Advertisement

TT ಬದಲು Td ಲಸಿಕೆ ನೀಡುವುದು

12:30 AM Jan 13, 2019 | |

1998ರಿಂದಲೇ ವಿಶ್ವ ಆರೋಗ್ಯ ಸಂಸ್ಥೆಯು  TT ಲಸಿಕೆ ಬದಲು ಖಛ ನೀಡಲು ಶಿಫಾರಸು ಮಾಡಿದೆ. TT ಲಸಿಕೆಯ ದಾಖಲೆ ವಿವರಗಳನ್ನು 2017ರಲ್ಲಿ  ವಿಶ್ವ ಆರೋಗ್ಯ ಸಂಸ್ಥೆಯು ಪುನರುಚ್ಚರಿಸಿತು. 2002 ಮತ್ತು 2006ರಲ್ಲಿ  ತಜ್ಞರ ಸಲಹಾ ಸಮಿತಿ (NTAGI)  ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ಸಹ ಗರ್ಭಿಣಿಯರನ್ನು ಸೇರಿಸಿ ಎಲ್ಲ ವಯಸ್ಸಿನವರಿಗೆ TT ಲಸಿಕೆ ಬದಲಿಗೆ Td ಲಸಿಕೆ ನೀಡುವಂತೆ ಶಿಫಾರಸು ಮಾಡಿದೆ. ಅದರಂತೆಯೇ ಭಾರತದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ  TT ಲಸಿಕೆ ಬದಲಿಗೆ Td ಲಸಿಕೆ ಬಳಸುವುದನ್ನು ಜಾರಿಗೊಳಿಸಲಾಗುತ್ತಿದೆ. ಪ್ರಪಂಚದ 133 ದೇಶಗಳು TT ಬದಲಾಗಿ  Td ಲಸಿಕೆ ಈಗಾಗಲೇ ನೀಡುತ್ತಿವೆ. 

Advertisement

Td ನೀಡುತ್ತಿರುವ  ಉದ್ದೇಶ 
ಲಸಿಕೆಗಳಿಂದ ತಡೆಗಟ್ಟಬಹುದಾದ ಕಾಯಿಲೆಗಳ ಕಣ್ಗಾವಲು ಅಂಕಿ ಅಂಶಗಳ ಪ್ರಕಾರ ಅಂಕಿ ನಮ್ಮ ದೇಶದಲ್ಲಿ ಬಹಳಷ್ಟು ಡಿಪ್ತಿàರಿಯಾ ಪ್ರಕರಣಗಳು 5ನೇ ವಯಸ್ಸು ಮತ್ತು ಮೇಲ್ಪಟ್ಟ ವಯಸ್ಸಿನ ಗುಂಪಿಗೆ ಕ್ರಮವಾಗಿ 77% ಮತ್ತು 69% 2017 ಮತ್ತು 2018ರಲ್ಲಿ ಕಂಡು ಬಂದಿದೆ. ಅಂದಾಜು 2/3ರಷ್ಟು ಲಸಿಕೆ ಪಡೆದಿಲ್ಲದ  5ನೇ ವಯಸ್ಸು ಮತ್ತು ಮೇಲ್ಪಟ್ಟ  ವಯಸ್ಸಿನ ಮಕ್ಕಳಲ್ಲಿ ಕಂಡು ಬಂದಿದೆ. 2016ರಲ್ಲಿ  ಕೇರಳದಲ್ಲಿ  ಡಿಪ್ತಿàರಿಯಾ ಸಾಂಕ್ರಾಮಿಕ ತಲೆದೋರಿದಾಗ 10ಕ್ಕಿಂತಲೂ ಹೆಚ್ಚಿನ ವಯಸ್ಸಿನವರಲ್ಲಿ ಅಂದಾಜು 79% ಪ್ರಕರಣಗಳು ಕಂಡು ಬಂದವು. 1999ರಿಂದಲೂ Tetanus ನಿಂದಾಗುವ ಮರಣಗಳು 88%ಕ್ಕಿಂತಲೂ ಕಡಿಮೆಯಾಗಿವೆ. ಆದರೆ ಡಿಪ್ತಿàರಿಯಾದಿಂದ ತಲೆದೋರುವ ಪ್ರಕರಣಗಳು ಹೆಚ್ಚುತ್ತವೆ. ಇದರಿಂದ ಡಿಪ್ತಿàರಿಯಾದಿಂದ ಸಂರಕ್ಷಣೆ ಕಾರ್ಯದಲ್ಲಿ ಅಂತರ ಇದೆ ಎಂದು ಬಿಂಬಿಸುತ್ತದೆ.

