Advertisement

ಟ್ಯಾಕ್ಸಿ ವಾಹನಗಳಿಗೆ ಬಾಡಿಗೆ ಇಲ್ಲದೇ ಸಂದಿಗ್ಧ ಸ್ಥಿತಿ

11:12 PM Oct 18, 2019 | Sriram |

ಪೆರ್ಲ: ಟ್ಯಾಕ್ಷಿಯು ಜನರಿಗೆ ಯಾತ್ರಾ ಸ್ಥಳಗಳಿಗೆ ತೆರಳಲು,ಪ್ರಯಾಣಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತಿವೆ.ಇಂದು ಪ್ರತಿಯೊಂದು ಪಟ್ಟಣಗಳಲ್ಲಿಯು ರಿಕ್ಷಾದಿಂದ ಹಿಡಿದು ಬಸ್ಸಿನವರೆಗೆ ವಿವಿಧ ಕಿರು ಹಾಗೂ ಘನ ಟ್ಯಾಕ್ಷಿ ವಾಹನಗಳು ಬಾಡಿಗೆಗೆ ಲಭ್ಯವಿವೆ.ಆದರೆ ಇಂದು ಈ ಉದ್ಯಮವು ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದೆ.ಬಾಡಿಗೆಗೆ ಹೋಗುವ ಕಾರು,ಜೀಪುಗಳು ಸರಿಯಾದ ಬಾಡಿಗೆ ಇಲ್ಲದೆ ಚಾಲಕರು ಮತ್ತು ಮಾಲಕರು ಸಂದಿಗಾœವಸ್ತೆಯಲ್ಲಿದ್ದಾರೆ.

Advertisement

ಹೆಚ್ಚಾಗಿ ಬಾಡಿಗೆ ಇಲ್ಲದಿರುವ ಸ್ಥಿತಿ ಜೀಪು,ಕಾರು ಮತ್ತು ಬಸ್ಸುಗಳಿಗಾಗಿದೆ.ಕೆಲ ವರ್ಷಗಳ ಮೊದಲು ದಿನದಲ್ಲಿ 5,6 ಸ್ಥಳಗಳಿಗೆ ಬಾಡಿಗೆ ಲಭಿಸಿತ್ತಿದ್ದರೆ ಇಂದು ವಾರದಲ್ಲಿ ಕೆಲವೊಮ್ಮೆ ಕೇವಲ ಒಂದು ಬಾಡಿಗೆ ಲಭಿಸುವ ಪರಿಸ್ಥಿತಿ.ಇದಕ್ಕೆ ಪ್ರಧಾನ ಕಾರಣ ಖಾಸಗಿ ವಾಹನಗಳು ಸಮಾನಾಂತರ ಬಾಡಿಗೆ ನಡೆಸುವುದಾಗಿದೆ ಎಂದು ಪೆರ್ಲ ಪೇಟೆಯಲ್ಲಿ ಸುಮಾರು 26 ವರ್ಷಗಳಿಂದ ಟ್ಯಾಕ್ಷಿ ಓಡಿಸುತ್ತಿರುವ ಸುರೇಶ್‌ ಪೆರ್ಲ ಹೇಳುತ್ತಾರೆ.ಖಾಸಗಿಯವರು ನಿಗದಿತ ಬಾಡಿಗೆಯ ಅರ್ಧ ದರಕ್ಕೆ ಅಥವಾ ಅದಕ್ಕಿಂತಲೂ ಕಡಿಮೆ ಮತ್ತು ವೈಟಿಂಗ್‌ ಚಾರ್ಜ್‌ ಇಲ್ಲದೆ ಬಾಡಿಗೆ ನಡೆಸುತ್ತಾರೆ.

ಜತೆಗೆ ತೆರಿಗೆ ಕಟ್ಟದಿರುವುದರಿಂದ ಸರಕಾರದ ಬೊಕ್ಕಸಕ್ಕೂ ನಷ್ಟ .ಆದರೆ ಇವರು ವಿಮೆ ಸುರಕ್ಷೆ ಇಲ್ಲದೇ ಬಾಡಿಗೆ ನಡೆಸುವುದರಿಂದ ಯಾವುದಾದರು ದುರಂತ,ಅಪಘಾತ ಸಂಭವಿಸಿದರೆ ಯಾತ್ರಿಕರಿಗೆ ವಿಮೆ ಸೌಲಭ್ಯ ಮೊದಲಾದ ಯಾವುದೇ ಸುರಕ್ಷೆಯು ಲಭಿಸದು.

