ನವದೆಹಲಿ: ಪ್ರಸಿದ್ಧ ಐಟಿ ಸಂಸ್ಥೆಯಾಗಿರುವ ಟಾಟಾ ಕನ್ಸಲ್‌ಟೆನ್ಸಿ ಸರ್ವೀಸ್(ಟಿಸಿಎಸ್) ಸಂಸ್ಥೆಯು ಈ ಆರ್ಥಿಕ ವರ್ಷದಲ್ಲಿ ಒಟ್ಟು 40,000 ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡಿದೆ.
ಈ ಬಗ್ಗೆ ಸಂಸ್ಥೆಯು ಮಾಹಿತಿ ಕೊಟ್ಟಿದ್ದು, ಸದ್ಯ 2020, 2021 ಮತ್ತು 2022ನೇ ಬ್ಯಾಚಿನ ಎಂ.ಎಸ್‌ಸಿ ಮತ್ತು ಎಂ.ಎ ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದೆ. ಅವರಿಗೆ ಲಿಖೀತ ಪರೀಕ್ಷೆ ಮತ್ತು ಸಂದರ್ಶನ ಇರಲಿದ್ದು, ಅದಕ್ಕಾಗಿ ಏ.20ರವರೆಗೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿಗೆ ಅವಕಾಶ ಕೊಡಲಾಗಿದೆ.
ಇದನ್ನೂ ಓದಿ:ಕೇಬಲ್ ಕಾರ್ ಅಪಘಾತ: ಮೃತರಿಗೆ 25 ಲಕ್ಷ ರೂ. ಪರಿಹಾರ
ಸಂಸ್ಥೆಯು ಕಳೆದ ಆರ್ಥಿಕ ವರ್ಷದಲ್ಲಿ 40,000 ಸಿಬ್ಬಂದಿ ನೇಮಕ ಮಾಡಿಕೊಳ್ಳುವುದಾಗಿ ಹೇಳಿತ್ತು. ಆದರೆ 1 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. ಮಾರ್ಚ್‌ನಲ್ಲಿ ಅಂತ್ಯವಾದ ತ್ತೈಮಾಸಿಕದಲ್ಲೇ 35 ಸಾವಿರಕ್ಕೂ ಅಧಿಕ ಸಿಬ್ಬಂದಿ ನೇಮಕವಾಗಿದ್ದಾರೆ.