ಪೂರ್ವ ಯುರೋಪ್‌ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಉಂಟಾದ ಡಿಪ್ತಿàರಿಯಾ ಪ್ರಕರಣಗಳನ್ನು ಗಮನಿಸಿದರೆ ಪ್ರಾರಂಭಿಕ ಈಕಖ ಶಿಶು ಲಸಿಕಾಕರಣದ ಅನಂತರ ಡಿಪ್ತಿàರಿಯಾ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ದೃಢೀಕರಿಸಿತು. ಸಾಂಕ್ರಾಮಿಕ ರೋಗಗಳು ತಲೆದೋರಿದ ಅನುಭವದ ನಂತರ ಈ ವಲಯಗಳ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಿಗೆ ಟಿ.ಡಿ. ಲಸಿಕೆಗೆ ಬದಲಾಯಿಸಲಾಯಿತು ಮತ್ತು  ದೊಡ್ಡ ಮಕ್ಕಳಿಗೆ, ಹದಿಹರೆಯದವರಿಗೆ Td ಬಲವರ್ಧಕ (Booster) ಡೋಸ್‌ ಕೊಡಲು ಪ್ರಾರಂಭಿಸಲಾಯಿತು. ಈ ಪ್ರಕ್ರಿಯೆಯಿಂದ ಪೂರ್ವ ಯುರೋಪ್‌ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಡಿಪ್ತಿàರಿಯಾ ಪ್ರಕರಣಗಳು ಸಾಕಷ್ಟು ಕಡಿಮೆಯಾದವು.


DPT ಶಿಶು ರೋಗ ನಿರೋಧಕತ್ವದ ಪ್ರಾರಂಭಿಕ ಸರಣಿಯು ಅನಂತರ ಡಿಪ್ತಿàರಿಯಾಕ್ಕೆ ಬರಬರುತ್ತಾ ರೋಗ ನಿರೋಧಕತ್ವ ಕಡಿಮೆ ಯಾಗುವುದು ಸಾಬೀತಾಗಿದ್ದು ಮುಂದುವರಿದ ರಕ್ಷಣೆಗೆ  ಬಲವರ್ಧಕ ಡೋಸ್‌ ಆವಶ್ಯಕ.

TT ಬದಲಾಗಿ Td ಲಸಿಕೆಯನ್ನು ಗರ್ಭಿಣಿಯರಲ್ಲಿ  ಶಿಫಾರಸು ಮಾಡಿರುವ ಪ್ರಮುಖ ಕಾರಣಗಳೆಂದರೆ ಖಛ ಲಸಿಕೆಯು ತಾಯಿ ಮತ್ತು ನವಜಾತ ಶಿಶುವಿನಲ್ಲಿ ಕಂಡು ಬರುವ ಧನುರ್ವಾಯು ಹಾಗೂ ಡಿಪ್ತಿàರಿಯಾ ಪ್ರಕರಣಗಳನ್ನು ತಡೆಗಟ್ಟುವುದು. ಪ್ರಸವಪೂರ್ವ ಆರೈಕೆ (ANC) ಸಮಯದಲ್ಲಿ  Td ಲಸಿಕೆ ನೀಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಮತ್ತು ಈವರೆಗೂ ಶಿಫಾರಸು ಮಾಡಲ್ಪಟ್ಟಂತಹ ಬಲವರ್ಧಕ ವರಸೆಯನ್ನು ಯಾವುದೇ ಗರ್ಭಿಣಿಯರು ಪಡೆಯದಿದ್ದ  ಪಕ್ಷದಲ್ಲಿ ಅವರಿಗೆ Td ಲಸಿಕೆ  ದೀರ್ಘ‌ ಕಾಲ ಸಂರಕ್ಷಣೆ ಒದಗಿಸುತ್ತದೆ. Tdಯ ಸಮುದಾಯದಲ್ಲಿ  ಕಡಿಮೆಗೊಳಿಸುತ್ತಿರುವ  ಡಿಪ್ತಿàರಿಯಾ ರೋಗ ನಿರೋಧಕತೆಯನ್ನು ಹೆಚ್ಚಿಸಿ, ಅದಲ್ಲದೆ ಧನುರ್ವಾಯು ಕಾಯಿಲೆಯಿಂದ ಸಮುದಾಯವನ್ನು ರಕ್ಷಣೆ ಮಾಡಿ ಡಿಪ್ತಿàರಿಯಾ ಸಾಂಕ್ರಾಮಿಕತೆಯನ್ನು (epidemic) ಕಡಿಮೆ ಮಾಡುತ್ತದೆ.