ಕೆಲವು ಖಾಸಗಿ ವಾಹನಗಳು ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ.ಅದೂ ವಾಹನದ ನಿರ್ದಿìಷ್ಟ ಅಳತೆಗಿಂತಲೂ ಹೆಚ್ಚಿನ ಮಕ್ಕಳನ್ನು ವಾಹನದಲ್ಲಿ ಕರೆದು ಕೊಂಡು ಹೋಗುತ್ತಾರೆ ಎಂದು ಹೇಳುತ್ತಾರೆ.ಸುಮಾರು 5,6ಲಕ್ಷ ಸಾಲ ಮಾಡಿ ವಾಹನ ಖರೀದಿಸಿ,ಟ್ಯಾಕ್ಷಿಯನ್ನು ಬಾಡಿಗೆಗೆ ಇಟ್ಟರೆ ಬಾಡಿಗೆ ಇಲ್ಲದೆ ಸಾಲಕಟ್ಟಲು ಸಾಧ್ಯವಾಗದೆ ವಾಹನ ಜಪ್ತಿ ಮಾಡಿ ಲೋನ್‌ ನೀಡಿದ ಸಂಸ್ಥೆಯವರು ಕೊಂಡು ಹೋಗುತ್ತಾರೆ. ಇದರೊಂದಿಗೆ ಜೀವನ ನಿರ್ವವಹಣೆಗೂ ಕಷ್ಟಪಡುವ ಪರಿಸ್ಥಿತಿ.

ವರ್ಷದಲ್ಲಿ ಕೇರಳ ರಾಜ್ಯ ಸರಕಾರಕ್ಕೆ ಟ್ಯಾಕ್ಸ್‌ ಸುಮಾರು 5000 ಸಾವಿರ ರೂಪಾಯಿ ಆದರೆ ಕರ್ನಾಟಕ ಸರಕಾರಕ್ಕೆ 15000 ಸಾವಿರದಷ್ಟು ಟ್ಯಾಕ್ಸ್‌ ಕಟ್ಟ ಬೇಕು.ವಿಮೆ ಕಂತು ಸುಮಾರು 25ಸಾವಿರ ಕಟ್ಟಬೇಕು ಎಂದು ಸುಮಾರು 25ವರ್ಷಗಳಿಂದ ಪೆರ್ಲದಲ್ಲಿ ಟ್ಯಾಕ್ಷಿ ಓಡಿಸುತ್ತಿರುವ ಸತೀಶ್‌ ಅಮ್ಮೆಕ್ಕಳ ಹೇಳುತ್ತಾರೆ.ಜತೆಗೆ ದುರಸ್ತಿಗಾಗಿ, ಬಿಡಿಭಾಗಗಳ ದರ ಏರಿವಿಕೆಯಿಂದ ಅದೂ ಹೊರೆಯಾಗಿ ಪರಿಣಮಿಸುತ್ತದೆ.ವಾರದಲ್ಲಿ ಸರಾಸರಿ ಐದು ದಿನವಾದರೂ ಬಾಡಿಗೆ ಇರಬೇಕಾದ ಸ್ಥಿತಿಯಲ್ಲಿ ಈಗ ತಿಂಗಳಲ್ಲಿ ಮೂರೋ,ನಾಲ್ಕೋ ಬಾಡಿಗೆ ಮಾತ್ರ ಲಭಿಸುವ ಪರಿಸ್ಥಿತಿ ಎನ್ನುತ್ತಾರೆ.ಹೊರರಾಜ್ಯದ ಕೆಲ ಸಾರಿಗೆ ಅಧಿಕಾರಿಗಳು ತಪಾಸಣೆಯ ನೆಪ ಹೇಳಿ ಹಣ ಪಡೆಯುವುತ್ತಾರೆ. ಖಾಸಗಿ ವಾಹನಗಳ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೂಡ ಇದರ ಬಗ್ಗೆ ಗಮನ ನೀಡುವುದಿಲ್ಲ ಎಂದು ಹೇಳುತ್ತಾರೆ.

Advertisement

ಖಾಸಗಿ ವಲಯದ ಸ್ವದ್ಯೋಗಕ್ಕೆ ಸರಕಾರ ಉತ್ತೇಜನ ನೀಡುವುದರೊಂದಿಗೆ ಈಗ ವಿವಿಧ ಕ್ಷೇತ್ರಗಳಲ್ಲಿ ಸ್ವದ್ಯೋಗದ ಮೂಲಕ ಜೀವನ ನಡೆಸುತ್ತಿರುವ ಜನರಿಗೆ ಅವರ ಕಷ್ಟಗಳನ್ನು ಅರಿತು ಸ್ಪಂದಿಸ ಬೇಕಾದ್ದು ಸರಕಾರದ ಕರ್ತವ್ಯ. ವರ್ಷದಿಂದ ವರ್ಷಕ್ಕೆ ತೆರಿಗೆ ಹಣ ಏರಿಸಿದರೆ ಸಾಲದು.ಅದರಿಂದ ಸರಕಾರಕ್ಕೆ ಲಭಿಸುವುದು ಲಭಿಸುತ್ತದೆ.

ಆದರೆ ಕಾಲಕ್ಕೆ ತಕ್ಕಂತೆ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾದರೆ ಅದರ ಬಗ್ಗೆ ಗಮನ ಹರಿಸಿ ಸ್ವದ್ಯೋಗ ಉದ್ಯಮ ಉಳಿಸುವತ್ತ ಕೂಡ ಸಂಬಂಧಪಟ್ಟವರು ಗಮನ ನೀಡ ಬೇಕು.ತಜ್ಞರ ಸಮಿತಿಯಿಂದ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.ಅದೇ ರೀತಿ ಉತ್ತಮ ದರ್ಜೆಯ ರಸ್ತೆ ನಿರ್ಮಾಣವು ಸರಕಾರದ ಕರ್ತವ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next