Advertisement

ಟ್ವಿಟ್ಟರ್ ಪ್ರಭಾವಿಗಳ ಪಟ್ಟಿಯಲ್ಲಿ ಮೋದಿಗೆ 2ನೇ ಸ್ಥಾನ : ಮೊದಲ ಸ್ಥಾನದಲ್ಲಿ ಆ ಗಾಯಕಿ

11:26 AM Nov 10, 2021 | Team Udayavani |

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಎಲ್ಲೆಲ್ಲೂ ಜನಪ್ರಿಯತೆ ಹೊಂದಿದ್ದಾರೆ ಎಂಬುದು ಗೊತ್ತಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಅವರ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಇದೀಗ ವರದಿಯೊಂದು ಬಂದಿದ್ದು, ಆ ವರದಿಯಲ್ಲಿ ಟ್ವಿಟ್ಟರ್ ನಲ್ಲಿ 50 ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ಪ್ರಧಾನಿ ಮೋದಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Advertisement

ಹೌದು ಗ್ರಾಹಕ ಗುಪ್ತಚರ ಕಂಪನಿ ಬ್ರಾಂಡ್ವಾಚ್ (consumer intelligence company Brandwatch) ವರದಿಯೊಂದನ್ನು ಮಾಡಿದೆ. ಈ ವರದಿ ಪ್ರಕಾರ ಟ್ವಿಟ್ಟರ್ ನಲ್ಲಿ 50 ಪ್ರಭಾವಿ ವ್ಯಕ್ತಿಗಳಲ್ಲಿ ಅಮೇರಿಕನ್ ಗಾಯಕಿ ಟೇಲರ್ ಸ್ವಿಫ್ಟ್ (American singer Taylor Swift) ಮೊದಲ ಸ್ಥಾನ ಪಡೆದುಕೊಂಡರೆ, ಭಾರತದ ಪ್ರಧಾನ ಮಂತ್ರಿ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ.

ಮತ್ತೊಂದು ವಿಶೇಷ ಅಂದ್ರೆ ಕ್ರಿಕೆಟ್ ದಂತಕಥೆ, ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ 35ನೇ ಸ್ಥಾನದಲ್ಲಿದ್ದಾರೆ. ಅಮೇರಿಕನ್ ನಟರಾದ ಡ್ವೇನ್ ಜಾನ್ಸನ್, ಲಿಯೊನಾರ್ಡೊ ಡಿ ಕ್ಯಾಪ್ರಿಯೊ ಹಾಗೂ ಯುನೈಟೆಡ್ ಸ್ಟೇಟ್ಸ್‌ನ ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಅವರಿಗಿಂತ ಮೇಲಿದ್ದಾರೆ.

India’s Sachin Tendulkar achonolodge the crowd after he scored century against England in the World Cup one day match at Chinnaswamy stadium in Bangalore on Sunday. Photo Srikanta Sharma R.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next