Advertisement

ಪಾಲಿಕೆ ವ್ಯಾಪ್ತಿ ಆಸ್ತಿ ತೆರಿಗೆ ಶೇ.5 ರಿಯಾಯಿತಿ

07:03 AM May 29, 2020 | Lakshmi GovindaRaj |

ತುಮಕೂರು: ಕೊರೊನಾ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿ ಯನ್ನು ನೀಡಿ ಸರ್ಕಾರ ಆದೇಶ ನೀಡಿದೆ ಎಂದು ತುಮಕೂರು ಮಹಾನಗರ ಪಾಲಿಕೆ ಮೇಯರ್‌ ಫ‌ರೀದಾಬೇಗಂ ಹೇಳಿದರು. ಪತ್ರಿಕಾ  ಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ತೆರಿಗೆ ಪಾವತಿಗೆ ಮೇ ಅಂತ್ಯ  ದವರೆಗೆ ಅವಕಾಶ ನೀಡಲಾಗಿತ್ತು, ಈಗ ಅದನ್ನು ಜುಲೈ ಅಂತ್ಯದವರೆಗೆ ತೆರಿಗೆ ಪಾವ  ತಿಗೆ ಅವಕಾಶ ನೀಡಿದ್ದು, ಸಾರ್ವಜನಿಕರು ಈ ಯೋಜನೆಯ  ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

Advertisement

ಸರ್ಕಾರಕ್ಕೆ ಮನವಿ: ಪ್ರತಿ ಮೂರು ವರ್ಷಕ್ಕೆ ಆಸ್ತಿ ತೆರಿಗೆ ಹೆಚ್ಚಳವಾಗಬೇಕಿದ್ದು ಅದರಂತೆ ಸ್ಥಾಯಿ ಸಮಿತಿ ಅಧ್ಯಕ್ಷರೊಂದಿಗೆ ಚರ್ಚಿಸಿ ಒಪ್ಪಿಕೊಂಡಿದ್ದೇವೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸದಸ್ಯರು ಒತ್ತಾಯ ಮಾಡಿದ್ದರು. ಶಾಸಕರು, ಸಂಸದರು ಈ ಬಗ್ಗೆ ಮಾತನಾಡುವ ಭರವಸೆ ನೀಡಿದ್ದರು, ಶೇ.15ರಷ್ಟು ತೆರಿಗೆ ಹೆಚ್ಚಳವನ್ನು ಮುಂದೂಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಸರ್ಕಾರದಿಂದ ಸೌಲಭ್ಯ ಸಿಕ್ಕಿಲ್ಲ: ತುಮಕೂರು ನಗರದಲ್ಲಿ ಸೀಲ್‌ಡೌನ್‌ ಪ್ರದೇಶಕ್ಕೆ ಯಾವುದೇ ಸೌಲಭ್ಯ ನೀಡಿಲ್ಲ, ಅಲ್ಲಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಅಲ್ಲಿರುವವರಿಗೆ ಕನಿಷ್ಠ ಊಟವನ್ನು ಪೂರೈಕೆ ಮಾಡಲಿಲ್ಲ ಈ  ವರೆಗೆ ಸರ್ಕಾರದಿಂದ ಪಾಲಿಕೆಗೆ ಯಾವುದೇ ಸೌಲಭ್ಯ ದೊರಕಿಲ್ಲ ಎಂದು ಆರೋಪಿಸಿದರು.

ಸ್ಪಂದಿಸದ ಆಯುಕ್ತರು: ಕೊರೊನಾದ ಕಾರಣದಿಂದಾಗಿ ಅಧಿಕಾರಿಗಳಿಗೆ ಪಾಲಿಕೆ ಸದಸ್ಯರು ಸಹಕಾರ ನೀಡುತ್ತಿದ್ದಾರೆ ಆದರೆ ಆಯುಕ್ತರಿಗೆ ಮೇಯರ್‌ ಕರೆ ಮಾಡಿದರೂ ಪ್ರತಿಕ್ರಿಯಿಸುವುದಿಲ್ಲ ಇದರಿಂದಾಗಿ ಕೆಲಸ ಮಾಡಲು ಆಗುತ್ತಿಲ್ಲ  ಎಂದರು. ಉಪ ಮೇಯರ್‌ ಶಶಿಕಲಾ, ಮಹೇಶ್‌, ಕುಮಾರ್‌, ಇನಾಯತ್‌ವುಲ್ಲಾಖಾನ್‌ ಇದ್ದರು.

ಪಾಲಿಕೆಗೆ ಅನುದಾನ ಬಂದಿಲ್ಲ: ನಗರದಲ್ಲಿ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸೀಲ್‌ಡೌನ್‌ ಮಾಡಿರುವ ಪ್ರದೇಶದಲ್ಲಿ ವಾಸಿಸುವವರಿಗೆ ದುಡಿಮೆ ಇಲ್ಲ, ಅಲ್ಲಿರುವವರಿಗೆ ಅಗತ್ಯ ಸೌಲಭ್ಯಗಳನ್ನು ನೀಡದೇ ಹೋದರೆ ಜೀವನ ನಡೆಸುವುದು ಹೇಗೆ? ದುಡಿಮೆ ಇಲ್ಲದ ಮೇಲೆ ಜನರು ಬದುಕುವುದು ಹೇಗೆ ಪ್ರಶ್ನಿಸಿರುವ ಮೇಯರ್‌, ಜನರು ಸುಮ್ಮನೆ ಜನಪ್ರತಿನಿಧಿಗಳ ಮೇಲೆ ಆರೋಪಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಯಾವುದೇ ಅನುದಾನವನ್ನು ಪಾಲಿಕೆಗೆ ಮಾತ್ರ ಅಲ್ಲ, ಜಿಲ್ಲಾಡಳಿತಕ್ಕೂ ನೀಡಿಲ್ಲ ಎಂದು ಮೇಯರ್‌ ಹೇಳಿದರು.

Advertisement

ಆಯುಕ್ತರು ಪಾಲಿಕೆಯಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಕೆಳಹಂತದ ಅಧಿಕಾರಿಗಳು ಸಮಯ ವ್ಯರ್ಥ ಮಾಡುತ್ತಿದ್ದು, ಪಾಲಿಕೆ ಆಡಳಿತ ಸರಾಗವಾಗಿಲ್ಲ. ಸ್ಲಂಗಳಲ್ಲಿ ಯುಜಿಡಿ ಕೆಲಸ ನಡೆಯುತ್ತಿಲ್ಲ. ಪಾಲಿಕೆ ಸದಸ್ಯರು ಸಂಪರ್ಕಿಸಿದರೂ ಆಯುಕ್ತರು ಸಿಗುತ್ತಿಲ್ಲ.
-ಫ‌ರೀದಾ ಬೇಗಂ, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next