ಧನುರ್ವಾಯು (ಟೆಟಾನಸ್‌) ಮತ್ತು ಡಿಪ್ತಿàರಿಯಾ ಕಾಯಿಲೆಗಳ ಹೊರೆ
ಧನುರ್ವಾಯು ತೀವ್ರ ರೀತಿಯ ಸೋಂಕಿನ ಕಾಯಿಲೆಯಾಗಿದ್ದು , ಕ್ಲಾಸ್ಟ್ರೀಡಿಯಮ್‌ ಟೆಟನೈ ಎಂಬ ಬ್ಯಾಕ್ಟೀರಿಯಾದ ಟಾಕ್ಸಿಜೆನಿಕ್‌ ಸ್ಟ್ರೈನ್ಸ್‌ ನಿಂದ ಬರುತ್ತದೆ. ಈ ಕಾಯಿಲೆಯು ಯಾವುದೇ ವಯಸ್ಸಿನಲ್ಲಿಯೂ ಬರಬಹುದು. ತೀವ್ರ ನಿಗಾವಣೆಯ ರೀತಿಯ ಆರೈಕೆ ದೊರೆತರೂ ಪ್ರಕರಣಗಳಲ್ಲಿ  ಮರಣದ ದರ ಹೆಚ್ಚು. ವೈದ್ಯಕೀಯ ಆರೈಕೆ ದೊರೆಯದಿದ್ದರೆ ಪ್ರಕರಣಗಳಲ್ಲಿ  ಮರಣ ಶೇಕಡಾ 100ರನ್ನು ತಲುಪಬಹುದು. 2015ರಲ್ಲಿ  ವರದಿಯಾದ ಎಲ್ಲ ಟೆಟಾನಸ್‌ ಪ್ರಕರಣಗಳಲ್ಲಿ 35% ನವಜಾತ ಶಿಶುಗಳು ಮತ್ತು 65% ದೊಡ್ಡ ಮಕ್ಕಳು ಮತ್ತು ವಯಸ್ಕರರು ಆಗಿದ್ದು ಇದರಲ್ಲಿ  ಸುಮಾರು ಅರ್ಧದಷ್ಟು ಪ್ರಕರಣಗಳು ದಕ್ಷಿಣ ಏಷ್ಯಾದ ದೇಶಗಳಿಗೆ ಸೇರಿವೆ. ಕಾರಿನಿಬ್ಯಾಕ್ಟೀರಿಯಂ ಡಿಪ್ತಿàರಿಯಾದಿಂದ ಉಂಟಾಗುವ ಡಿಪ್ತಿàರಿಯಾ ವಿಶ್ವದಲ್ಲಿ ಅತಿ ಸೋಂಕಿನ ಕಾಯಿಲೆಯಾಗಿದ್ದು, ಇದರಿಂದ ವಿನಾಶಕಾರಿ ಸೋಂಕಿನ ರೋಗಗಳು ಉಂಟಾಗುತ್ತವೆ. ದಕ್ಷಿಣ ಪೂರ್ವ ಏಷ್ಯಾವು ವಿಶ್ವದಲ್ಲಿಯೇ ಅತಿ ಹೆಚ್ಚು ಡಿಪ್ತಿàರಿಯಾ ಪ್ರಕರಣಗಳನ್ನು 2005ರಿಂದ ವರದಿ ಮಾಡುತ್ತಿದೆ. ಭಾರತ ದೇಶವು ದಕ್ಷಿಣ ಪೂರ್ವ ಏಷ್ಯಾ ಭಾಗದಲ್ಲಿ ಇರುವ ಡಿಪ್ತಿàರಿಯಾ ಪ್ರಕರಣಗಳಲ್ಲಿ  3/4 ರಷ್ಟು ಪ್ರಕರಣಗಳನ್ನು ವರದಿ ಮಾಡುತ್ತಿದೆ.

