಸುತ್ತದೆ. ಟೀಕೆ ಸಮಾಜದ ಒಳಿತಿಗಾಗಿ ಇರಬೇಕು.

Advertisement

Udayavani is now on Telegram. Click here to join our channel and stay updated with the latest news.

Next