ಮಣಿಪಾಲ: ಸೌರವ್ ಗಂಗೂಲಿ ಹಾಕಿಕೊಟ್ಟ ಗೆಲ್ಲುವ ಪರಂಪರೆಯನ್ನು ನಾವು ಮುಂದುವರಿಸುತ್ತಿದ್ದೇವೆ ಎಂದು ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಓದುಗರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.
ಶರಣ್ ಮುಸ್ತೂರ್: ವಿದೇಶದಲ್ಲಿ ಟೀಂ ಇಂಡಿಯಾಗೆ ಗೆಲ್ಲುವುದನ್ನು ಕಲಿಸಿಕೊಟ್ಟ ದಾದಾ ಹಲವು ಸವಾಲು ಎದುರಿಸಿ ಗೆಲುವು ದಾಖಲಿಸಿದ್ದಾರೆ. 2000ದಲ್ಲಿ ಫಿಕ್ಸಿಂಗ್ ಭೂತ ಆವರಿಸಿದ್ದ ತಂಡವನ್ನು ಮೇಲೆತ್ತುವುದಲ್ಲದೆ ಗೆಲ್ಲುವ ಟೀಂ ಆಗಿ ರೂಪಿಸಿದರು. ಅಲ್ಲದೆ, ಯುವಿ, ಭಜ್ಜಿ, ಜಹೀರ್, ಸೆಹ್ವಾಗ್, ಗಂಭೀರ್ರಂತಹ ಆಟಗಾರರಿಗೆ ಪ್ರೋತ್ಸಾಹ ನೀಡಿ, ಅವರ ಸಾಧನೆಗೆ ಬೆನ್ನೆಲುಬಾಗಿದ್ದರು.
ಗಿರೀಶ್ ಗೌಡ ಹೆಬ್ಬಾಳ್: ಭಾರತ ಇಂದು ಎಷ್ಟೇ ಯಶಸ್ಸು ಕಂಡಿದ್ದರು . ಭದ್ರ ವಾದ ಬುನಾದಿ ಹಾಕಿದ್ದು . ದಾದಾ.
ಸೈಮನ್ ಫೆರ್ನಾಂಡಿಸ್: ಹೇಳಿದ್ದು ಅರ್ಧ ಸತ್ಯ. ಅದಕ್ಕೂ ಮೊದಲು ಗೆಲುವಿನತ್ತ ಅಂಬೆ ಗಾಲಿಡಲು ಎಷ್ಟೋ ಹಿರಿಯ ಕ್ರಿಕೆಟಿಗರ ಶ್ರಮವಿದೆ ಎಂಬುದು ಮರೆಯಬಾರದು.
ಮಂಜುನಾಥ್ ಜಿಕೆ: ಹೌದು ನಿಜ. ದಾದ ನಾಯಕನಾಗಿದ್ದ ಸಮಯದಲ್ಲಿ ಉತ್ತಮ ಆಟಗಾರರಿಗೆ ಅವಕಾಶ ಮಾಡಿಕೊಟ್ಟರು. ಬಿಸಿಸಿಐಗೂ ಉತ್ತಮ ಆದಾಯ ಬಂತು ಮತ್ತು ಕ್ರಿಕೆಟ್ ತಂಡದ ಭವಿಷ್ಯ ಗಟ್ಟಿಯಾಯಿತು. ಸೆಹ್ವಾಗ್, ಯುವರಾಜ್, ಹರ್ಭಜನ್, ಧೋನಿಯಂತವರಿಗೆ ಅವಕಾಶ ಕೊಟ್ಟರು.
ವಿಜಯರಾಘವನ್ ಶ್ರೀನಿವಾಸಾಚಾರ್: ಅಜರುದ್ದೀನ್, ಕುಂಬ್ಳೆ, ತೆಂಡೂಲ್ಕರ್, ಅಜಿತ್ ವಾಡೇಕರ್, ಸುನೀಲ್ ಗಾವಸ್ಕರ್ ಸಮಯದಲ್ಲೂ ಭಾರತ ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.