Advertisement

Td ಲಸಿಕೆಯ ಬಗ್ಗೆ  ಧನುರ್ವಾಯು (ಟಿಟಾನಸ್‌) ಮತ್ತು ವಯಸ್ಕ ಡಿಪ್ತಿàರಿಯಾ  (Td) ಲಸಿಕೆಯು ಧನುರ್ವಾಯು ಮತ್ತು ವಯಸ್ಕ ಡಿಪ್ತಿàರಿಯಾ ಸಂಯೋಜಿಸಿದ್ದು ಡಿಪ್ತಿàರಿಯಾ ಆಂಟೀಜಿನ್‌ಗಿಂತಲೂ ಕಡಿಮೆ ಸಾಂದ್ರತೆ ಇರುವ ಡಿಫ್ತಿàರಿಯಾ ಆಂಟೀಜಿನ್‌ (d) ಹೊಂದಿದ್ದು , ದೊಡ್ಡ ಮಕ್ಕಳು ಹಾಗೂ ಗರ್ಭಿಣಿಯರಿಗೆ ಇದನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿಫಾರಸ್ಸು ಮಾಡಿದೆ.

ಈ ಲಸಿಕೆಯನ್ನು  0.5ml ಇಂಟ್ರಾ ಮಸ್ಕಾಲಾರ್‌ ಆಗಿ ತೋಳಿನ ಮೇಲ್ಭಾಗದಲ್ಲಿ  ನೀಡುವಂಥದ್ದು.ಹಾಲಿ ಇರುವ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿರುವ  TT ಲಸಿಕೆಗಳನ್ನು ಮೊದಲು ಉಪಯೋಗಿಸಿ ಅದು ಖಾಲಿಯಾದ ಅನಂತರ Td ಲಸಿಕೆ ಬಳಸಲು ಪ್ರಾರಂಭಿಸುವುದು.

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ  ಮಕ್ಕಳಿಗೆ ಹಾಗೂ ಗರ್ಭಿಣಿಯರಿಗಲ್ಲದೆ ಯಾವುದೇ ವ್ಯಕ್ತಿಯು, ರೋಗಿಯ ದೇಹದಲ್ಲಿ, ಚರ್ಮದಲ್ಲಿ ಉಂಟಾದ ಗಾಯಗಳಿಗೆ, ಇರಿತದ ಗಾಯಗಳಿಗೆ, ಪ್ರಾಣಿಗಳಿಂದ ಕಚ್ಚಿಸಿಕೊಂಡ ಸಂದರ್ಭಗಳಲ್ಲಿ, ಶಸ್ತ್ರಕ್ರಿಯೆ ಮೊದಲು ಸಾಮಾನ್ಯ  TT ಲಸಿಕೆಯನ್ನೆ ನೀಡುವುದು.

ಡಾ| ಅಶ್ವಿ‌ನಿ ಕುಮಾರ್‌ ಗೋಪಾಡಿ 
ಅಡಿಶನಲ್‌ ಪ್ರೊಫೆಸರ್‌
ಕಮ್ಯುನಿಟಿ ಮೆಡಿಸಿನ್‌, ಕೆ.ಎಂ.ಸಿ., ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next