Advertisement

ಪಾಕ್ ವಿರುದ್ಧ ಟೀಂ ಇಂಡಿಯಾ ಗೆಲುವಿಗೆ 238 ರನ್ನುಗಳ ಗುರಿ

08:30 PM Sep 23, 2018 | Karthik A |

ದುಬೈ: ಏಷಿಯಾ ಕಪ್ ಕ್ರೀಡಾಕೂಟದ ‘ಸೂಪರ್ ಫೋರ್’ ಹಣಾಹಣಿಯ ಭಾರತ-ಪಾಕಿಸ್ಥಾನ ನಡುವಿನ ಹೈವೋಲ್ಟೇಜ್ ಹಣಾಹಣಿಯಲ್ಲಿ ಭಾರತ ತಂಡದ ಗೆಲುವಿಗೆ 238 ರನ್ನುಗಳ ಗುರಿ ನಿಗದಿಯಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ಥಾನ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 237 ರನ್ನುಗಳನ್ನು ಕಲೆಹಾಕಿತು.

Advertisement

ಭಾರತ್ ಬಿಗು ಬೌಲಿಂಗ್ ಮತ್ತು ಶಿಸ್ತಿನ ಫೀಲ್ಡಿಂಗ್ ಎದುರು ರನ್ ಗಳಿಸಲು ಪಾಕಿಸ್ಥಾನ ಬ್ಯಾಟ್ಸ್ ಮನ್ ಗಳು ಪರದಾಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಪಾಕ್ ಕಪ್ತಾನ ಸರ್ಫರಾಜ್ ಅಹಮ್ಮದ್ (44) ಮತ್ತು ಅನುಭವಿ ಆಟಗಾರ ಶೋಯಬ್ ಮಲಿಕ್ (78) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಪಾಕಿಸ್ಥಾನ ಗೌರವಯುತ ಮೊತ್ತವನ್ನು ಪೇರಿಸುವಂತಾಯಿತು. ಉಳಿದಂತೆ ಪಾಕಿಸ್ಥಾನ ಪರ ಫಖಾರ್ ಝಮಾನ್ (31), ಆಸಿಫ್ ಅಲಿ (30) ಮಾತ್ರವೇ ಉತ್ತಮ ಆಟವಾಡಿದರು.

ಭಾರತದ ಪರ ಸ್ಪಿನ್ನರ್ ಗಳಾದ ಚಾಹಾಲ್ ಮತ್ತು ಕುಲದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಗಳನ್ನು ಪಡೆದರು. ಇನ್ನೊಂದು ವಿಕೆಟ್ ರನೌಟ್ ರೂಪದಲ್ಲಿ ಬಂತು.



Advertisement

Udayavani is now on Telegram. Click here to join our channel and stay updated with the latest news.

Next